19 ಸಾವಿರ XUV 700 ಹಾಗೂ ಸ್ಕಾರ್ಪಿಯೋN ಕಾರು ಹಿಂಪಡೆದ ಮಹೀಂದ್ರ!

By Suvarna News  |  First Published Dec 3, 2022, 6:13 PM IST

ಮಹೀಂದ್ರ ಬಿಡುಗಡೆ ಮಾಡಿರುವ  XUV 700 ಹಾಗೂ ಸ್ಕಾರ್ಪಿಯೋN ಕಾರು ಭಾರಿ ಬೇಡಿಕೆ ಪಡೆದಿದೆ. ದಾಖಲೆಯ ಮಾರಾಟ ಕಾಣುತ್ತಿದೆ. ಆದರೆ ದಿಢೀರ್ ಮಹೀಂದ್ರ ಘೋಷಣೆ ಗ್ರಾಹಕರ ಆತಂಕ ಹೆಚ್ಚಿಸಿದೆ. ಒಟ್ಟು 19,000  XUV 700 ಹಾಗೂ ಸ್ಕಾರ್ಪಿಯೋN ಕಾರನ್ನು ಮಹೀಂದ್ರ ಹಿಂಪಡೆಯುತ್ತಿದೆ


ನವದೆಹಲಿ(ಡಿ.03): ಅತ್ಯುತ್ತಮ ಗುಣಮಟ್ಟ, ಗರಿಷ್ಠ ಸುರಕ್ಷತೆ, ಅತ್ಯಾಕರ್ಷಕ ವಿನ್ಯಾಸ ಹಾಗೂ ಕೈಗೆಟುಕವ ದರದಲ್ಲಿ ಮಹೀಂದ್ರ ಹೊಸ ಹೊಸ ಕಾರಗಳನ್ನು ಬಿಡುಗಡೆ ಮಾಡುತ್ತಿದೆ. ಹೀಗೆ ಮಹೀಂದ್ರ ಕಾರುಗಳ ಪೈಕಿ  XUV 700 ಹಾಗೂ ಸ್ಕಾರ್ಪಿಯೋN ಭಾರಿ ಬೇಡಿಕೆ ಪಡೆದಿದೆ. ಅತೀ ಹೆಚ್ಚಿನ  ಗ್ರಾಹಕರು ಕಾರು ಬುಕ್ ಮಾಡುತ್ತಿರುವ ಕಾರಣ ಕಾರು ಡೆಲಿವರಿ ಹಾಗೂ ಕಾಯುವಿಕೆ ಕಾಲ ಹೆಚ್ಚಾಗಿದೆ. ಹೀಗೆ ಕಾರು ಪಡೆದ ಗ್ರಾಹಕರಿಗೆ ಇದೀಗ ಹೊಸ ತಲೆನೋವು ಶುರುವಾಗಿದೆ. ಮಹೀಂದ್ರ   XUV 700 ಹಾಗೂ ಸ್ಕಾರ್ಪಿಯೋN ಕಾರುಗಳಲಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಹೀಗಾಗಿ ಈ ದೋಷ ಸರಿಪಡಿಸಲು ಒಟ್ಟು 19,000 ಮಹೀಂದ್ರ   XUV 700 ಹಾಗೂ ಸ್ಕಾರ್ಪಿಯೋN ಕಾರುಗಳನ್ನು ಹಿಂಪಡೆಯುತ್ತಿದೆ.

ಜುಲೈ 1 , 2022ರಿಂದ ನವೆಂಬರ್ 1, 2022ರ ವರೆಗೆ ಉತ್ಪಾದನೆಯಾದ ಮಹೀಂದ್ರ   XUV 700(Mahindra Cars) ಹಾಗೂ ಸ್ಕಾರ್ಪಿಯೋN ಕಾರುಗಳನ್ನು ಹಿಂಪಡೆಯಲಾಗುತ್ತಿದೆ. ಈ ಕಾರುಗಳ ಕ್ಲಚ್ ಬೆಲ್ ಹೌಸಿಂಗ್‌ನಲ್ಲಿ ರಬ್ಬರ್ ಬೆಲ್ಲೋ(Faulty Clutch) ದೋಷವಾಗಿದೆ. ಇದನ್ನು ಸರಿಪಡಿಸಲು ಈ ಅವಧಿಯ ಕಾರುಗಳನ್ನು ಹಿಂಪಡೆಯಲಾಗುತ್ತಿದೆ. ಈ ದೋಷಗಳನ್ನು ಸರಿಪಡಿಸಿ ಮರಳಿ ಗ್ರಾಹಕರಿಗೆ ನೀಡಲಾಗುತ್ತದೆ.

Tap to resize

Latest Videos

undefined

 

10 ರೂಗೆ 150 ಕಿ.ಮೀ ಮೈಲೇಜ್, 6 ಜನರ ಪ್ರಯಾಣಸಿಬಲ್ಲ ಎಲೆಕ್ಟ್ರಿಕ್ ಬೈಕ್‌ಗೆ ಮನಸೋತ ಮಹೀಂದ್ರ!

