ರಾಜಧಾನಿಯಲ್ಲಿ 1000 ಎಲೆಕ್ಟ್ರಿಕ್ ಬಸ್ - ಬಿಲ್ ಪಾಸ್ ಮಾಡಿದ ಸರ್ಕಾರ!

By Web Desk  |  First Published Mar 2, 2019, 4:21 PM IST

ಮಾಲಿನ್ಯ ತಡೆ ಹಾಗೂ ಇಂಧನ ಬಳಕೆಯನ್ನು ಕಡಿಮೆ  ಮಾಡಲು ದೇಶದಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ಇದರ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದೆಹೆಲಿಯ ಮಹತ್ವದ ಹೆಜ್ಜೆ ಇಟ್ಟಿದೆ.


ನವದೆಹಲಿ(ಮಾ.02): ಕೇಂದ್ರ ಸರ್ಕಾರ FAME ii ಯೋಜನೆ ಜಾರಿಗೊಳಿಸುತ್ತಿದ್ದಂತೆ ಎಲೆಕ್ಟ್ರಿಕ್ ವಾಹನಗಳು ಖರೀದಿಗೆ ಎಲ್ಲಾ ಸರ್ಕಾರಗಳು ಮುಂದಾಗಿದೆ. ಇನ್ನು ಗ್ರಾಹಕರು ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಕಾಯುತ್ತಿದ್ದಾರೆ. ಇದೀಗ ದೆಹಲಿ ಸರ್ಕಾರ 1000 ಬಸ್ ಖರೀದಿಸಲು ಕ್ಯಾಬಿನ್ ಅಪ್ರೂವಲ್ ತೆಗೆದುಕೊಂಡಿದೆ. ಈ ಮೂಲಕ ದೆಹಲಿ ಮಾಲಿನ್ಯ ನಿಯಂತ್ರಿಸಲು ಮಹತ್ವದ ಹೆಜ್ಜೆ ಇಟ್ಟಿದೆ. 

ಇದನ್ನೂ ಓದಿ: ಸುರಕ್ಷತೆಯಲ್ಲಿ 5 ಸ್ಟಾರ್ ಪಡೆದ ಭಾರತದ ಮತ್ತೊಂದು ಕಾರು!

Latest Videos

undefined

ಮಾಲಿನ್ಯ ತಡೆಗಟ್ಟಲು ದೆಹಲಿ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. 1000 ಎಲೆಕ್ಟ್ರಿಕ್ ಬಸ್ ಖರೀದಿಗೆ ಅಪ್ರೋವಲ್ ಪಡೆದಿದೆ. ದೆಹಲಿಯನ್ನು ಮಾಲಿನ್ಯದಿಂದ ಮುಕ್ತವಾಗಿಸಲು ಹಾಗೂ ಶುಚಿಯಾಗಿಸಲು ಸಹಕಾರಿಯಾಗಿದೆ. ಇದು ಐತಿಹಾಸಿಕ ದಿನ ಎಂದು ದೆಹಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಬಣ್ಣಿಸಿದ್ದಾರೆ. 

ಇದನ್ನೂ ಓದಿ: 20ಕ್ಕಿಂತ ಹೆಚ್ಚು ವಾಹನ ಕ್ಯೂ ಇದ್ದರೆ ಟೋಲ್ ಕಟ್ಟಬೇಕಿಲ್ಲ!

1000 ಎಲೆಕ್ಟ್ರಿಕ್ ಬಸ್ ಖರೀದಿ ಮೊತ್ತ ಸರಿಸುಮಾರು 2500 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ದೆಹಲಿ ಮಾಲಿನ್ಯ ತಡೆಗಟ್ಟುವುದರ ಜೊತೆಗೆ ಸಾರಿಗೆ ಪ್ರಯಾಣ ದರ ಕೂಡ ಕಡಿಮೆಯಾಗಲಿದೆ. 

click me!