ಬದಲಾಗುತ್ತಿರುವ ಅಗತ್ಯಗಳಿಗೆ ಉದ್ಯಮ ಸೃಜನಶೀಲತೆ ಬದಲಾಗಬೇಕು: ರತನ್ ಟಾಟಾ!

By Suvarna News  |  First Published Nov 2, 2020, 3:03 PM IST

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಜಗತ್ತು ಬದಲಾಗಿದೆ. ಜನರ ಆಯ್ಕೆಗಳು ಬದಲಾಗಿದೆ. ಜೀವನ ಶೈಲಿ ಬದಲಾಗಿದೆ. ಬದಲಾಗುತ್ತಿರುವ ಜಗತ್ತಿಗೆ ತಕ್ಕಂತೆ ಉದ್ಯಮದ ಸೃಜನಶೀಲತೆಯೂ ಬದಲಾಗಬೇಕು ಎಂಬುದು ರತನ್ ಟಾಟಾ ಅಭಿಪ್ರಾಯ. ಈ ಕುರಿತು ರತನ್ ಟಾಟಾ ಕಿವಿ ಮಾತು ಇಲ್ಲಿವೆ.


ಮುಂಬೈ(ನ.02):  ಟೆಕ್‍ಸ್ಪಾಕ್ರ್ಸ್ 2020 ಹಿನ್ನೆಲೆಯಲ್ಲಿ ಇಂದು ಟಾಟಾ ಗ್ರೂಪ್ ಮುಖ್ಯಸ್ಥ ರತನ್ ಟಾಟಾ, ಅಭಿವೃದ್ಧಿಗೊಳ್ಳುತ್ತಿರುವ ರಾಷ್ಟ್ರದ ಬದಲಾಗುತ್ತಿರುವ ಕಾಲ ಹಾಗೂ ಅವಶ್ಯಕತೆಗಳಿಗೆ ಅನುಗುಣವಾಗಿ ಹೊಂದಿಕೊಳ್ಳಬೇಕೆಂದು ಉದ್ಯಮಿಗಳಿಗೆ ಕರೆ ನೀಡಿದರು. ಭಾರತದ ಹಾಗೂ ವಿಶ್ವದ  ಪ್ರಮುಖ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತ ಮಾನವೀಯ ಕಷ್ಟಕಾರ್ಪಣ್ಯಗಳು ಸೇರಿದಂತೆ, ಹಸಿವು ಹಾಗೂ ಜಾಗತಿಕ ಆಹಾರ ಕೊರತೆ ಮತ್ತು ಬಾಹ್ಯಾಕಾಶ ಯುಗದ ತಂತ್ರಜ್ಞಾನ ಬೆಳವಣಿಗೆ ಮತ್ತು ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್ ಬಗ್ಗೆ ಚಿಂತಿಸಬೇಕೆಂದು ನುಡಿದರು.

ಸೇಫ್ಟಿಗೆ ಮೊದಲ ಆದ್ಯತೆ- 5 ಸ್ಟಾರ್ ಕಾರನ್ನೇ ನೀಡುತ್ತೇವೆ: ರತನ್ ಟಾಟಾ

Latest Videos

undefined

“ಇವೆಲ್ಲವನ್ನು ನಾವು ನಮಗಾಗಿ ಮಾಡುತ್ತಿಲ್ಲ ಎಂದು ನಮ್ಮೆಲ್ಲರಿಗೂ ಗೊತ್ತಿದೆ, ಈ ಮುಂಚೆ ಯಾರೂ ಮಾಡಿರದದಂಥ ಕೆಲವು ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ತನ್ಮೂಲಕ ದೇಶದ ಹಾಗೂ ಇಡೀ ಭೂಗ್ರಹದ ಅವಶ್ಯಕತೆಗಳನ್ನು ಪೂರೈಸುವು ನಿಟ್ಟಿನಲ್ಲಿ ಮುನ್ನಡೆಯುತ್ತಿದ್ದೇವೆ ಎಂದ ರತನ್ ಟಾಟ ಹೇಳಿದ್ದಾರೆ.  ಔದ್ಯಮಿಕತೆಗೆ ವಿನೂತನತೆ ಹಾಗೂ ಸೃಜನಶೀಲತೆಗಳು ಪ್ರಮುಖ ಅಡಿಪಾಯಗಳಾಗಿವೆ. ಹೀಗಾಗಿ ದೇಶದ ಬದಲಾಗುತ್ತಿರುವ ಅವಶ್ಯಕತೆಗಳಿಗೆ ತಕ್ಕಂತೆ ಉದ್ಯಮಿಗಳಿಗೆ ಮಾರ್ಗದರ್ಶನ ನೀಡಬೇಕಿದೆ” ಎಂದರು.

ಮುಂಬೈ ಹುಡುಗನ ಡಾಗ್ ಕೇರ್; ಟಾಟಾ ಮಾಲೀಕರಿಂದ ಸಿಕ್ತು ಭರ್ಜರಿ ಆಫರ್!

ಉದ್ಯಮಿಗಳನ ನಮ್ರತೆ ಅತೀ ಅಗತ್ಯ. ಈ ಮೂಲಕ ಇತರರಿಗಿಂತ ಉದ್ಯಮದಲ್ಲಿ ಬಹುಬೇಗನೆ ಯಶಸ್ಸು ಸಾಧಿಸಬಹುದು. ಇಷ್ಟೇ ಅಲ್ಲ ಉದ್ಯಮದಲ್ಲಿನ ಸೃಜನಶೀಲತೆ ಹಾಗೂ ಆವಲೋಕನ ಅತ್ಯಗತ್ಯ. ಇದು ಕೇವಲ ಮೌಲ್ಯಮಾಪನ ಆಧಾರಿತವಾಗಿರದೆ ಮಾನವೀಯತೆ ಹಾಗೂ ಮನುಕುಲದ ಚಿಂತನೆಯನ್ನು ಒಳಗೊಂಡಿರಬೇಕು ಎಂದು ರತನ್ ಟಾಟಾ ಹೇಳಿದ್ದಾರೆ.

click me!