ಅತ್ಯಂತ ಸುರಕ್ಷಿತ ನೆಕ್ಸಾನ್ XM (S) ವೇರಿಯೆಂಟ್ ಲಾಂಚ್ ಮಾಡಿದ ಟಾಟಾ ಮೋಟಾರ್ಸ್!

By Suvarna News  |  First Published Sep 3, 2020, 3:00 PM IST

ಟಾಟಾ ಮೋಟಾರ್ಸ ಕಾರುಗಳ ಪೈಕಿ ಗ್ರಾಹಕರ ನೆಚ್ಚಿನ ಕಾರಾಗಿರುವ ಟಾಟಾ ನೆಕ್ಸಾನ್ ಇದೀಗ ಮತ್ತೊಂದು ವೇರಿಯೆಂಟ್ ಬಿಡುಗಡೆಯಾಗಿದೆ.  ಟಾಟಾ ನೆಕ್ಸಾನ್ XM (S) ವೇರಿಯೆಂಟ್ ಕಾರು ಲಾಂಚ್ ಆಗಿದೆ. ಈ ಕಾರಿನ ವಿಶೇಷತೆ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.


ಮುಂಬೈ(ಸೆ.03): ಭಾರತದ ಆಟೋಮೇಕರ್ ಪೈಕಿ ಟಾಟಾ ಮೋಟಾರ್ಸ್‌ಗೆ ಅಗ್ರಸ್ಥಾನ. ಸುರಕ್ಷಿತ, ದಕ್ಷ ಹಾಗೂ ಕೈಗೆಟುಕುವ ಬೆಲೆಯಲ್ಲಿ ವಾಹನ ಬಿಡುಗಡೆ ಮಾಡುವ ಹೆಗ್ಗಳಿಕೆಗೆ ಟಾಟಾಗಿದೆ. ಟಾಟಾ ಕಾರುಗಳ ಪೈಕಿ ನೆಕ್ಸಾನ್ ಮಾರಾಟದಲ್ಲಿ ದಾಖಲೆ ಬರೆದ ಕಾರು. ಸಬ್ ಕಾಂಪಾಕ್ಟ್ SUV ಖರೀದಿಯ ಗ್ರಾಹಕರ ಮೊದಲ ಆಯ್ಕೆ ಟಾಟಾ ನೆಕ್ಸಾನ್ ಕಾರಾಗಿದೆ.  ಇದೀಗ ನೆಕ್ಸಾನ್ ಕಾರಿನಲ್ಲಿ ಮತ್ತೊಂದು ವೇರಿಯೆಂಟ್ ಬಿಡುಗಡೆಯಾಗಿದೆ. ಟಾಟಾ ನೆಕ್ಸಾನ್ XM (S) ವೇರಿಯೆಂಟ್ ಕಾರು ಮಾರುಕಟ್ಟೆ ಪ್ರವೇಶಿಸಿದೆ.

ನೆಕ್ಸಾನ್ XZ+ S ಟ್ರಿಮ್ ವೇರಿಯೆಂಟ್ ಪರಿಚಯಿಸಿದ ಟಾಟಾ ಮೋಟಾರ್ಸ್!.

Tap to resize

Latest Videos

undefined

ಎಲೆಕ್ಟ್ರಿಕ್ ಸನ್‌ರೂಫ್ ಹೊಂದಿರುವ ಈ ನೂತನ ವೇರಿಯೆಂಟ್ ಭಾರತದಲ್ಲಿ ಲಭ್ಯವಿರುವ ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸನ್ ರೂಫ್ ಫೀಚರ್ಸ್ ಹೊಂದಿದ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ನೂತನ ಟಾಟಾ ನೆಕ್ಸಾನ್ XM (S) ವೇರಿಯೆಂಟ್ ಕಾರಿನ ಬೆಲೆ 8.36 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. 

ಹೊಸ ಕೊಡುಗೆ ಘೋಷಣೆ; ವಾಹನ ಖರೀದಿಸದೆ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಚಾಲನೆ ಆನಂದಿಸಿ!

ನೂತನ Nexon XM (S) ಕಾರು ಡಿಸೇಲ್ ಹಾಗೂ ಪೆಟ್ರೋಲ್ ವೇರಿಯೆಂಟ್‌‌ಗಳಲ್ಲಿ ಲಭ್ಯವಿದೆ. ಈ ಕಾರಿನ ಬೆಲೆ ಈ ಕೆಳಗಿವೆ.

