ಕೊರೋನಾ ನಡುವೆ ಹೀರೋ ಮೋಟೋಕಾರ್ಪ್ ಕೈಹಿಡಿದ ಗ್ರಾಹಕ!

By Suvarna NewsFirst Published Sep 3, 2020, 5:27 PM IST
Highlights

ಕೊರೋನಾ ವೈರಸ್ ಲಾಡ್‌ಡೌನ್ ಸಡಿಲಿಕೆಯಾದ ಬಳಿಕ ಆಟೋಮೊಬೈಲ್ ಮಾರಾಟದಲ್ಲಿ ಚೇತರಿಕೆ ಕಂಡಿದೆ. ಇದೀಗ ಹಿರೋ ಮೋಟೋಕಾರ್ಪ್ ಆಗಸ್ಟ್ ತಿಂಗಳ ಮಾರಾಟದಲ್ಲಿ ಗಣನೀಯ ಏರಿಕೆ ಕಂಡಿದೆ. ಶೇಕಡಾ 13ರಷ್ಟು ಮಾರಾಟದಲ್ಲಿ ಹೆಚ್ಚಳವಾಗಿದೆ. ಈ ಕುರಿತ ವಿವರ ಇಲ್ಲಿದೆ.

ನವದೆಹಲಿ(ಸೆ.03): ಕೊರೋನಾ ವೈರಸ್ ಹೊಡೆತಕ್ಕೆ ಬಹುತೇಕ ಎಲ್ಲಾ ಕಂಪನಿಗಳು ನಲುಗಿದೆ. ಕಳೆದ 6 ತಿಂಗಳಿನಿಂದ ಆಟೋಮೊಬೈಲ್ ಕಂಪನಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಅನ್‌ಲಾಕ್ ಪ್ರಕ್ರಿಯೆ ಆರಂಭವಾದ ಬಳಿಕ ಆಟೋಮೊಬೈಲ್ ಮಾರಾಟದಲ್ಲಿ ಚೇತರಿಕೆ ಕಾಣುತ್ತಿದೆ. ವಿಶ್ವದ ಅತೀ ದೊಡ್ಡ ಮೋಟಾರ್‌ಸೈಕಲ್ ಹಾಗೂ ಸ್ಕೂಟರ್ ತಯಾರಿಕಾ ಕಂಪನಿ ಹೀರೋ ಮೋಟೋಕಾರ್ಪ್ ಮಾರಾಟದಲ್ಲಿ ಗಣನೀಯ ಏರಿಕೆ ತಂಡಿದೆ.

2,999 ರೂ EMI ಸೇರಿದಂತೆ ಆಕರ್ಷಕ ಕೂಡುಗೆ; ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಇನ್ನೂ ಸುಲಭ!...

ಹೀರೋ ಮೋಟೋಕಾರ್ಪ್ ಸತತ ನಾಲ್ಕನೇ ತಿಂಗಳು ಮಾರಾಟದಲ್ಲಿ ಏರಿಕೆ ಕಂಡಿದೆ. ಆಗಸ್ಟ್ ತಿಂಗಳಲ್ಲಿ ಹೀರೋ ಗಣನೀಯ ಏರಿಕೆ ಕಂಡಿದೆ. 2020ರ ಜುಲೈ ತಿಂಗಳಿಗೆ ಹೋಲಿಸಿದರೆ ಆಗಸ್ಟ್ ತಿಂಗಳಲ್ಲಿ ಹೀರೋ ಮೋಟೋಕಾರ್ಪ್ ಶೇಕಡಾ 13ರಷ್ಟು ಮಾರಾಟದಲ್ಲಿ ಏರಿಕೆ ಕಂಡಿದೆ. ಇನ್ನು ಕಳೆದ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಶೇಕಡಾ 7.55 ರಷ್ಟು ಏರಿಕೆ ತಂಡಿದೆ.

ಹೀರೋ ಹೀರೋ Xpulse ಬೈಕ್ Review:ಆಫ್ ರೋಡ್, ಅಡ್ವೆಂಚರ್, ನಿತ್ಯ ಬಳಕೆಗೂ ಸೈ!..

2020ರ ಆಗಸ್ಟ್ ತಿಂಗಳಲ್ಲಿ ಹೀರೋ ಮೋಟೋಕಾರ್ಪ್ 584,456 ವಾಹನ ಮಾರಾಟ ಮಾಡಿದೆ. 2019ರ ಆಗಸ್ಟ್ ತಿಂಗಳಲ್ಲಿ 543,406 ವಾಹನ ಮಾರಾಟವಾಗಿತ್ತು. 2020ರ ಜುಲೈ ತಿಂಗಳಲ್ಲಿ ಹೀರೋ ಮೋಟೋಕಾರ್ಪ್ 514,509 ವಾಹನ ಮಾರಾಟ ಮಾಡಿದೆ.

ಮಾರಾಟದಲ್ಲಿ Xtreme 160R ಬೈಕ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. Xtreme 160R ಬೈಕ್‌ನಿಂದ ಹೀರೋ ಮೋಟೋಕಾರ್ಪ್ ಮಾರಾಟದಲ್ಲಿ ಗಣನೀಯ ಏರಿಕೆ ಕಂಡಿದೆ. 

2020  ಆಗಸ್ಟ್ ತಿಂಗಳ ಮಾರಾಟ  ವಿವರ:
ಮೋಟಾರ್‌ಸೈಕಲ್ 498,547 
ಸ್ಕೂಟರ್ 44,859
ಓಟ್ಟು  543,406

2019 ಆಗಸ್ಟ್ ತಿಂಗಳ ಮಾರಾಟ ವಿವರ:
ಮೋಟಾರ್‌ಸೈಕಲ್  544,658
ಸ್ಕೂಟರ್ 39,798
ಓಟ್ಟು  584,456

click me!