‘ಫಾಸ್ಟ್ ಟ್ಯಾಗ್’ ಡಿ.1 ರಿಂದ ದೇಶಾದ್ಯಂತ ಕಡ್ಡಾಯ ಜಾರಿ | ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ಡಿ.15 ರಿಂದ 100% ಜಾರಿ | ಅಮೆಜಾನ್, 22 ಬ್ಯಾಂಕ್, 28,500 ಕೇಂದ್ರಗಳಲ್ಲಿ ಫಾಸ್ಟ್ ಟ್ಯಾಗ್ ಲಭ್ಯ | ಬಳಕೆದಾರರಿಗೆ ಕ್ಯಾಶ್‌ಬ್ಯಾಕ್ ಆಫರ್
ಬೆಂಗಳೂರು (ನ. 24): ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸುಗಮ ಸಂಚಾರ, ದಟ್ಟಣೆ ನಿವಾರಣೆ, ಇಂಧನ ಉಳಿತಾಯದ ಉದ್ದೇಶದಿಂದ ಎಲ್ಲ ಟೋಲ್ ಪ್ಲಾಜಾಗಳಲ್ಲಿ ನಗದುರಹಿತ ಶುಲ್ಕ ಪಾವತಿ ವ್ಯವಸ್ಥೆಯಾದ ‘ಫಾಸ್ಟ್ ಟ್ಯಾಗ್’ ಅನ್ನು ಡಿ.1ರಿಂದ ದೇಶಾದ್ಯಂತ ಕಡ್ಡಾಯಗೊಳಿಸಲಾಗಿದ್ದು, ‘ಫಾಸ್ಟ್ ಟ್ಯಾಗ್’ ಹೊಂದಿಲ್ಲದೇ ಇದ್ದರೆ ದ್ವಿಗುಣ ಶುಲ್ಕ ಪಾವತಿಸಬೇಕಾಗುತ್ತದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಪ್ರಧಾನ ವ್ಯವಸ್ಥಾಪಕ ಬಿ.ಟಿ. ಶ್ರೀಧರ್, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೂತನ ವ್ಯವಸ್ಥೆ ಜಾರಿಗೆ ತಂದಿದ್ದು, ಡಿ.15ರಿಂದ ಟೋಲ್ ಪಾವತಿಗಳು ರಾಷ್ಟ್ರೀಯ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹದಡಿ ಫಾಸ್ಟ್ ಟ್ಯಾಗ್ ಮೂಲಕವೇ ನಡೆಯುತ್ತದೆ.
undefined
ಟ್ರಾಫಿಕ್ ದಂಡ ಕಟ್ಟದವರಿಗೆ ಅರೆಸ್ಟ್ ಶಾಕ್; ಪೊಲೀಸರ ಪ್ಲಾನ್‌ಗೆ ಬೆಚ್ಚಿ ಬಿದ್ದ ಸವಾರರು!
ಎಲ್ಲ ಟೋಲ್ ಪ್ಲಾಜಾಗಳಲ್ಲಿ ಒಂದು ಪ್ರವೇಶ ದ್ವಾರವನ್ನು ಹೈಬ್ರಿಡ್ ಆಗಿ ಬಳಸಲಾಗುತ್ತದೆ. ಇದರಲ್ಲಿ ಫಾಸ್ಟ್ ಟ್ಯಾಗ್ ಹಾಗೂ ಇತರೆ ವಿಧಾನದಲ್ಲೂ ಟೋಲ್ ಸ್ವೀಕರಿಸಲಾಗುತ್ತದೆ. ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ಡಿ.1 ರಿಂದ ಶೇ.100 ರಷ್ಟುಜಾರಿಯಾಗಲಿದೆ ಎಂದರು. ಡಿಸೆಂಬರ್ 1 ಗಡುವನ್ನು ಡಿಸೆಂಬರ್ 15ಕ್ಕೆ ವಿಸ್ತರಿಸಲಾಗಿದೆ.