  • ಟಾಟಾ ನೆಕ್ಸಾನ್XM  S ಮಾನ್ಯುಯೆಲ್ ಪೆಟ್ರೋಲ್ ಕಾರು = 8.36 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
  • ಟಾಟಾ ನೆಕ್ಸಾನ್XM  S(AMT) ಪೆಟ್ರೋಲ್ ಕಾರು = 8.96  ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
  • ಟಾಟಾ ನೆಕ್ಸಾನ್XM  S ಮಾನ್ಯುಯೆಲ್ ಡೀಸೆಲ್ ಕಾರು = 9.70 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
  • ಟಾಟಾ ನೆಕ್ಸಾನ್XM  S(AMT) ಡೀಸೆಲ್ ಕಾರು = 10.30  ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) 

ನೂತನ ಕಾರಿನಲ್ಲಿ ಎಲೆಕ್ಟ್ರಿಕ್ ಸನ್‌ರೂಫ್ ಜೊತೆಗೆ  ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ಸ್, ರೈನ್ ಸೆನ್ಸಾರ್ ವೈಪರ್ಸ್, ಸ್ಟೀರಿಂಗ್ ಮೌಟೆಂಡ್ ಕಂಟ್ರೋಲ್ಸ್ ಹೊಂದಿದೆ. ಇನ್ನು ನೆಕ್ಸಾನ್ XM ಕಾರಿನ ಫೀಚರ್ಸ್‌ಗಳಾದ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೊಗ್ರಾಂ, LED DRLs ಹಾಗೂ ಪ್ರೊಜಕ್ಟೆಡ್ ಹೆಡ್‌ಲ್ಯಾಂಪ್ಸ್, ಡ್ರೈವರ್ ಹಾಗೂ ಕೋ ಡ್ರೈವರ್ ಏರ್‌ಬ್ಯಾಗ್, ಹಿಲ್ ಹೋಲ್ಡ್ ಕಂಟ್ರೋಲ್, ಕೆನೆಕ್ಟ್ ನೆಕ್ಸ್ಟ್ ಇನ್ಫೋಟೈನ್ಮೆಂಟ್ ಸಿಸ್ಟ್ಮ್, ಇಕೋ, ಸಿಟಿ ಹಾಗೂ ಸ್ಪೋರ್ಟ್ ಡ್ರೈವ್ ಮೊಡ್ ಫೀಚರ್ಸ್‌ಗಳು ನೂತನ ಕಾರಿನಲ್ಲಿದೆ.

300 ರೂಪಾಯಿಗೆ 312 ಕಿ.ಮೀ ಮೈಲೇಜ್,ಇದು ಟಾಟಾ ನೆಕ್ಸಾನ್EV ಕಾರು ಬಾರು!.

ನೆಕ್ಸಾನ್ ಕಾರು ಟಾಟಾ ಮೋಟಾರ್ಸ್ ಕಂಪನಿಯ ಹೆಮ್ಮಯ ಪ್ರತೀಕ. ಭಾರತದಲ್ಲಿ ಸುರಕ್ಷತೆ ಕಾರುಗಳ ಹರಿಕಾರನಾಗಿ ನೆಕ್ಸಾನ್ ನಿಂತಿದೆ. 2018ರಲ್ಲಿ ಭಾರತದಲ್ಲಿ ಗರಿಷ್ಠ ಸುರಕ್ಷತೆಯ 5 ಸ್ಟಾರ್ ಕಾರು ಅನ್ನೋ ಹೆಗ್ಗಳಿಕೆಗೆ ನೆಕ್ಸಾನ್ ಪಾತ್ರವಾಗಿದೆ. ಈ ಮೂಲಕ ಭಾರತದಲ್ಲಿ ಮೊದಲ ಬಾರಿಗೆ 5 ಸ್ಟಾರ್ ರೇಟಿಂಗ್ ಕಾರು ನೀಡಿದ ಹೆಗ್ಗಳಿಕೆಗೆ ಟಾಟಾ ಪಾತ್ರವಾಗಿದೆ. ಇದೀಗ ಮತ್ತಷ್ಟು ಫೀಚರ್ಸ್‌ಗಳೊಂದಿಗೆ ನೂತನ ಕಾರು ಬಿಡುಗಡೆಯಾಗಿದೆ ಎಂದು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ ಮಾರ್ಕೆಟಿಂಗ್ ಬಿಸಿನೆಸ್ ಹೆಡ್ ವಿವೇಕ್ ಶ್ರವತ್ಸವ್ ಹೇಳಿದ್ದಾರೆ.

click me!