250 ಟಾಟಾ ನೆಕ್ಸಾನ್ - ಹ್ಯುಂಡೋ ಕೋನಾ ಎಲೆಕ್ಟ್ರಿಕ್ ಕಾರು ಬುಕ್ ಮಾಡಿದ EESL

By Suvarna News  |  First Published Sep 3, 2020, 6:46 PM IST

ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಹಾಗೂ ಬಳಕೆಗೆ ಹೆಚ್ಚು ಉತ್ತೇಜನ ನೀಡುತ್ತಿದೆ. ಇದೀಗ ಸರ್ಕಾರದ ಹಲವು ಸಂಸ್ಥೆಗಳು ತನ್ನ ವಾಹನಗಳನ್ನು ಎಲೆಕ್ಟ್ರಿಕ್ ವಾಹನಕ್ಕೆ ಪರಿವರ್ತನೆ ಮಾಡುತ್ತಿದೆ. ಇದೀಗ EESL ಟಾಟಾ ಮೋಟಾರ್ಸ್ ಹಾಗೂ ಹ್ಯುಂಡೈನಿಂದ 250 ಎಲೆಕ್ಚ್ರಿಕ್ ಕಾರು ಬುಕ್ ಮಾಡಿದೆ. 


ಮುಂಬೈ(ಸೆ.03):  ಎಲೆಕ್ಟ್ರಿಕ್ ವಾಹನಗಳತ್ತ ಜನ ಆಕರ್ಷಿತರಾಗುತ್ತಿದ್ದಾರೆ. ನಿರ್ವಹಣ ವೆಚ್ಚ ಕಡಿಮೆ, ಮಾಲಿನ್ಯ ರಹಿತ ಎಲೆಕ್ಟ್ರಿಕ್ ವಾಹನಗಳು ಕೊಂಚ ದುಬಾರಿಯಾದರೂ ಜನರು ಖರೀದಿಗೆ ಮುಂದಾಗುತ್ತಿದ್ದಾರೆ. ಇದೀಗ  ಭಾರತ ಸರ್ಕಾರದ ವಿದ್ಯುತ್ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಸೂಪರ್ ಎನರ್ಜಿ ಸರ್ವಿಸ್ ಕಂಪನಿ ಯ (ESCO) ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ (EESL) ಇದೀಗ ಟಾಟಾ ನೆಕ್ಸಾನ್ ಹಾಗೂ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಖರೀದಿಗೆ ಮುಂದಾಗಿದೆ. 

ಹೊಸ ಕೊಡುಗೆ ಘೋಷಣೆ; ವಾಹನ ಖರೀದಿಸದೆ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಚಾಲನೆ ಆನಂದಿಸಿ!..

Tap to resize

Latest Videos

undefined

ಬಿಡ್ಡಿಂಗ್ ಮೂಲಕ  EESL ಎಲೆಕ್ಟ್ರಿಕ್ ಕಾರುಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಟಾಟಾ ಮೋಟಾರ್ಸ್ ಲಿಮಿಟೆಡ್ ಮತ್ತು ಹ್ಯುಂಡೈ ಮೋಟರ್ ಇಂಡಿಯಾ ಲಿಮಿಟೆಡ್ ಟೆಂಡರ್ ಗೆದ್ದಿದ್ದು, ಈಗ ಕ್ರಮವಾಗಿ 150 ನೆಕ್ಸಾನ್ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ SUV ಹಾಗೂ 100 ಕೋನಾ ಎಲೆಕ್ಟ್ರಿಕ್ ಪ್ರೀಮಿಯಂ SUVಗಳನ್ನು ಸರ್ಕಾರದ ಬಳಕೆಗಾಗಿ ಪೂರೈಸಲಿದೆ.  

65 ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬುಕ್ ಮಾಡಿದ ಸರ್ಕಾರ!.

ಕಾರು ಖರೀದಿಗೆ EESL ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) ಇತ್ತೀಚೆಗೆ ನೀಡಿದ ಅನುದಾನದಿಂದ 50 ಲಕ್ಷ ರೂಪಾಯಿ ಬಳಸುತ್ತದೆ. ಡಿಇಎಂಡ್ ಸೈಡ್ ಎನರ್ಜಿ ಎಫಿಷಿಯೆನ್ಸಿ ಸೆಕ್ಟರ್ ಪ್ರಾಜೆಕ್ಟ್‌ಗಳಂತಹ ಹೆಚ್ಚಿನ ಆದ್ಯತೆಯ ಕ್ಷೇತ್ರಗಳನ್ನು ಹೆಚ್ಚಿಸಲು ಮತ್ತು ಹಣಕಾಸು ಒದಗಿಸುವ ವೆಚ್ಚಕ್ಕೆ ಇಇಎಸ್‌ಎಲ್ ಎಡಿಬಿಯಿಂದ ಹಣಕಾಸು ಅನುದಾನ ಪಡೆದಿದೆ.

ಒಂದು ಚಾರ್ಜ್‌ಗೆ 1,026 ಕಿ.ಮೀ ಮೈಲೇಜ್: ದಾಖಲೆ ಬರೆದ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು!..

ಎಲೆಕ್ಟ್ರಿಕ್ ವಾಹನಗಳಿಗೆ ದೇಶದಲ್ಲಿ ಬೇಡಿಕೆ ಹೆಚ್ಚುತ್ತಿದೆ. ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಳಕೆಯನ್ನು ಉತ್ತೇಜಿಸಲು ಈ ರೀತಿಯ ಪಾಲುದಾರಿಕೆಗಳು ಪ್ರಮುಖವಾಗಿವೆ.  ಸರ್ಕಾರದ ಬಳಕೆಗಾಗಿ EESLಗೆ ಹೆಚ್ಚಿನ  ಎಲೆಕ್ಟ್ರಿಕ್ ವಾಹನ ಒದಗಿಸಲು ಸಂತೋಷಪಡುತ್ತೇವೆ.  ಭವಿಷ್ಯದ-ಆಧಾರಿತ ಚಲನಶೀಲತೆ ಪರಿಹಾರಕ್ಕೆ ಸುಗಮ ಮತ್ತು ಸುಸ್ಥಿರ ಪರಿವರ್ತನೆಗೆ ಅನುವು ಮಾಡಿಕೊಡುತ್ತದೆ. ವೇಗವಾಗಿ ಬೆಳೆಯುತ್ತಿರುವ ಹಾಗೂ EV ವಿಭಾಗದ ನಾಯಕನಾಗಿರುವ  ಟಾಟಾ ಮೋಟಾರ್ಸ್ ಭಾರತದಾದ್ಯಂತ ತಮ್ಮ ಪ್ರವೇಶ ಮತ್ತು ಬಳಕೆಯನ್ನು ಜನಪ್ರಿಯಗೊಳಿಸಲು ಬದ್ಧವಾಗಿದೆ ಎಂದು ಟಾಟಾ ಮೋಟಾರ್ಸ್ ಪ್ಯಾಸೇಂಜರ್ ವೆಹಿಕಲ್ ಬಿಸಿನೆಸ್ ಯುನಿಟ್‌ನ ಶೈಲೇಶ್ ಚಂದ್ರ ಹೇಳಿದ್ದಾರೆ.

click me!