6,618 ಸ್ಕಾರ್ಪಿಯೋ ಎನ್ ಕಾರು(Mahindra Cars) ಹಾಗೂ 12,566  ಮಹೀಂದ್ರ  XUV 700 ಕಾರುಗಳನ್ನು ಹಿಂಪಡೆಯಲಾಗುತ್ತದೆ.  ಗ್ರಾಹಕರು ತಮ್ಮ ಕಾರುಗಳನ್ನು ಹತ್ತಿರದ ಡೀಲರ್ ಬಳಿ ನೀಡಬಹುದು. ಇದಕ್ಕಾಗಿ ಸಮೀಪದ ಡೀಲರ್ ಸಂಪರ್ಕಿಸಲು ಮಹೀಂದ್ರ ಕಂಪನಿ ಸೂಚಿಸಿದೆ.

ಜೂನ್ 27ಕ್ಕೆ ಹೊಚ್ಚ ಹೊಸ ಮಹೀಂದ್ರ ಸ್ಕಾರ್ಪಿಯೋ ಬಿಡುಗಡೆಯಾಗಿದೆ.  ಎಸ್‌ಯುವಿಗಳ ಬಿಗ್‌ ಡ್ಯಾಡಿ’ ಅನ್ನೋ ಟ್ಯಾಗ್‌ಲೈನ್‌ ಮೂಲಕ ಫೇಮಸ್‌ ಆಗ್ತಿರುವ ಎಸ್‌ಯುವಿ ಮಹೀಂದ್ರಾ ಸ್ಕಾರ್ಪಿಯೋ ಅತ್ಯಾಕರ್ಷಕ ರೂಪದಲ್ಲಿ ಮಾರುಕಟ್ಟೆ ಪ್ರವೇಶಿಸಿದೆ. ಗ್ರಾಹಕರು ಇದೀಗ ಸ್ಕಾರ್ಪಿಯೋ ಕಾರುಗಳನ್ನು ಖರೀದಿಸಲು ಮುಗಿಬಿದ್ದಿದ್ದಾರೆ. 4*4 ಆಗಿರೋ ಕಾರಣ ಆಫ್‌ ರೋಡ್‌ ಡ್ರೈವ್‌ ಸಲೀಸು. ಅಡ್ವೆಂಚರ್‌ ರೈಡ್‌ಗೂ ಬೆಸ್ಟ್‌ ಎನ್ನಬಹುದು. ಡ್ಯುಯೆಲ್‌ ಎಲ್‌ಇಡಿ ಪ್ರೊಜೆಕ್ಟರ್‌ ಯೂನಿಟ್ಸ್‌ ಇರುವ ಕಾರಣ ಸ್ಪೋರ್ಟಿ ಹಾಗೂ ಸ್ಟೈಲಿಶ್‌ ಲುಕ್‌ನಲ್ಲಿರುತ್ತೆ ಎಂದು ನಂಬಬಹುದು. ಬೋಲ್ಡ್‌ ಡಿಸೈನ್‌, ಅತ್ಯಾಧುನಿಕ ಫೀಚರ್‌ಗಳು, ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಶನ್‌ ಇತ್ಯಾದಿ ಫೀಚರ್ಸ್ ಈ ಕಾರಿನಲ್ಲಿದೆ.

XUV 700 ಕಾಯುವ ಅವಧಿಯಲ್ಲಿಲ್ಲ ಕಡಿತ: ಬೇಗ ಸಿಗಲಿದೆ ಸ್ಕಾರ್ಪಿಯೋ ಎನ್

ಹೊಸ ಲೋಗೋದಿಂದಿಗೆ ಬಿಡುಗಡೆಯಾಗಿದ್ದ ಮಹೀಂದ್ರ XUV 700 
ಮಹೀಂದ್ರ XUV 700 ಕಾರು ಕಂಪನಿಯ ಹೊಸ ಲೋಗೋ ಮೂಲಕ ಬಿಡುಗಡೆಯಾಗಿತ್ತು. ಈ ಮೂಲಕ ಮಹೀಂದ್ರ ದಾಖಲೆಯ ಮಾರಾಟ ಕಂಡಿತ್ತು. ಹೊಸ ಲೋಗೋ ಹೊಸ ಕಾರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು.   ಮಹೀಂದ್ರ XUV 700 ಏಳು ಸೀಟಿನ ಕಾರಾಗಿದೆ. ಅತ್ಯಾಕರ್ಷಕ ವಿನ್ಯಾಸದಲ್ಲಿ ಈ ಕಾರು ಬಿಡುಗಡೆಯಾಗಿದೆ. ಇನ್ನು 7 ಮಂದಿ ಪ್ರಯಾಣಿಸಬಲ್ಲ ಆರಾಮಾದಾಯಕ ಸೀಟು ವ್ಯವಸ್ಥೆ, ಅತ್ಯಾಧುನಿಕ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ.

click me!