ಹೊಸವರ್ಷದಿಂದ ಈ ನಗರದಲ್ಲಿ ಓಡಲಿದೆ ಡಬಲ್‌ ಡೆಕ್ಕರ್‌ ಇ-ಬಸ್‌

By Kannadaprabha NewsFirst Published Dec 4, 2022, 7:25 AM IST
Highlights

ದೇಶದ ಮೊದಲ ಇ-ಡಬ್ಬಲ್‌ ಡೆಕ್ಕರ್ ಬಸ್ ಸೇವೆ ಜನವರಿ 14 ರಿಂದ ಮುಂಬೈನಲ್ಲಿ ಆರಂಭವಾಗಲಿದೆ. ಬೃಹತ್‌ ಮುಂಬೈ ವಿದ್ಯತ್‌ ಸರಬರಾಜು ಹಾಗೂ ಸಾರಿಗೆ ಸಂಸ್ಥೆಯು (ಬಿಇಎಸ್‌ಟಿ) ಈ ಘೋಷಣೆ ಮಾಡಿದ್ದು,  2023ರ ಜನವರಿಯಿಂದ ಡಬಲ್‌ ಡೆಕ್ಕರ್‌ ಇ-ಬಸ್‌ ಸಂಚಾರ ಶುರು ಮಾಡಲಿದೆ.

ಮುಂಬೈ: ದೇಶದ ಮೊದಲ ಇ-ಡಬ್ಬಲ್‌ ಡೆಕ್ಕರ್ ಬಸ್ ಸೇವೆ ಜನವರಿ 14 ರಿಂದ ಮುಂಬೈನಲ್ಲಿ ಆರಂಭವಾಗಲಿದೆ. ಬೃಹತ್‌ ಮುಂಬೈ ವಿದ್ಯತ್‌ ಸರಬರಾಜು ಹಾಗೂ ಸಾರಿಗೆ ಸಂಸ್ಥೆಯು (ಬಿಇಎಸ್‌ಟಿ) ಈ ಘೋಷಣೆ ಮಾಡಿದ್ದು,  2023ರ ಜನವರಿಯಿಂದ ಡಬಲ್‌ ಡೆಕ್ಕರ್‌ ಇ-ಬಸ್‌ ಸಂಚಾರ ಶುರು ಮಾಡಲಿದೆ. ಈ ಕುರಿತು ಅನುಮೋದನೆ ಅಂತಿಮ ಹಂತದಲ್ಲಿದ್ದು ಶೀಘ್ರವೇ ಪೂರ್ಣಗೊಳ್ಳಲಿದೆ ಎಂದು ಸಾರಿಗೆ ಪ್ರಾಧಿಕಾರದ ಜನರಲ್‌ ಮ್ಯಾನೇಜರ್‌ ಲೊಕೇಶ್‌ ಚಂದ್ರ ಶುಕ್ರವಾರ ತಿಳಿಸಿದ್ದಾರೆ. ಅಲ್ಲದೇ ಜನವರಿ 14, 2023ರ ವೇಳೆಗೆ ಕನಿಷ್ಠ 10 ಡಬಲ್‌ ಡೆಕ್ಕರ್‌ ಬಸ್‌ ಸೇವೆ ಆರಂಭಿಸುವ ಯೋಜನೆ ಇದೆ. ಮೊದಲ ಹಂತದಲ್ಲಿ ಕ್ರಮೇಣ ಬಸ್‌ಗಳ ಸಂಖ್ಯೆಯನ್ನು 50ಕ್ಕೆ ಏರಿಸಲಾಗುವುದು ಎಂದು ಹೇಳಿದ್ದಾರೆ.

ಶೀಘ್ರ ಸೇವೆ ಪ್ರಾರಂಭಿಸಲಿರುವ ಸಿಂಗಲ್‌ ಡೆಕ್ಕರ್‌ ಬಸ್‌ಗಳಿಗೆ ಪ್ರಯಾಣಿಕರು ತಮ್ಮ ಆಸನಗಳನ್ನು ಆ್ಯಪ್‌ನಲ್ಲೇ ಕಾಯ್ದಿರಿಸಬಹುದಾಗಿದೆ. ಮುಂದಿನ ಜೂನ್‌ನಿಂದ ನಗರದಲ್ಲಿ 500 ಎಲೆಕ್ಟ್ರಿಕಲ್‌ ವಾಹನಗಳಿಂದ ಟ್ಯಾಕ್ಸಿ ಸೇವೆ (taxi services) ನೀಡುವ ಯೋಜನೆಯನ್ನೂ ಸಂಸ್ಥೆ ಹೊಂದಿದೆ. ಸದ್ಯ ಸಂಸ್ಥೆ 3,500 ಬಸ್‌ಗಳನ್ನು ಹೊಂದಿದ್ದು 45 ನಾನ್‌-ಎಸಿ ಡಬಲ್‌ ಡೆಕ್ಕರ್‌ ಡೀಸೆಲ್‌ ಬಸ್‌ ಹೊಂದಿದೆ. ಅಶೋಕ್ ಲೇಲ್ಯಾಂಡ್‌ನ (Ashok Leyland) ವಿದ್ಯುತ್ ಚಾಲಿತ ವಾಹನ ನಿರ್ಮಾಣ ವಿಭಾಗದ ಸ್ವಿಚ್ ಮೊಬಿಲಿಟಿ ಈ ಬಸ್ ಸಿದ್ಧಪಡಿಸಿದೆ. ಕಳೆದ ಆಗಸ್ಟ್ 18 ರಂದು ಮೊದಲ ಇ ಡಬ್ಬಲ್ ಡೆಕ್ಕರ್ ಬಸ್ಸನ್ನು ಸ್ವಿಚ್ ಮೊಬಿಲಿಟಿಯು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರ ಸಮ್ಮುಖದಲ್ಲಿ ಬೆಸ್ಟ್‌ಗೆ ಹಸ್ತಾಂತರಿಸಲಾಗಿತ್ತು.

KSRTC:ತಿಂಗಳಾಂತ್ಯದಲ್ಲಿ ಕೆಎಸ್‌ಆರ್ ಟಿಸಿಗೂ ಬರಲಿವೆ ಎಲೆಕ್ಟ್ರಿಕ್ ಬಸ್‌ಗಳು..!

ಮುಂಬೈ ದಾಳಿಗೆ 14 ವರ್ಷ: ಉಗ್ರರಿಗೆ ಅತ್ಯುಗ್ರ ಉತ್ತರ ನೀಡುತ್ತಿದೆ 'ಇಂದಿನ ಭಾರತ'

26/11 ದಾಳಿಯಾಗಿ 14 ವರ್ಷ: 'ನಾವು ಹೆಚ್ಚು ಧೈರ್ಯದಿಂದ ಪ್ರತಿಕ್ರಿಯಿಸಬೇಕಿತ್ತು'

click me!