ನೀರವ್ ಮೋದಿ ಕಾರು ಖರೀದಿಸಲು ಇದೆ ಅವಕಾಶ- ಏ.18ಕ್ಕೆ ಹರಾಜು !

By Web DeskFirst Published Apr 2, 2019, 10:03 PM IST
Highlights

ನೀರವ್ ಮೋದಿಯ ರೋಲ್ಸ್ ರಾಯ್ಸ್, ಪೋರ್ಶೆ, ಮರ್ಸಡೀಸ್ ಸೇರಿದಂತೆ ಐಷಾರಾಮಿ ಕಾರುಗಳನ್ನು ಖರೀದಿಸಲು ಇಡಿ ಅಧಿಕಾರುಗಳು ಅವಕಾಶ ಮಾಡಿಕೊಟ್ಟಿದ್ದಾರೆ. ನೀರವ್ ಮೋದಿಯ ಐಷಾರಾಮಿ ಕಾರುಗಳು ಹರಾಜಾಗುತ್ತಿದೆ. ಇಲ್ಲಿದೆ ಹರಾಜು ದಿನಾಂಕ ಹಾಗೂ ಇತರ ಮಾಹಿತಿ.

ಮುಂಬೈ(ಏ.02): ಭಾರತೀಯ ಬ್ಯಾಂಕ್‌ಗಳಿಗೆ ವಂಚಿಸಿ ವಿದೇಶದಲ್ಲಿ ಬಂಧನಕ್ಕೊಳಗಾಗಿರುವ ಉದ್ಯಮಿ ನೀರವ್ ಮೋದಿ ದಿನಂದಿಂದ ದಿನಕ್ಕೆ ಹಿನ್ನಡೆಯಾಗುತ್ತಿದೆ. ಬರೋಬ್ಬರಿ 13,000 ಕೋಟಿ ರೂಪಾಯಿ ವಸೂಲಿಗೆ ಇಡಿ(Enforcement Directorate) ಅಧಿಕಾರಿಗಳು ಮುಂದಾಗಿದ್ದಾರೆ. ಈಗಾಗಲೇ ನೀರವ್ ಮೋದಿಯಿಂದ ಜಪ್ತಿ ಮಾಡಿರುವ ಐಷಾರಾಮಿ ಕಾರುಗಳು ಹರಾಜಿಗಿಡಲಾಗಿದೆ.

ಇದನ್ನೂ ಓದಿ: ಕಾರಿಗೆ 4.9 ಲಕ್ಷ ರೂಪಾಯಿ ದಂಡ- ತಲೆ ತಿರುಗಿ ಬಿದ್ದ ಮಾಲೀಕ!

ED ಅಧಿಕಾರಿಗಳು ಇದೀಗ ನೀರವ್ ಮೋದಿ 11 ಕಾರುಗಳನ್ನು ಹರಾಜಿಗೆ ಹಾಕಲು ಅನುಮತಿ ಪಡೆದಿದ್ದಾರೆ. ಮುಂಬೈ ನ್ಯಾಯಾಲಯದಿಂದ ಅನುಮತಿ ಪಡೆದಿರುವ ED ಅಧಿಕಾರಿಗಳು ನೀರವ್ ಮೋದಿಯ ದುಬಾರಿ ಕಾರುಗಳನ್ನು ಎಪ್ರಿಲ್ 18ರಂದು ಹರಾಜು ಮಾಡಲಿದ್ದಾರೆ. ಆನ್‌ಲೈನ್ ಮೂಲಕ ರಿಜಿಸ್ಟ್ರೇಶನ್ ಮಾಡಿಕೊಂಡು ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ಇದನ್ನೂ ಓದಿ: ಇಂಗ್ಲೆಂಡ್ ರಸ್ತೆಯಲ್ಲಿ ಭಾರತದ ಬಜಾಜ್ ಅಟೋ ಹಾಗೂ ಓಲಾ!

ರೋಲ್ಸ್ ರಾಯ್ಸ್ ಘೋಸ್ಟ್, ಪೋರ್ಶೆ ಪನಾಮೆರ, ಮರ್ಸಡೀಸ್ ಬೆಂಝ್ GLS 350 CDI, ಮರ್ಸಡೀಸ್ ಬೆಂಝ್  CLS-Class, ಟೊಯೊಟಾ ಫಾರ್ಚುನರ್ , ಹೊಂಡಾ CR-V,ಟೊಯೊಟಾ ಇನೋವಾ , ಮರ್ಸಡೀಸ್ ಬೆಂಝ್ ಸಿ ಕ್ಲಾಸ್ ಸೇರಿದಂತೆ 11 ಕಾರುಗಳನ್ನು ಪೊಲೀಸರು ಹರಾಜು ಮಾಡಲಿದ್ದಾರೆ. 11 ಕಾರುಗಳ ಜೊತೆಗೆ 173 ಪೈಟಿಂಗ್ಸ್ ಕೂಡ ಹರಾಜಾಗಲಿದೆ. ಹರಾಜಿನ ಒಟ್ಟು ಮೌಲ್ಯ ಸರಿಸುಮಾರು 57.72 ಕೋಟಿ ರೂಪಾಯಿ ಎಂದು ಪೊಲೀಸರು ಹೇಳಿದ್ದಾರೆ. 

click me!