ಭಾರತದಲ್ಲೀಗ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ದುಬಾರಿ ಕಾರುಗಳಿಂದ ಹಿಡಿದು ಕಡಿಮೆ ಬೆಲೆಯ ಕಾರುಗಳಲ್ಲಿ AMT ಸೌಲಭ್ಯವಿದೆ. ಭಾರತದಲ್ಲಿರುವ ಕಡಿಮೆ ಬೆಲೆಯ AMT ಕಾರುಗಳ ವಿವರ ಇಲ್ಲಿದೆ.
ನವದೆಹಲಿ(ಜೂ.23): ಕೆಲ ವರ್ಷಗಳ ಹಿಂದೆ ಆಟೋಮ್ಯಾಟಿಕ್ (AMT) ಸೌಲಭ್ಯಗಳು ದುಬಾರಿ ಕಾರುಗಳಲ್ಲಿ ಮಾತ್ರ ಲಭ್ಯವಿತ್ತು. ಆದರೆ ಈಗ ಹಾಗಿಲ್ಲ. ಎಂಟ್ರಿ ಲೆವೆಲ್ ಕಾರಿನಲ್ಲೂ AMT ಟ್ರಾನ್ಸ್‌ಮಿಶನ್ ಲಭ್ಯವಿದೆ. ಈ ರೀತಿ ಕಡಿಮೆ ಬೆಲೆ ಹಾಗೂ ಎಂಟ್ರಿ ಲೆವೆಲ್ ಕಾರುಗಳಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಟ್ರೆಂಡ್ ಸೆಟ್ ಮಾಡಿದ ಹೆಗ್ಗಳಿಕೆ ಮಾರುತಿ ಸುಜುಕಿ ಸೆಲೆರಿಯೋ ಕಾರಿಗೆ ಸಲ್ಲಲಿದೆ.
ಇದನ್ನೂ ಓದಿ: ನಾವಿಬ್ಬರು-ನಮಗಿಬ್ಬರು;ಕಾರಿಗೂ ಬರಲಿದೆ ಫ್ಯಾಮಿಲಿ ಪ್ಲಾನಿಂಗ್!
undefined
ಭಾರತದಲ್ಲಿ ಕಡಿಮೆ ಬೆಲೆಗೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿರುವ ಹಲವು ಕಾರುಗಳಿವೆ. ಇದರಲ್ಲಿ ಅತ್ಯುತ್ತಮ AMT ಕಾರುಗಳ ವಿವರ ಇಲ್ಲಿದೆ.
ರೆನಾಲ್ಟ್ ಕ್ವಿಡ್ AMT
ಬೆಲೆ: 4.35 ಲಕ್ಷದಿಂದ 4.63 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಮೈಲೇಜ್: 24.04 kmpl
ಮಾರುತಿ ಸುಜುಕಿ ಅಲ್ಟೋ K10 AMT
ಬೆಲೆ: 4.53 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಮೈಲೇಜ್: 24.07 kmpl.
ಮಾರುತಿ ಸುಜುಕಿ ಸೆಲೆರಿಯೋ AMT
ಬೆಲೆ: 4.97 ಲಕ್ಷದಿಂದ 5.40 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಮೈಲೇಜ್: 23.1 kmpl
ಟಾಟಾ ಟಿಯಾಗೊ AMT
ಬೆಲೆ: 5.04 ಲಕ್ಷದಿಂದ 5.63 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಮೈಲೇಜ್: 23.8 kmpl
ಹ್ಯುಂಡೈ ಸ್ಯಾಂಟ್ರೋ AMT
ಬೆಲೆ: 5.18 ಲಕ್ಷದಿಂದ 5.46 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಮೈಲೇಜ್: 20.3 kmpl