ಫಾಸ್ವ್ ಟ್ಯಾಗ್ ಅನ್ನು ಅಮೆಜಾನ್ ವೆಬ್‌ಸೈಟ್ ಸೇರಿದಂತೆ 22 ಬ್ಯಾಂಕ್‌ಗಳಲ್ಲಿ, 28,500 ಮಾರಾಟ ಕೇಂದ್ರಗಳಿಂದ ಖರೀದಿಸಬಹುದಾಗಿದೆ. ಇದು ಸುಂಕ ವಸೂಲಾತಿ ಕೇಂದ್ರ(ಫಾಸ್ಟ್ ಟ್ಯಾಗ್ ಟೋಲ್ ಪ್ಲಾಜಾ)ದಲ್ಲಿನ ಇಕ್ಕಟ್ಟು, ಅಡಚಣೆ ನಿವಾರಣೆ ಮತ್ತು ದಟ್ಟಣೆಯ ತಡೆರಹಿತ ಸಂಚಾರವನ್ನು ಸುಗಮವಾಗಿಸುತ್ತದೆ. ಕಡಿಮೆ ಇಂಧನ ಬಳಕೆ ಜತೆಗೆ ಮಾಲಿನ್ಯವನ್ನು ತಡೆಯುತ್ತದೆ. ಗ್ರಾಹಕರು ಕ್ಯಾಶ್ ಬ್ಯಾಕ್ ಕೊಡುಗೆಯನ್ನು ಪಡೆಯಬಹುದು ಎಂದರು.
ಟಾಟಾ ಅಲ್ಟ್ರೋಝ್ ಕಾರು ಟೀಸರ್ ಬಿಡುಗಡೆ, ಶೀಘ್ರದಲ್ಲೇ ಬುಕಿಂಗ್ ಆರಂಭ!
‘ಫಾಸ್ವ್ ಟ್ಯಾಗ್’ ಅನ್ನು ಮೊಬೈಲ್‌ನಲ್ಲಿ ‘ಮೈ ಫಾಸ್ಟ್ ಟ್ಯಾಗ್ ಆ್ಯಪ್’ ಮತ್ತು ಬ್ಯಾಂಕಿನ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಫಾಸ್ವ್ ಟ್ಯಾಗ್ ಅಪ್ಲಿಕೇಶನ್‌ದಲ್ಲಿ ನೆಟ್ ಬ್ಯಾಂಕಿಂಗ್‌ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್, ಯುಪಿಐ ಮತ್ತು ಇತರೆ ಜನಪ್ರಿಯ ಪಾವತಿ ವಿಧಾನಗಳಿಂದ ಪಡೆಯಬಹುದು ಎಂದು ಮಾಹಿತಿ ನೀಡಿದರು.
ಕ್ಯಾಶ್ ಲೇನ್ ಆಗಿ ಕೇವಲ ಒಂದು ಲೇನ್ ಮಾತ್ರ ಅನುಮತಿಸಲಾಗುವುದು. ಸರ್ಕಾರಿ ಗೆಜೆಟ್‌ನ ಅಧಿಸೂಚನೆಯ ಪ್ರಕಾರ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾದಲ್ಲಿ ಯಾವುದೇ ವಾಹನವು ಫಾಸ್ಟ್ ಟ್ಯಾಗ್ ಇಲ್ಲದೆ ‘ಫಾಸ್ಟ್ ಟ್ಯಾಗ್ ಲೇನ್’ಗೆ ಪ್ರವೇಶಿಸುತ್ತಿದ್ದರೆ ಅದಕ್ಕೆ ಅನ್ವಯವಾಗುವ ಶುಲ್ಕವನ್ನು ದ್ವಿಗುಣವಾಗಿ ಪಾವತಿಸಬೇಕಾಗುತ್ತದೆ ಎಂದು ಹೇಳಿದರು.
ಏನಿದು ಫಾಸ್ಟ್ ಟ್ಯಾಗ್?
ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಶುಲ್ಕ ಪಾವತಿಸಲು ನಿಲ್ಲುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಅದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್ ಸೌಲಭ್ಯವನ್ನು ಜಾರಿಗೆ ತಂದಿದೆ. ಫಾಸ್ಟ್ ಟ್ಯಾಗ್ ಪ್ರಿಪೇಯ್ಡ್ ಟ್ಯಾಗ್ ಸೌಲಭ್ಯವಾಗಿದ್ದು, ಟೋಲ್ ಶುಲ್ಕವನ್ನು ನಗದು ರಹಿತವಾಗಿ ಪಾವತಿಸಬಹುದಾಗಿದೆ.
ಶುಲ್ಕ ಪಾವತಿ ಹೇಗೆ?
ರೇಡಿಯೋ-ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್‌ಎಫ್‌ಐಡಿ) ಆಧಾರಿತ ಫಾಸ್ಟ್ ಟ್ಯಾಗನ್ನು ವಾಹನದ ಮುಂಭಾಗದ ಗ್ಲಾಸ್‌ಗೆ ಅಂಟಿಸಲಾಗಿರುತ್ತದೆ. ಈ ಟ್ಯಾಗ್ ರೇಡಿಯೋ ಫ್ರೀಕ್ವೆನ್ಸಿ ಮೂಲಕ ಸ್ಕಾ್ಯನ್ ಆಗಲಿದ್ದು, ನಂತರ ಪ್ರಿಪೇಯ್ಡ್ ಅಥವಾ ಉಳಿತಾಯ ಖಾತೆಯಿಂದ ಹಣ ಕಡಿತವಾಗುತ್ತದೆ. ಆದರೆ ಬ್ಯಾಂಕ್ ಖಾತೆಯಲ್ಲಿ ಮುಂಗಡ ಹಣವನ್ನು ಇಟ್ಟಿರುವುದು ಅತ್ಯಗತ್ಯ.
ಎಲ್ಲ ಪ್ರಮುಖ ಬ್ಯಾಂಕುಗಳು ಫಾಸ್ಟ್ ಟ್ಯಾಗ್ ಸೌಲಭ್ಯ ನೀಡುತ್ತಿದ್ದು, ಇದನ್ನು ಗ್ರಾಹಕರ ಉಳಿತಾಯ ಖಾತೆಗೆ ಲಿಂಕ್ ಮಾಡಲಾಗುತ್ತದೆ. ನೋಂದಾಯಿತ ವಾಹನ ಟೋಲ್ ಪ್ಲಾಜಾ ಮೂಲಕ ಹಾದು ಹೋಗುತ್ತಿದ್ದಂತೆ ಅಲ್ಲಿನ ರೀಡರ್ ಟ್ಯಾಗನ್ನು ರೀಡ್ ಮಾಡುತ್ತದೆ. ಆಗ ಟೋಲ್ ಶುಲ್ಕ ಸ್ವಯಂಚಾಲಿತವಾಗಿ ಕಡಿತವಾಗುತ್ತದೆ. ಫಾಸ್ಟ್ ಟ್ಯಾಗನ್ನು ವಾಹನದ ನೋಂದಣಿ ಸಂಖ್ಯೆಗೆ ಜೋಡಿಸಲಾಗಿರುತ್ತದೆ.
ಎಲ್ಲಿ ಖರೀದಿಸಬಹುದು?
ಪ್ರಮುಖ ಬ್ಯಾಂಕುಗಳಾದ ಎಸ್‌ಬಿಐ, ಐಸಿಐಸಿಐ, ಎಚ್‌ಡಿಎಫ್‌ಸಿ, ಆ್ಯಕ್ಸಿಸ್ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕುಗಳು ರಾಷ್ಟ್ರೀಯ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್(ಎಇಟಿಸಿ) ಭಾಗವಾಗಿವೆ. ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎಎಎಐ) ಹಾಗೂ ಇಂಡಿಯನ್ ಹೈವೇಸ್ ಮ್ಯಾನೇಜ್‌ಮೆಂಟ್ ಕಂಪನಿ ಲಿಮಿಟೆಡ್ (ಐಎಚ್‌ಎಂಸಿಎಲ್) ಮಾರ್ಗಸೂಚಿಗಳ ಅಡಿಯಲ್ಲಿ ಬರುತ್ತದೆ.
