ಸ್ಕೂಟರ್ ಒಳಗಡೆ ನಾಗಣ್ಣ- ಹಾವಿನ ರಕ್ಷಣೆಗಾಗಿ ವಾಹನ ಬಿಚ್ಚಿದ ಮಾಲೀಕ!

By Web Desk  |  First Published Jun 21, 2019, 9:59 PM IST

ಹೊಂಡಾ ಆಕ್ಟಿವಾ ಸ್ಕೂಟರ್ ಒಳಗಡೆ ಸೇರಿಕೊಂಡ  ನಾಗರ ಹಾವನ್ನು ಹೊರತೆಗೆಯಲು ಮಾಲೀಕ ಸ್ಕೂಟರ್‌ನ್ನೇ ಬಿಚ್ಚಿದ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ನಾಗರ ಹಾವಿನ ಸ್ಕೂಟರ್ ಸವಾರಿ ಹೇಗಿತ್ತು? ಇಲ್ಲಿದೆ ವಿವರ.


ಬೆಂಗಳೂರು(ಜೂ.21): ಪಾರ್ಕ್ ಮಾಡಿದ ವಾಹನ ತೆಗೆಯುವಾಗ ಎಚ್ಚರ ವಹಿಸುವುದು ಅಗತ್ಯ. ಕಾರಣ ಹಾವು ನಿಲ್ಲಿಸಿದ ವಾಹನದೊಳಗೆ ಸೇರಿಕೊಳ್ಳುವುದು ಸಾಮಾನ್ಯ. ಅದೆಷ್ಟೋ ಬಾರಿ ಅರ್ಧ ದಾರಿ ತಲುಪಿದಾಗ ಹೆಡೆ ಬಿಚ್ಚಿದ ಊದಾಹರಣೆಗಳಿವೆ. ಇದೀಗ ಬೆಂಗಳೂರಿನ ಕಾಚರಕನಹಳ್ಳಿಯಲ್ಲಿ  ಸ್ಕೂಟರ್ ಒಳಗೆ ಮರಿ ನಾಗರ ಹಾವೊಂದು ಸೇರಿಕೊಂಡ ಘಟನೆ ನಡೆದಿದೆ.

ಇದನ್ನೂ ಓದಿ: ಸ್ಕೂಟರ್ ಏರಿ ಅರ್ಧ ದಾರಿ ತಲುಪಿದಾಗ ಹೆಡೆ ಬಿಚ್ಚಿದ ನಾಗಣ್ಣ!

Tap to resize

Latest Videos

ಹೊಂಡಾ ಆಕ್ಟಿವಾ ಸ್ಕೂಟರ್ ಒಳಗೆಡೆ ಮರಿ ನಾಗರ ಹಾವು ಸೇರಿಕೊಂಡು ಮಾಲೀಕನಿಗೆ ಇನ್ನಿಲ್ಲದ ಸಮಸ್ಯೆ ತಂದೊಡ್ಡಿತು. ಮರಿ ನಾಗರ ಹಾವನ್ನು ಹೊರತೆಗೆಯಲು ಮಾಲೀಕ ಸ್ಕೂಟರ್ ಬಿಚ್ಚಬೇಕಾಯಿತು. ಮರಿ ನಾಗರ ಹಾವಾದ ಕಾರಣ ಹೊರ ತೆಗೆಯಲು ಹರಸಾಹಸ ಪಡಬೇಕಾಯಿತು. 

"

ಇದನ್ನೂ ಓದಿ: ಹೆಲ್ಮೆಟ್ ಇಲ್ಲದ ಸವಾರರನ್ನು ಅಡ್ಡಹಾಕಬೇಡಿ, ದಂಡ ಹಾಕಿ-ಮುಖ್ಯಮಂತ್ರಿ!

ಸತತ ಪ್ರಯತ್ನಗಳ ಬಳಿಕ ಮರಿ ನಾಗರ ಹಾವನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ.  ಬಳಿಕ ಮರಿ ನಾಗರಹಾವನ್ನು ಕಾಚರಕನಹಳ್ಳಿ ಸಮೀಪದಲ್ಲಿರುವ ಅರಣ್ಯಕ್ಕೆ ಬಿಡಲಾಗಿದೆ. 

click me!