ತನ್ನದೇ ಬೈಕ್ ಸುಟ್ಟು ಆಕ್ರೋಶ; ವಾಹನವೂ ಹೋಯ್ತು, ಅರೆಸ್ಟ್ ಆದ!

Suvarna News   | Asianet News
Published : Jan 03, 2020, 05:27 PM IST
ತನ್ನದೇ ಬೈಕ್ ಸುಟ್ಟು ಆಕ್ರೋಶ; ವಾಹನವೂ ಹೋಯ್ತು, ಅರೆಸ್ಟ್ ಆದ!

ಸಾರಾಂಶ

ದೆಹಲಿ ಯುವಕರಿಗೆ ಕೋಪ ಹೆಚ್ಚೋ ಅಥವಾ ದೆಹಲಿ ಯುವಕರೇ ಹೀಗೆನಾ ಅನ್ನೋ ಪ್ರಶ್ನೆ ಮೂಡುವುದು ಸಹಜ. ಕಾರಣ ಪೊಲೀಸರ ವಿರುದ್ಧದ ಆಕ್ರೋಶಕ್ಕೆ ತಮ್ಮ ಬೈಕ್‌ಗಳನ್ನೇ ಸುಡುವ ಪದ್ಧತಿ ಇತರೆಡೆಗಳಿಂತ ದೆಹಲಿಯಲ್ಲಿ ಹೆಚ್ಚು.  ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ. ಯುವಕನ ಆಕ್ರೋಶ ಇಳಿದಾಗ ಬೈಕ್ ಸುಟ್ಟು ಕರಕಲಾಗಿತ್ತು, ಆತ ಪೊಲೀಸರ ಅತಿಥಿಯಾಗಿದ್ದ.

ದೆಹಲಿ(ಜ.03): ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಬಳಿಕ ದುಬಾರಿ ದಂಡ ವಿಧಿಸಿದ ಹಲವು ಪ್ರಕರಣಗಳನ್ನು ಸುವರ್ಣನ್ಯೂಸ್.ಕಾಂ ವರದಿ ಮಾಡಿದೆ. ಅದರಲ್ಲೂ ದುಬಾರಿ ದಂಡ ನೋಡಿ ರೊಚ್ಚಿಗೆದ್ದ ಯುವಕರು ತಮ್ಮ ಬೈಕ್ ಸುಟ್ಟ ಘಟನೆಗಳೂ ಹೆಚ್ಚು ಸದ್ದು ಮಾಡಿದೆ. ದಂಡ ನೋಡಿ ಬೈಕ್ ಸುಟ್ಟ ಪ್ರಕರಣಗಳೆಲ್ಲಾ ದೆಹಲಿಯಲ್ಲೇ ದಾಖಲಾಗಿದೆ. ಇಧೀಗ ಈ ಸಾಲಿಗೆ ಮತ್ತೊಂದು ಸೇರಿಕೊಂಡಿದೆ. 

ಇದನ್ನೂ ಓದಿ: ದ್ವಿಚಕ್ರ ಸವಾರನಿಗೆ ದುಬಾರಿ ದಂಡ; ಮೊತ್ತ ಕೇಳಿ ಬೈಕನ್ನೇ ಸುಟ್ಟ!

ದಕ್ಷಿಣ ದೆಹಲಿಯ ಟ್ರಾಫಿಕ್ ಪೊಲೀಸರು ಎಂದಿನಂತೆ ಪರಿಶೀಲನೆಯಲ್ಲಿ ತೊಡಗಿದ್ದರು. ಹೆಲ್ಮೆಟ್ ರಹಿತ ಪ್ರಯಾಣ ಮಾಡುತ್ತಿದ್ದ ಬೈಕ್ ರೈಡರ್ ನಿಲ್ಲಿಸಿದ ಪೊಲೀಸರು, ದಂಡ ಹಾಕಿದ್ದಾರೆ. ರೈಡರ್ ವಿಕಾಸ್ ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದಾನೆ.  ಪೊಲೀಸರು ವಾದ ಮಾಡದೆ ದಂಡ ಕಟ್ಟಲು ಸೂಚಿಸಿದ್ದಾರೆ.

ಇದನ್ನೂ ಓದಿ: Zebra ಲೈನ್ ಕ್ರಾಸ್: ಇನ್ಸ್‌ಪೆಕ್ಟರ್ ಜನರಲ್ ಪೊಲೀಸ್ ಕಾರಿಗೆ ಡಬಲ್ ಫೈನ್!

ಇದರಿಂದ ರೊಚ್ಚಿಗೆದ್ದ ಸವಾರ ವಿಕಾಸ್ ಪೆಟ್ರೋಲ್ ಟ್ಯಾಂಕ್ ಪೈಪ್ ಕಿತ್ತು ಬೈಕ್ ಮೇಲೆ ಪೆಟ್ರೋಲ್ ಚೆಲ್ಲಿದ್ದಾನೆ. ಇಷ್ಟೇ ಅಲ್ಲ ನಡು ರಸ್ತೆಯಲ್ಲೇ ಬೆಂಕಿ ಹಚ್ಚಿದ್ದಾನೆ. ಬೈಕ್ ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ. ಪೊಲೀಸರು ತಕ್ಷಣವೇ ಅಗ್ನಿಶಾಮಕಕ್ಕೆ ಕರೆ ಮಾಡಿದ್ದಾರೆ. ಅಷ್ಟರಲ್ಲಿ ಬೈಕ್ ಬಹುತೇಕ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ಸಿಬ್ಬಂಧಿ ಬೆಂಕಿ ನಂದಿಸಿದರು.

 

ಇದನ್ನೂ ಓದಿ:10 ವರ್ಷದ ಬಾಲಕನಿಂದ ಕಾರು ಡ್ರೈವಿಂಗ್; ಪೋಷಕರಿಗೆ ಬಿತ್ತು ಬರೆ!.

ಸಾವರ ವಿಕಾಸ್ ಮೇಲೆ ಪೊಲೀಸರು ನಿಯಮ ಉಲ್ಲಂಘನೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಸಾರ್ವಜನಿಕ ಪ್ರದೇಶದಲ್ಲಿ ಬೆಂಕಿ ಹಚ್ಚಿ ಇತರರ ಜೀವದ ಜೊತೆ ಚೆಲ್ಲಾಟವಾಡಿದ, ಅಜಾಗರೂಕತೆಯಿಂದ ವರ್ತಿಸಿದ ಪ್ರಕರಣಗಳನ್ನು ದಾಖಲಿಸಿ ಬಂಧಿಸಿದ್ದಾರೆ. 

ಸವಾರನ ಆಕ್ರೋಶ ತಣ್ಣಗಾದಾಗ ಪರಿಸ್ಥಿತಿ ಕೈಮೀರಿತ್ತು. ಅಷ್ಟರಲ್ಲೇ ತನ್ನ ಬೈಕ್ ಸುಟ್ಟು ಕರಕಲಾಗಿತ್ತು. ಇಷ್ಟೇ ನಾಲ್ಕೈದು ಪ್ರಕರಣಗಳು ಹಾಗೂ ಬಂಧನ ಸವಾರನಿಗೆ ಸರಿಯಾದ ಪಾಠ ಕಲಿಸಿದೆ.

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