ಸ್ವಂತ ಕಾರನ್ನೇ ಕದ್ದು ಅರೆಸ್ಟ್ ಆದ ಉದ್ಯಮಿ-ಕಾರಣ ವಿಚಿತ್ರ!

By Web Desk  |  First Published Jun 13, 2019, 9:54 PM IST

ಸ್ವಂತ ಮರ್ಸಡೀಸ್ ಬೆಂಝ್ ಕಾರನ್ನು ಕದ್ದ ಉದ್ಯಮಿ ಇದೀಗ ಅರೆಸ್ಟ್ ಆಗಿದ್ದಾರೆ. ಶ್ರೀಮಂತ ಉದ್ಯಮಿ ತನ್ನ ಕಾರನ್ನೇ ಕದಿದ್ದು ಯಾಕೆ? ಈ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದು ಹೇಗೆ? ಇಲ್ಲಿದೆ ವಿವರ.


ಮುಂಬೈ(ಜೂ.13): ವಾಹನ  ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ವಿಚಿತ್ರ ಪ್ರಕರಣವೊಂದು ಬೆಳಕಿಗಗೆ ಬಂದಿದೆ. ಸ್ವಂತ ಕಾರನ್ನೇ ಕದ್ದು ಇದೀಗ ಪೊಲೀಸರ ಅತಿಥಿಯಾಗಿರೋ ಘಟನೆ ಮುಂಬೈನಲ್ಲಿ ನಡೆದಿದೆ. ದೆಹಲಿ ಮೂಲದ ಉದ್ಯಮಿ ವಿಜಯ್ ರಾಮ್‌ಲಾಲ್ ಧವನ್ ತಮ್ಮ ಮರ್ಸಡೀಸ್ ಬೆಂಝ್ ಕಾರನ್ನೇ ಕದ್ದು ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: ತಯಾರಾದ ಕಾರು, ಬೈಕ್‌ ಕೊಳ್ಳುವವರೇ ಇಲ್ಲ!

Latest Videos

undefined

ಉದ್ಯಮಿ ಧವನ್ ತಮ್ಮ ಗೆಳೆಯನಿಗೆ ಒಂದು ದಿನದ ಮಟ್ಟಿಗೆ ಮರ್ಸಡೀಸ್ ಬೆಂಝ್ ಕಾರು ಬೇಕು ಎಂದು ಹೇಳಿ ತಮ್ಮ ಕಂಪನಿಯ ಇಬ್ಬರು ಸಹದ್ಯೋಗಿಗಳಿಗೆ ಕಾರನ್ನು ದೆಹಲಿಯಿಂದ ಮುಂಬೈಗೆ ಕೊಂಡೊಯ್ಯಲು ಹೇಳಿದ್ದಾರೆ. ಧವನ್ ಮಾತಿನಂತೆ ಸಹದ್ಯೋಗಿಗಳಿಬ್ಬರು ಕಾರಿನೊಂದಿಗೆ ಮುಂಬೈ ತಲುಪಿದ್ದಾರೆ. ಇಷ್ಟೇ ಅಲ್ಲ ಸಹದ್ಯೋಗಿಗಳಿಬ್ಬರಿಗೂ ರಾಕ್ ಮಾರ್ಗ್ ಬಳಿಯ ಕಮ್ಯುನಿಟಿ ಲಾಡ್ಜ್‌ನಲ್ಲಿ ತಂಗಲು ಹೇಳಿದ್ದಾರೆ.

ಇದನ್ನೂ ಓದಿ: ಮಹೀಂದ್ರ ಎಲೆಕ್ಟ್ರಿಕ್ ಆಟೋ ಬಿಡುಗಡೆ-ಪ್ರತಿ ಕಿ.ಮೀಗೆ 50 ಪೈಸೆ!

