ದುಬಾರಿ ಫೈನ್ ಕಟ್ಟಗಲಾಗದೇ ಪೊಲೀಸರ ಬಳಿ ಸ್ಕೂಟರ್ ಬಿಟ್ಟು ಹೋದ ಸವಾರ!

Published : Nov 01, 2020, 05:52 PM ISTUpdated : Nov 01, 2020, 05:53 PM IST
ದುಬಾರಿ ಫೈನ್ ಕಟ್ಟಗಲಾಗದೇ ಪೊಲೀಸರ ಬಳಿ ಸ್ಕೂಟರ್ ಬಿಟ್ಟು ಹೋದ ಸವಾರ!

ಸಾರಾಂಶ

ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಬಳಿಕ ದುಬಾರಿ ದಂಡ ನೋಡಿ ಬೆಚ್ಚಿ ಬಿದ್ದ ಹಲವು ಘಟನೆಗಳು ನಡೆದಿದೆ. ಇನ್ನು ಕೆಲವರು ವಾಹನವನ್ನೇ ಸುಟ್ಟುಹಾಕಿದ ಘಟನೆಗಳೂ ವರದಿಯಾಗಿದೆ. ಇದೀಗ ತನ್ನ ನಿಯಮ ಉಲ್ಲಂಘನೆಯ ಚಲನ್ ನೋಡಿ ಸ್ಕೂಟರನ್ನು ಪೊಲೀಸರ ಬಳಿ ಬಿಟ್ಟು ಹೋದ ಘಟನೆ ನಡೆದಿದೆ.

ಬೆಂಗಳೂರುನ.01):  ಪೊಲೀಸರಿಲ್ಲ ಎಂದು ಸಿಗ್ನಲ್ ಜಂಪ್, ಹೆಲ್ಮೆಟ್ ರಹಿತ ಪ್ರಯಾಣ ಸೇರಿದಂತೆ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಅಪಾಯ ತಪ್ಪಿದ್ದಲ್ಲ. ಕಾರಣ ಹೀಗೆ ಪೊಲೀಸರ ಕಣ್ತಪ್ಪಿಸಿ, ಅಲ್ಲೊಂದು ಇಲ್ಲೊಂದು ನಿಯಮ ಉಲ್ಲಂಘನೆ ಮಾಡುತ್ತಿದ್ದ ಸ್ಕೂಟರ್ ಸವಾರ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾನೆ. 2 ವರ್ಷದಲ್ಲಿ ಬೆಂಗಳೂರಿನ ತರಕಾರಿ ವ್ಯಾಪಾರಿ ಅರುಣ್ ಕುಮಾರ್ 77ಕ್ಕೂ ಹೆಚ್ಚುಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿ ಇದೀಗ ಪರದಾಡುವ ಸ್ಥಿತಿ ಬಂದಿದೆ.

ಉದ್ದೇಶಪೂರ್ವಕವಾಗಿ KSRTC ಬಸ್ ಪ್ರಯಾಣಕ್ಕೆ ಅಡ್ಡಿ; ಪುಂಡರಿಗೆ ಪೊಲೀಸ್ ತಕ್ಕ ಶಾಸ್ತಿ!.

ಅರುಣ್ ಕುಮಾರ್ ಕಳೆದೆರಡು ವರ್ಷದಿಂದ ಹೊಂಡಾ ಡಿಯೋ ಸ್ಕೂಟರ್ ಮೂಲಕ ತರಕಾರಿ ವ್ಯಾಪಾರ ನಡೆಸುತ್ತಿದ್ದ. ಆದರೆ ಸಿಗ್ನಲ್, ಒನ್ ವೇ, ತ್ರಿಬಲ್ ರೈಡಿಂಗ್ ಯಾವುದು ಲೆಕ್ಕಿಸದೇ ಓಡಾಡುತ್ತಿದ್ದ. ಇತ್ತೀಚೆಗೆ ಬೆಂಗಳೂರಿ ಮಡಿವಾಳ ಠಾಣಾ ಪೊಲೀಸರು ಡಿಯೋ ಸ್ಕೂಟರ್ ರೆಕಾರ್ಡ್ ಪರಿಶೀಲಿಸಿದಾಗ ಬರೋಬ್ಬರಿ 77ಕ್ಕೂ ಹೆಚ್ಚು ಪ್ರಕರಣ ದಾಖಲಾಗಿರುವ ಅಂಶ ಬೆಳಕಿಗೆ ಬಂದಿದೆ.

ನಿಯಮ ಉಲ್ಲಂಘನೆ ಪ್ರಕರಣಗಳು ದಂಡ ಒಟ್ಟು ಹಾಕಿ ನೋಡಿದಾಗ 42,500 ರೂಪಾಯಿ ಆಗಿದೆ. ದಂಡದ ಮೊತ್ತ ನೋಡಿದ ಅರುಣ್ ಕುಮಾರ್ ಬೆಚ್ಚಿ ಬಿದ್ದಿದ್ದಾನೆ.   42,500 ರೂಪಾಯಿ ದಂಡ ಕಟ್ಟಲು ನನ್ನ ಬಳಿ ಹಣವಿಲ್ಲ. ಸ್ಕೂಟರ್  ಮೌಲ್ಯ 30,000 ರೂಪಾಯಿ. ಹೀಗಾಗಿ ಮಾರಾಟ ಮಾಡಿದರೂ ದಂಡ ಕಟ್ಟಲು ಸಾಧ್ಯವಾಗದು. ಹೀಗಾಗಿ ಈ ಸ್ಕೂಟರ್ ನಿಮ್ಮಲ್ಲಿಯೇ ಇರಲಿ ಎಂದು ಅರುಣ್ ಕುಮಾರ್ ತೆರಳಿದ್ದಾನೆ.

ಪೊಲೀಸರು ಡಿಯೋ ಸ್ಕೂಟರ್ ವಶಪಡಿಸಿಕೊಂಡಿದ್ದಾರೆ. ಇದೀಗ ಕೋರ್ಟ್ ಮೂಲಕ ಪರಿಹಾರ ಕಂಡುಕೊಳ್ಳಬೇಕಿದೆ. ಈ ರೀತಿ ಘಟನೆಗಳು ಇದೇ ಮೊದಲಲ್ಲ. ಹಲವು ಬಾರಿ ಇಂತ ಘಟನೆಗಳು ಸಂಭವಿಸಿದೆ. ಹೀಗಾಗಿ ಟ್ರಾಫಿಕ್ ನಿಯಮ ಪಾಲನೆ ಅತ್ಯಗತ್ಯವಾಗಿದೆ. 

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