1 ಲೀಟರ್‌ನಲ್ಲಿ 250 ಕೀ.ಮಿ ಮೈಲೇಜ್-ದಾಖಲೆ ಬರೆದ ಕಾರು!

By Web Desk  |  First Published Dec 13, 2018, 11:09 AM IST

ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳು ಹೆಚ್ಚು ಅಂದರೆ 25 ರಿಂದ 30 ಕೀ.ಮಿ ಮೈಲೇಜ್ ನೀಡುತ್ತೆ. ಆದರೆ ನೂತನ ಆವಿಷ್ಕರಿಸಲಾಗಿರುವ ಕಾರು ಬರೋಬ್ಬರಿ 250 ಕೀ.ಮಿ ಮೈಲೇಜ್ ನೀಡುತ್ತಿದೆ. ದಾಖಲೆ ಬರೆದ ಈ ಕಾರು ಯಾವುದು? ಇಲ್ಲಿದೆ ವಿವರ.


ಚೆನ್ನೈ(ಡಿ.13): ಆಟೋಮೊಬೈಲ್ ಕ್ಷೇತ್ರ ಸದ್ಯ ಎಲೆಕ್ಟ್ರಿಕ್ ವಾಹನದತ್ತೆ ಗಮನ ಕೇಂದ್ರಿಕರಿಸಿದೆ. ತೈಲ ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ ಸೇರಿದಂತೆ ಇಂಧನದ ಬೆಲೆ ಗಗನಕ್ಕೇರಿತ್ತು. ಜೊತೆಗೆ ಮಾಲಿನ್ಯ ನಿಯಂತ್ರಿಸಲು ಎಲೆಕ್ಟ್ರಿಕ್ ವಾಹನ ಸೂಕ್ತ. ಆದರೆ ಸದ್ಯ 1 ಲೀಟರ್ ಪೆಟ್ರೋಲ್‌ಗೆ ಬರೋಬ್ಬರಿ 250 ಕೀ.ಮಿ ಮೈಲೇಜ್ ನೀಡೋ ಹೊಸ ಕಾರು ಆವಿಷ್ಕಾರ ಮಾಡಲಾಗಿದೆ.

ಇದನ್ನೂ ಓದಿ: 20 ವರ್ಷ ರಾಜನಂತೆ ಮೆರೆದ ಸುಜುಕಿ ಹಯಬುಸಾ ಬೈಕ್ ವಿದಾಯ!

Tap to resize

Latest Videos

undefined

ಚೆನ್ನೈನಲ್ಲಿ ಆಯೋಜಿಸಲಾದ ಇಕೋ ಮ್ಯಾರಥಾನ್ ಎಕ್ಸ್ಪೋದಲ್ಲಿ ಈ ಕಾರು ಪರ್ದರ್ಶಿಸಲಾಗಿದೆ. ಮುಂಬೈನ ಕೆಜೆ ಸೋಮಯ್ಯ ಕಾಲೇಜಿನ ವಿದ್ಯಾರ್ಥಿಗಳು ಈ 250 ಕೀ.ಮಿ ಮೈಲೇಜ್ ಕಾರನ್ನ ಪರಿಚಯಿಸಿದ್ದಾರೆ. ಈ ಮೂಲಕ ಎಲ್ಲರ ಅಚ್ಚರಿಕೆಗೆ ಕಾರಣರಾಗಿದ್ದಾರೆ.

ಇದನ್ನೂ ಓದಿ: ಮಾರುತಿ ಬ್ರಿಜಾ ಪ್ರತಿಸ್ಪರ್ಧಿ ಮಹೀಂದ್ರ S201 ಶೀಘ್ರದಲ್ಲೇ ಬಿಡುಗಡೆ!

SRM ವಿಶ್ವಿವಿದ್ಯಾನಿಲಯದ ವಿದ್ಯಾರ್ಥಿಗಳು ಪ್ರತಿ ಲೀಟರ್‌ಗೆ 100 ಕೀ.ಮಿ ಮೈಲೇಜ್ ನೀಡಬಲ್ಲ ಕಾರು ಪ್ರದರ್ಶಿಸಿದ್ದಾರೆ. ಇನ್ನು BITS ಪಿಲಾನಿ ತಂಡ 120 ಕೀ.ಮಿ ಮೈಲೇಜ್ ನೀಡಬಲ್ಲ ಕಾರನ್ನ ಆವಿಷ್ಕರಿಸಿದ್ದಾರೆ. ಆದರೆ ಈ ಎಲ್ಲಾ ಕಾರುಗಳಿಗೆ  ಸೆಡ್ಡು ಹೊಡೆದಿರುವ ಸೋಮಯ್ಯ ಕಾಲೇಜು ವಿದ್ಯಾರ್ಥಿಗಳು ಕಾರು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ: 2019ರಿಂದ ಕಾರು ಖರೀದಿ ಕಷ್ಟ-ಈಗಲೇ ಮುಗಿಸಿಕೊಳ್ಳಿ ವ್ಯವಹಾರ!

click me!