ಲಾಡ್ಜ್‌ನಲ್ಲಿ ಕಾರು ಪಾರ್ಕ್ ಮಾಡಿದ ಉದ್ಯಮಿ ಧವನ್ ಸಹದ್ಯೋಗಿಗಳು ಮುಂಬೈ ಸುತ್ತಾಡಲು ತೆರಳಿದ್ದಾರೆ. ಸಂಜೆ ವಾಪಾಸ್ಸಾದ ಸಹದ್ಯೋಗಿಗಳು ಕಾರು ಪಾರ್ಕ್ ಮಾಡಿದ ಸ್ಥಳದಲ್ಲೇ ಇರುವುದನ್ನು ಖಾತ್ರಿ ಮಾಡಿಕೊಂಡಿದ್ದಾರೆ. ಆದರೆ ಮರು ದಿನ ಬೆಳಗ್ಗೆ ನೋಡುವಾಗ ಕಾರು ಲಾಡ್ಜ್ ಮುಂಭಾಗದಲ್ಲಿರುವ ಪಾರ್ಕಿಂಗ್‌ನಲ್ಲಿ ಇರಲಿಲ್ಲ. ತಕ್ಷಣವೇ ಉದ್ಯಮಿ ಧವನ್‌ಗೆ ಫೋನ್ ಮುಖಾಂತರ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತೀಯರ ನಂಬಿಕಸ್ಥ ವಾಹನ ಯಾವುದು?- ಇಲ್ಲಿದೆ ಲಿಸ್ಟ್!

ಉದ್ಯಮಿ ಧವನ್ ಸ್ಥಳೀಯ ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದ್ದಾರೆ. ಇದರಂತೆ ರಾಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ಮರ್ಸಡೀಸ್ ಬೆಂಝ್ ಶೂ ರೂಂ ಸಂಪರ್ಕಿಸಿ ಕಾರಿನ ವಿಶೇಷತೆ ಕುರಿತು ಮಾಹಿತಿ ಪಡೆದಿದ್ದಾರೆ. ಉದ್ಯಮಿ ಧವನ್ ಬಳಿ ಇದ್ದ ಮರ್ಸಡೀಸ್ ಬೆಂಝ್ ಎ ಕ್ಲಾಸ್ ಕಾರು ಕೀ ಇಲ್ಲದೆ ಯಾವುದೇ ಕಾರಣಕ್ಕೂ ಕಾರು ಸ್ಟಾರ್ಟ್ ಆಗುವುದಿಲ್ಲ ಎಂದಿದ್ದಾರೆ. ಇಷ್ಟೇ ಅಲ್ಲ ಇತ್ತೀಚೆಗೆ ಧವನ್ ಹೆಚ್ಚುವರಿ ಕೀ ಪಡೆದಿದ್ದಾರೆ ಅನ್ನೋ ಮಾಹಿತಿಯೂ ಸಿಕ್ಕಿದೆ.

ಇದನ್ನೂ ಓದಿ: ಅಂಬಾನಿ ಆಫೀಸ್ ಹೋಗಲು ಬೇಕು 14 ಕೋಟಿ ಮೌಲ್ಯದ ಬೆಂಗಾವಲು ಕಾರು!

ಈ  ಮಾಹಿತಿ ಆಧರಿಸಿ ಮುಂಬೈನ ರಾಕ್ ಮಾರ್ಗ್ ಸೇರಿದಂತೆ ಪ್ರಮುಖ ರಸ್ತೆಗಳ ಸಿಸಿಟಿವಿ ಪರಿಶೀಲಿಸಿದಾಗ  ಸ್ವತಃ ಉದ್ಯಮಿ ಧವನ್ ಕಾರು ಚಲಾಯಿಸುತ್ತಿರುವ ದೃಶ್ಯ ಕಂಡುಬಂದಿದೆ.  ತಕ್ಷಣವೇ ಕಾರ್ಯಪೃವತ್ತರಾದ ಪೊಲೀಸರು ಉದ್ಯಮಿ ಧವನ್‌ನನ್ನು ಅರೆಸ್ಟ್ ಮಾಡಿ ಕಾರು ಸೀಝ್ ಮಾಡಿದ್ದಾರೆ. ಸ್ವಂತ ಕಾರನ್ನೇ ಕದ್ದು, ವಿಮಾ ಕಂಪನಿಯಿಂದ ಹಣ ಪಡೆಯುವ ಉದ್ದೇಶದಿಂದ ಧವನ್ ಈ ರೀತಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈ ಹಿಂದೆ ಹಲವು ಭಾರಿ ಈ ರೀತಿ ಪ್ರಕರಣಗಳು ದಾಖಲಾಗಿದೆ. ಇದೀಗ ಶ್ರೀಮಂತ ಉದ್ಯಮಿ ಈ ರೀತಿ ಮಾಡಿರುವುದು ದುರಂತ. 

click me!