ಭಾರತದಲ್ಲಿ ಬಿಡುಗಡೆಯಾಗಲಿರುವ 5 ಅತ್ಯುತ್ತಮ ಎಲೆಕ್ಟ್ರಿಕ್ ಕಾರು!

By Web DeskFirst Published Jul 7, 2019, 5:41 PM IST
Highlights

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. GST ಕಡಿತ, ಆದಾಯ ತೆರಿಗೆಯಲ್ಲಿ ವಿನಾಯಿತಿ, ಸಬ್ಸಡಿಯಿಂದ ಎಲೆಕ್ಟ್ರಿಕ್ ಕಾರಿನ ಬೆಲೆ ಕಡಿಮೆಯಾಗಲಿದೆ. ಬಜೆಟ್ ಬೆನ್ನಲ್ಲೇ ಹಲವು ಎಲೆಕ್ಟ್ರಿಕ್ ಕಾರುಗಳು ಭಾರತದಲ್ಲಿ ಬಿಡುಗಡೆಯಾಗಲಿವೆ. ಬಿಡುಗಡೆಯಾಗಲಿರುವ ಅತ್ಯುತ್ತಮ 5 ಎಲೆಕ್ಟ್ರಿಕ್ ಕಾರಿನ ವಿವರ ಇಲ್ಲಿದೆ.

ನವದೆಹಲಿ(ಜು.07): ಕೇಂದ್ರ ಸರ್ಕಾರದ ಬಜೆಟ್ ಬಳಿಕ ಇದೀಗ ಭಾರತದಲ್ಲಿ ಎಲೆಕ್ಟ್ರಿಕ್ ವಾಹನದತ್ತ ಜನರು ಚಿತ್ತ ಹರಿಸಿದ್ದಾರೆ. ಎಲೆಕ್ಟ್ರಿಕ್ ಕಾರಿನ ಮೇಲಿನ ಜಿಎಸ್‌ಟಿ ತೆರಿಗೆಯನ್ನು  12% ರಿಂದ 5%ಕ್ಕೆ ಇಳಿಸಲಾಗಿದೆ. ಇನ್ನು ಎಲೆಕ್ಟ್ರಿಕ್ ಕಾರು ಖರೀದಿಸೋ ಗ್ರಾಹಕರ ಆದಾಯ ತೆರಿಗೆಯಲ್ಲಿ 1.5 ಲಕ್ಷ ರೂಪಾಯಿ ವಿನಾಯಿತಿ ನೀಡಲಾಗಿದೆ. ಈ ಮೂಲಕ ಎಲೆಕ್ಟ್ರಿಕ್ ವಾಹನ ಬಳಕೆಗೆ ಹೆಚ್ಚಿನ ಉತ್ತೇಜನ ನೀಡಲಾಗಿದೆ. ಬಜೆಟ್‌ನಿಂದಾಗಿ ಎಲೆಕ್ಟ್ರಿಕ್ ವಾಹನ ಬಲೆ ಕಡಿಮೆಯಾಗಲಿದೆ.

ಬಜೆಟ್ ಬೆನ್ನಲ್ಲೇ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್, ಬೈಕ್, ಕಾರು ಬಿಡುಗಡೆಯಾಗುತ್ತಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ಅತ್ಯುತ್ತಮ 5 ಎಲೆಕ್ಟ್ರಿಕ್ ಕಾರು ವಿವರ ಇಲ್ಲಿದೆ.

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು
ಬೆಲೆ: 20 ರಿಂದ 25 ಲಕ್ಷ ರೂಪಾಯಿ(ಅಂದಾಜು)

ಆಡಿ ಇ ಟ್ರಾನ್ ಎಲೆಕ್ಟ್ರಿಕ್ ಕಾರು
ಬೆಲೆ: 1.15 ಕೋಟಿ(ಎಕ್ಸ್ ಶೋ ರೂಂ)

MG EZS ಎಲೆಕ್ಟ್ರಿಕ್ ಕಾರು
ಬೆಲೆ:  20 ಲಕ್ಷ ರೂಪಾಯಿ(ಅಂದಾಜು)

ಟಾಟಾ ಅಲ್ಟ್ರೋಝ್ ಎಲೆಕ್ಟ್ರಿಕ್ ಕಾರು
ಬೆಲೆ: 10 ಲಕ್ಷ ರೂಪಾಯಿ(ಅಂದಾಜು)

ಮಾರುತಿ ವ್ಯಾಗನ್‌ಆರ್ ಎಲೆಕ್ಟ್ರಿಕ್ ಕಾರು
ಬೆಲೆ: 10 ಲಕ್ಷ ರೂಪಾಯಿ(ಅಂದಾಜು)

click me!