ಸಮುದ್ರಯಾನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಇದೀಗ ಟೈರೂನ್ ಕಂಪೆನಿ ಸೆಲೆಬ್ರಿಟಿ ಎಡ್ಜ್ ಅನ್ನೋ ನೌಕಾಯಾನ ಆರಂಭಿಸುತ್ತಿದೆ. ಲಕ್ಸುರಿ ನೌಕೆ ಹಾಗೂ ನೌಕಾಯಾನದ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಮುಂಬೈ(ಮಾ.02): ಕಣ್ಣು ಹಾಯಿಸಿದಷ್ಟುದೂರ ನೀಲಿ ಕಡಲು, ಮೇಲೆ ನೀಲಾಕಾಶ, ಅಷ್ಟೆತ್ತರ ಜಿಗಿದು ನೀರೆರೆಚುವ ಮೀನುಗಳು.. ಗಂಭೀರವಾಗಿ ತೇಲುವ ಹಡಗಿನ ಡೆಕ್ ಮೇಲೆ ಕುಳಿತು ಕಪ್ ಟೀ ಹೀರುತ್ತಾ ಈ ಸೊಗಸನ್ನು ಆಸ್ವಾದಿಸುವ ನಾವು ನೀವು. ಇದು ಕೇವಲ ಕಲ್ಪನೆಯಲ್ಲಷ್ಟೇ ಸಾಧ್ಯ ಅಂತಂದುಕೊಂಡರೆ ನಿಮ್ಮ ಊಹೆ ತಪ್ಪು. ಈ ಕಲ್ಪನೆಗೆ ಜೀವ ತುಂಬಲು ಈ ನೀಲಿ ಸುಂದರಿ ಟೈರೂನ್‌ನ ‘ಸೆಲೆಬ್ರಿಟಿ ಎಡ್ಜ್’ ಸಿದ್ಧವಾಗಿ ನಿಂತಿದೆ.
undefined
ಇದನ್ನೂ ಓದಿ: ಕ್ಯಾಬ್, ಅಟೋ ಆಯ್ತು, ಭಾರತಕ್ಕೆ ಬಂತು ಉಬರ್ ಬೋಟ್!
ಜನರ ನೌಕಾಯಾನದ ಅಭಿರುಚಿ ಹೆಚ್ಚುತ್ತಿದೆ. ಇದನ್ನೇ ಬಂಡವಾಳವಾಗಿಸಿ ಮಾರ್ಕೆಟಿಂಗ್ ಬೆಳೆಯುತ್ತಿದೆ. ಐಷಾರಾಮಿ ನೌಕೆಗಳು ಅತ್ಯುತ್ತಮ ಸಮುದ್ರಯಾನದ ಅನುಭವ ನೀಡಲು ತುದಿಗಾಲಲ್ಲಿ ನಿಂತಿವೆ. ಇಂಥಾ ಸೆಲೆಬ್ರಿಟಿ ಲಕ್ಸುರಿ ನೌಕೆಗಳಲ್ಲಿ ಪ್ರಮುಖವಾದದ್ದು ಟೈರೂನ್. ಇದು ರಾಯಲ್ ಕೆರಿಬಿಯನ್ ಕ್ರೂಸೆಸ್ ಕಂಪೆನಿಗೆ ಸೇರಿದ ಹಡಗು. ಇದರ ಹೊಸ ಆವಿಷ್ಕಾರ ‘ಸೆಲೆಬ್ರಿಟಿ ಎಡ್ಜ್’ ಎಪ್ರಿಲ್ ತಿಂಗಳಲ್ಲಿ ಇದು ಭಾರತದ ಸಮುದ್ರದಲ್ಲಿ ವಿರಮಿಸಿ ನಂತರ ಜಗತ್ತಿನ ನಾನಾ ಭಾಗಗಳಲ್ಲಿ ಸಂಚರಿಸಲಿದೆ. ಕೊಂಚ ದುಬಾರಿಯಾದರೂ ಬಹಳ ಲಕ್ಸುರಿಯಿಂದ ಕೂಡಿದ ಈ ಹಡಗಿನ ಪ್ರಯಾಣ ಸೆಲೆಬ್ರಿಟಿಗಳಿಗೆ ತಕ್ಕಂತಿದೆ.
ಇದನ್ನೂ ಓದಿ: 20ಕ್ಕಿಂತ ಹೆಚ್ಚು ವಾಹನ ಕ್ಯೂ ಇದ್ದರೆ ಟೋಲ್ ಕಟ್ಟಬೇಕಿಲ್ಲ!