ಫಾಸ್ಟ್ ಟ್ಯಾಗನ್ನು ವಿವಿಧ ಬ್ಯಾಂಕ್‌ಗಳು ಮತ್ತು ಐಎಚ್‌ಎಂಪಿಎಲ್, ಎನ್‌ಎಚ್‌ಐಎ ಸ್ಥಾಪಿಸಿದ 28,500 ಮಾರಾಟ ಕೇಂದ್ರಗಳು, ಆಯ್ದ ಪೆಟ್ರೋಲ್ ಪಂಪ್, ಎಲ್ಲ ಸುಂಕ ವಸೂಲಾತಿ ಕೇಂದ್ರಗಳು ಸೇರಿದಂತೆ ನೆಟ್ ಬ್ಯಾಂಕಿಂಗ್ ಮೂಲಕವೂ ಖರೀದಿಸಬಹುದು. ಹಾಗೇ ಎಲ್ಲ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ಖರೀದಿಸಬಹುದಾಗಿದೆ.
ಸಮೀಪದ ಮಾರಾಟದ ಸ್ಥಳಗಳನ್ನು ಗುರುತಿಸಲು ಪ್ಲೇ ಸ್ಟೋರ್‌ನಲ್ಲಿ ‘ಮೈ ಫಾಸ್ಟ್ ಟ್ಯಾಗ್’ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಅಥವಾ ಎನ್‌ಎಚ್‌ಎಐ ವೆಬ್‌ಸೈಟ್ ಡಿಡಿಡಿ.ಜಿhಞ್ಚ್ಝ.್ಚಟಞ ಗೆ ಭೇಟಿ ನೀಡಬಹುದು. ಇಲ್ಲವೇ ರಾಷ್ಟ್ರೀಯ ಹೆದ್ದಾರಿ ಸಹಾಯವಾಣಿ ಸಂಖ್ಯೆ 1033ಗೆ ಕರೆ ಮಾಡಿ ಹತ್ತಿರದ ಮಾರಾಟ ಸ್ಥಳವನ್ನು ತಿಳಿದುಕೊಳ್ಳಬಹುದಾಗಿದೆ.
ಮುಂಬೈ ಹುಡುಗನ ಡಾಗ್ ಕೇರ್; ಟಾಟಾ ಮಾಲೀಕರಿಂದ ಸಿಕ್ತು ಭರ್ಜರಿ ಆಫರ್!
ಶೇ.2.5 ರಷ್ಟುಕ್ಯಾಶ್ ಬ್ಯಾಕ್
‘ಫಾಸ್ಟ್ ಟ್ಯಾಗ್’ನ ಬೆಲೆ 100 ರು.ಗಳಾಗಿದ್ದು, ಖರೀದಿ ವೇಳೆ 150-200 ರು. ಭದ್ರತಾ ಶುಲ್ಕ ಇಡಬೇಕು. ಫಾಸ್ಟ್ ಟ್ಯಾಗ್ ಖಾತೆಯಲ್ಲಿ ಕನಿಷ್ಠ 100 ರು. ಮೊತ್ತ ಇರಬೇಕಾಗುತ್ತದೆ. ಈ ಫಾಸ್ಟ್ ಟ್ಯಾಗ್ ಮೂಲಕವೇ ಹೆದ್ದಾರಿ ಬಳಕೆದಾರರ ಶುಲ್ಕ ಪಾವತಿಯಾಗುತ್ತದೆ. ಪ್ರತಿ ಬಾರಿ ಪಾವತಿ ಮಾಡಿದಾಗ ಶೇ.2.5ರಷ್ಟುಕ್ಯಾಶ್ ಬ್ಯಾಕ್ ದೊರೆಯಲಿದೆ. 2020ರ ಮಾ.31ರವರೆಗೆ ಈ ರಿಯಾಯಿತಿ ಸೌಲಭ್ಯವನ್ನು ಕಲ್ಪಿಸಲಾಗಿದೆ.
ನವೆಂಬರ್ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: