ಶೀಘ್ರದಲ್ಲೇ ಸುಜುಕಿ ಜಿಕ್ಸರ್ 250 ಸಿಸಿ ಬೈಕ್ ಬಿಡುಗಡೆ !

By Web Desk  |  First Published Dec 30, 2018, 9:52 PM IST

ಸುಜುಕಿ ಸಂಸ್ಥೆ ನೂತನ ಜಿಕ್ಸರ್ 250 ಸಿಸಿ ಬೈಕ್ ಬಿಡುಗಡೆ ಮಾಡಲಿದೆ. ಹಲವು ವಿಶೇಷತೆಗಳೊಂದಿಗೆ ನೂತನ ಬೈಕ್  ಮಾರುಕಟ್ಟೆ ಪ್ರವೇಶಿಸಲಿದೆ. ಇದರ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
 


ನವದೆಹಲಿ(ಡಿ.30): ಸುಜುಕಿ ಸಂಸ್ಥೆಯ ಜಿಕ್ಸರ್ 150 ಬೈಕ್ ಮಾರಾಟದಲ್ಲಿ ದಾಖಲೆ ಬರೆದಿತ್ತು. ಇದೀಗ ಜಿಕ್ಸ್ 250 ಸಿಸಿ ಬೈಕ್ ಬಿಡುಗಡೆ ಮಾಡಲು ಸುಜುಕಿ ಮುಂದಾಗಿದೆ. ಸ್ಪೋರ್ಟ್ ಬೈಕ್ 2019ರ ಆರಂಭದಲ್ಲೇ ಬಿಡುಗಡೆಯಾಗಲಿದೆ. ಕೆಲ ಬದಲಾವಣೆಯೊಂದಿಗೆ ನೂತನ ಬೈಕ್ ಮಾರುಕಟ್ಟೆ ಪ್ರವೇಶಿಸಲಿದೆ.

ಇದನ್ನೂ ಓದಿ: 2019ರಲ್ಲಿ ಹ್ಯುಂಡೈ ಕ್ರೆಟಾಗೆ ತೀವ್ರ ಪೈಪೋಟಿ- ಬಿಡುಗಡೆಯಾಗಲಿದೆ 4 ಕಾರು!

Tap to resize

Latest Videos

undefined

ಸುಜುಕಿ ಜಿಕ್ಸರ್ 250 ಬೈಕ್, GSX-S750 ಹಾಗೂ  GSX-S1000 ಬೈಕ್ ವಿನ್ಯಾಸದಲ್ಲಿ ರಸ್ತೆಗಿಳಿಯಲಿದೆ. ಎಲ್ಇಡಿ ಹೆಡ್ ಹಾಗೂ ಟೈಲ್ಸ್ ಲ್ಯಾಂಪ್ಸ್, ಡಿಜಿಟಲ್ ಡಿಸ್‌ಪ್ಲೇ, ಸ್ಲಿಟ್ ಸೀಟ್ ಹಾಗೂ ಕಂಫರ್ಟ್ ರೈಡ್ ನೂತನ ಬೈಕ್ ವಿಶೇಷತೆ.

ಇದನ್ನೂ ಓದಿ: ಮಂಜು ಮುಸುಕಿದ ವಾತಾವರಣದಲ್ಲಿ ಸೇಫ್ ಡ್ರೈವಿಂಗ್- ಇಲ್ಲಿದೆ ಟಿಪ್ಸ್!

ಹೆಚ್ಚು ಬಲಿಷ್ಠ ಎಂಜಿನ್ ಹೊಂದಿರುವ ನೂತನ ಬೈಕ್ ಡುಯೆಲ್ ಚಾನೆಲ್ ABS(ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಮ್) ಹೊಂದಿದೆ. ನೂತನ ಸುಜುಕಿ ಬೈಕ್ ಯಮಾಹ , ಬಜಾಜ್, ಹೊಂಡಾ CBR250R ಸೇರಿದಂತೆ 250 ಸೆಗ್ಮೆಂಟ್ ಬೈಕ್‌ಗಳಿಗೆ ಪೈಪೋಟಿ ನೀಡಲಿದೆ. 22-25 bhp ಪವರ್, 6 ಸ್ಪೀಡ್ ಹೊಂದಿರುವ ನೂತನ ಬೈಕ್ ಬೆಲೆ 1.5 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ.

 

click me!