ಟೈರೂನ್‌ನ ವಿಶೇಷತೆ ಏನು
ವೈಭವೋಪೇತ ಈ ಹಡಗಿನಲ್ಲಿ 2900 ಚಿಲ್ರೆ ಜನರು ಆರಾಮವಾಗಿ ಪ್ರಯಾಣಿಸಬಹುದು. ಈ ಪ್ರವಾಸಿಗರ ಸೇವೆಗೆಂದೇ ಸುಮಾರು 1400 ಜನ ಸೇವಕರಿದ್ದಾರೆ. ಅದ್ಭುತ ವಾಸ್ತುಶಿಲ್ಪ, ನಾನಾ ಸೌಲಭ್ಯಗಳು ಇದರಲ್ಲಿವೆ. ಅತಿಥಿಗಳ ಅನುಕೂಲಕ್ಕೆ ತೇಲುವ ವೇದಿಕೆ ಇದೆ. ಇದರಲ್ಲಿ ನಿಂತು, ವಿರಮಿಸಿ ಸಾಗರದ ಸೌಂದರ್ಯ ಸವಿಯಬಹುದು. ಬಾಲ್ಕನಿಯ ಸೌಲಭ್ಯವಿದೆ. ಇಲ್ಲಿಂದಲೂ ಕಡಲಿನ ನೋಟ ದಕ್ಕುತ್ತದೆ. ಉಳಿದಂತೆ ಸುಸಜ್ಜಿತ ಹೊರಾಂಗಣವಿದೆ. ಅಚ್ಚರಿ ಪಡುವಂಥಾ ಇನ್ನೊಂದು ಅಂಶ ಅಂದರೆ ಈ ಹಡಗಿನಲ್ಲಿ ಒಂದು ಪಾರ್ಕ್ ಕೂಡಾ ಇದೆ. ಸಮುದ್ರ ನೀರು ನೋಡಿ ನೋಡಿ ಬೇಜಾರಾದ್ರೆ ಪಾರ್ಕ್ನಲ್ಲಿ ಗಾಳಿ ಸೇವನೆ ಮಾಡಬಹುದು. ಸಿನಿಮಾ ನೋಡ್ಬಹುದು, ಆಟ ಆಡ್ಬಹುದು, ಆರ್ಡರ್ ಮಾಡಿದ ಕೆಲಹೊತ್ತಲ್ಲೇ ಇಷ್ಟದ ತಿಂಡಿ ತಿನಿಸು ಕಣ್ಮುಂದೆ ಇರುತ್ತೆ.
ಇದನ್ನೂ ಓದಿ: ಗೊತ್ತಿಲ್ದೇ ಇರೋ ಟ್ರಾಫಿಕ್ ನಿಯಮ -ಅಪರಿಚಿತರಿಗೆ ಲಿಫ್ಟ್, ಕಾರಿನಲ್ಲಿ ಟಿವಿ ನಿಷೇಧ!
ಸಮುದ್ರಯಾನ ಉತ್ತೇಜನಕ್ಕೆ ರೋಡ್‌ಶೋ
ಜನರಲ್ಲಿ ಸಮುದ್ರಯಾನದ ಅಭಿರುಚಿ ಹೆಚ್ಚಿಸಲು ಟೈರೂನ್, ಸೆಲೆಬ್ರಿಟಿ ಎಡ್ಜ್ ಸಹಭಾಗಿತ್ವದಲ್ಲಿ ದೇಶದ ವಿವಿದೆಡೆ ರೋಡ್‌ಶೋ ಅಭಿಯಾನ ನಡೆಸುತ್ತದೆ. ಈ ಪ್ರಯುಕ್ತ ಬೆಂಗಳೂರಿನ ಕೆಲ ಸಮಯದ ಹಿಂದೆ ಮೊದಲ ರೋಡ್‌ಶೋ ನಡೆದಿತ್ತು. ಇದರಲ್ಲಿ ಸಮುದ್ರಯಾನದ ಕನಸು ನನಸಾಗಿಸುವ ‘ಸೆಲೆಬ್ರಿಟಿ ಎಡ್ಜ್’ ಬಗ್ಗೆ ಪ್ರಚಾರಾಂದೋಲನ ನಡೆಯಿತು. ನಂತರ ಹೈದ್ರಾಬಾದ್, ಪುಣೆ, ಕೊಲ್ಕತ್ತಾ ಮೊದಲಾದೆಡೆ ಈ ಅಭಿಯಾನ ಮುಂದುವರಿದಿದೆ.