ಶೀಘ್ರದಲ್ಲೇ ಹೊಸ ನಿಯಮ ಜಾರಿಗೆ ಬರಲಿದೆ. ಡ್ರೈವಿಂಗ್ ಲೈಸೆನ್ಸ್‌ನ್ನು ಆಧಾರ್ ಲಿಂಗ್ ಮಾಡಿಸಲೇಬೇಕು. ಈ ನೂತನ ನಿಯಮ ಜಾರಿಗೆ ಬರಲು ಕಾರಣವೇನು? ಇಲ್ಲಿದೆ ವಿವರ.
ನವದೆಹಲಿ(ಜ.06): ಖಾಸಗಿ ಸೇವೆ, ಮೊಬೈಲ್ ಸಿಮ್ ಖರೀದಿಸಲು ಆಧಾರ್ ಆಗತ್ಯವಿಲ್ಲ ಅನ್ನೋ ಸುಪ್ರೀಂ ಕೋರ್ಟ್ ತೀರ್ಪು ಜನರಲ್ಲಿ ನೆಮ್ಮದಿ ತರಿಸಿತ್ತು. ಇದೀಗ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. ನೂತನ ನಿಮಯದ ಪ್ರಕಾರ ಡ್ರೈವಿಂಗ್ ಲೈಸೆನ್ಸ್ ಜೊತೆ ಆಧಾರ್ ಕಾರ್ಡ್ ಖಡ್ಡಾಯವಾಗಿ ಜೋಡಣೆ ಮಾಡಬೇಕು.
ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್-ಬಜಾಜ್ ಚೇತಕ್ ಹಗ್ಗ ಜಗ್ಗಾಟ - ಗೆದ್ದವರು ಯಾರು?
undefined
ಪಂಜಾಬ್‌ನಲ್ಲಿ ನಡೆದ 106ನೇ ವಿಜ್ಞಾನ ಸಮಾವೇಶದಲ್ಲಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ನೂತನ ನಿಯಮದ ಮಾಹಿತಿ ನೀಡಿದರು. ಸದ್ಯ ಸಂಸತ್ತಿನಲ್ಲಿ ಮಸೂದೆ ಅಂಗೀಕಾರಕ್ಕೆ ಬಾಕಿ ಇದೆ. ಶೀಘ್ರದಲ್ಲೇ ಬಿಲ್ ಪಾಸಾಗಲಿದೆ. ಬಳಿಕ ಲೈಸೆನ್ಸ್ ಹೊಂದಿದ ಎಲ್ಲರೂ ಆಧಾರ್ ಲಿಂಕ್ ಮಾಡಿಸುವುದು ಖಡ್ಡಾಯವಾಗಲಿದೆ ಎಂದರು.
ಇದನ್ನೂ ಓದಿ: ರೋಡ್ ಟ್ರಿಪ್‌ನಲ್ಲಿ ಎದುರಾಗೋ 5 ಸಮಸ್ಯೆಗಳು ಮತ್ತು ಪರಿಹಾರ!
ಲೈಸೆನ್ಸ್ ಜೊತೆ ಆಧಾರ ಜೋಡಣೆಯಿಂದ ನಿಖರ ಮಾಹಿತಿ ಲಭ್ಯವಾಗಲಿದೆ. ಅಲ್ಲದೆ ನಕಲಿ ಲೈಸೆನ್ಸ್ ಮಾಡಿಸಿಕೊಂಡ ಇತರ ಸೇವೆಗಳನ್ನ ಪಡೆಯುತ್ತಿರುವುದು ನಿಲ್ಲಲಿದೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘನೆ, ದೂರು ಸೇರಿದಂತೆ ಎಲ್ಲಾ ಮಾಹಿತಿಗಳು ಸುಲಭವಾಗಿ ಪೊಲೀಸರ ಕೈಸೇರಲಿದೆ ಎಂದಿದ್ದಾರೆ.
ಇದನ್ನೂ ಓದಿ: ಅತ್ಯಂತ ದುಬಾರಿ ಕಾರು ಬಳಸೋ ಪೊಲೀಸರು ಯಾರು?
ಭಾರತದಲ್ಲಿ 124 ಕೋಟಿ ಜನರು ಆಧಾರ್ ಹೊಂದಿದ್ದಾರೆ. ನಕಲಿ ಲೈಸೆನ್ಸ್ ತಡೆಗಟ್ಟಲು ಆಧಾರ್ ಜೋಡಣೆ ಸೂಕ್ತ ಎಂದು ಆರ್ ಪ್ರಸಾದ್ ಹೇಳಿದ್ದಾರೆ. ಇಷ್ಟೇ ಅಲ್ಲ, ಲೈಸೆನ್ಸ್ ಪಡೆಯಲು ಕೂಡ ಇದು ಸಹಕಾರಿಯಾಗಲಿದೆ ಎಂದಿದ್ದಾರೆ.