ಗೊಂದಲ ಸೃಷ್ಟಿಸಿದ ಹೊಸ ಮೋಟಾರು ವಾಹನ ಕಾಯ್ದೆಯ ತಿದ್ದುಪಡಿ ಕಾನೂನು| ಸಂಚಾರ ನಿಯಮ ಉಲ್ಲಂಘಿಸಿದವರ ಪಾಲಿಗೆ ಹೊಸ ಕಾನೂನು ಕಬ್ಬಿಣದ ಕಡಲೆ| ನಿಯಮ ಉಲ್ಲಂಘನೆಗೆ ಕಟ್ಟಬೇಕಾದ ದಂಡದ ಮೊತ್ತ ದಂಗುಬಡಿಸುತ್ತದೆ| ಸರಿಯಾದ ದಾಖಲೆಗಳಿಲ್ಲದೆ ದ್ವಿಚಕ್ರ ವಾಹನ ಚಲಾಯಿಸಿದ್ದಕ್ಕೆ 23 ಸಾವಿರ ರೂ ದಂಡ| ದೆಹಲಿಯ ದಿನೇಶ್ ಮದನ್'ಗೆ 23 ಸಾವಿರ ರೂ. ದಂಡ ವಿಧಿಸಿದ ಪೊಲೀಸರು| ದಿನೇಶ್ ಓಡಿಸುತ್ತಿದ್ದ ಸ್ಕೂಟಿ ಬೆಲೆ ಕೇವಲ 15 ಸಾವಿರ ರೂ.|
ನವದೆಹಲಿ(ಸೆ.04): ಮೋಟಾರು ವಾಹನ ಕಾಯ್ದೆಯ ತಿದ್ದುಪಡಿ ಕಾನೂನು ದೇಶಾದ್ಯಂತ ಗೊಂದಲಮಯ ವಾತಾವರಣ ಸೃಷ್ಟಿಸಿದ್ದು, ಸಂಚಾರ ನಿಯಮ ಉಲ್ಲಂಘಿಸಿದವರ ಪಾಲಿಗೆ ಅಕ್ಷರಶಃ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.
ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿರುವ ಹೊಸ ಮೋಟಾರು ವಾಹನ ಕಾಯ್ದೆಯ ತಿದ್ದುಪಡಿ ಕಾನೂನು ಸಂಚಾರ ನಿಯಮವನ್ನು ಮತ್ತಷ್ಟು ಕಠಿಣಗೊಳಿಸಿದೆ. ಆದರೆ ನಿಯಮ ಉಲ್ಲಂಘಿಸಿದರೆ ಕಟ್ಟಬೇಕಾದ ದಂಡದ ಮೊತ್ತ ಮಾತ್ರ ನಿಜಕ್ಕೂ ದಂಗು ಬಡಿಸುವಂತಿದೆ.
Dinesh Madan has been charged Rs 23,000 as challan by Gurugram Traffic Police,says,"I wasn't wearing helmet&didn't have Registration Certificate (RC).Traffic police asked me to give him my scooty's key but I denied. Immediately he printed a challan of Rs 23,000&seized my vehicle" pic.twitter.com/xCqi5iorea
— ANI (@ANI)undefined
ಸರಿಯಾದ ದಾಖಲೆಗಳಿಲ್ಲದೆ ದ್ವಿಚಕ್ರ ವಾಹನ ಚಲಾಯಿಸಿದ್ದಕ್ಕೆ ದೆಹಲಿ ಮೂಲದ ವ್ಯಕ್ತಿಯೊಬ್ಬರಿಗೆ ಬರೊಬ್ಬರಿ 23 ಸಾವಿರ ರೂ ದಂಡ ವಿಧಿಸಲಾಗಿದೆ. ಇಲ್ಲಿನ ದಿನೇಶ್ ಮದನ್ ಎಂಬುವರು ಹೆಲ್ಮೆಟ್ ಇಲ್ಲದೆಯೆ ವಾಹನ ಚಲಾಯಿಸಿದ್ದಕ್ಕೆ ಹಾಗೂ ಸರಿಯಾದ ದಾಖಲೆಗಳನ್ನು ಹೊಂದಿರದ ಕಾರಣ ಪೊಲೀಸರು ಬರೋಬ್ಬರಿ 23 ಸಾವಿರ ರೂ. ದಂಡ ವಿಧಿಸಿದ್ದಾರೆ.
Dinesh Madan: Value of my scooty is around 15,000.I even got a copy of RC on WhatsApp from home but by then he had printed.The amount could have been less if he had waited for a while. I want that fine should be relaxed. From now on I will always carry my documents. https://t.co/dJo5BeIcGD
— ANI (@ANI)ವಿಚಿತ್ರ ಎಂದರೆ ದಿನೇಶ್ ಚಲಾಯಿಸುತ್ತಿದ್ದ ಸ್ಕೂಟಿಯ ಬೆಲೆ ಕೇವಲ 15 ಸಾವಿರ ರೂ. ಇದ್ದು, ಚಾಲನಾ ಪರವಾನಗಿ, ವಿಮೆ, ನೋಂದಣಿ ಪ್ರಮಾಣ ಪತ್ರ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ಹೊಂದಿಲ್ಲದ ಕಾರಣಕ್ಕೆ ದಿನೇಶ್ ಅವರಿಗೆ 23 ಸಾವಿರ ರೂ. ದಂಡ ವಿಧಿಸಲಾಗಿದೆ.