ಹೊಸ ತಂತ್ರಜ್ಞಾನ, ಹೊಸ ಅವತಾರ, ಕಡಿಮೆ ಬೆಲೆಯ ದಾಟ್ಸನ್ ಕಾರು ಬಿಡುಗಡೆ!

By Web DeskFirst Published Jun 10, 2019, 10:01 PM IST
Highlights

 ಸುಧಾರಿತ ಸುರಕ್ಷೆ ಹಾಗೂ ಅತ್ಯುನ್ನತ ಚಾಲನಾ ಅನುಭವ ನೀಡುವ ಸಲುವಾಗಿ  ವೆಹಿಕಲ್ ಡೈನಮಿಕ್ ಕಂಟ್ರೋಲ್ (VDC) ತಂತ್ರಜ್ಞಾನವನ್ನು ದಾಟ್ಸನ್ ಕಾರಿಗೆ ಅಳವಡಿಸಲಾಗಿದೆ. ಜೊತೆ ಹೊಸ ಬಣ್ಣದಲ್ಲೂ ದಾಟ್ಸರ್ ಕಾರು ಲಭ್ಯವಿದೆ. ನೂತನ ದಾಟ್ಸನ್ ಕಾರಿನ ವಿಶೇಷತೆ ಹಾಗೂ ತಂತ್ರಜ್ಞಾನದ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಬೆಂಗಳೂರು (ಜೂ.10): ಭಾರತೀಯ ಕಾರು ಮಾಲೀಕರಿಗೆ ವಿಶ್ವ ದರ್ಜೆಯ ಚಾಲನಾ ಅನುಭವ ನೀಡುವ ಬದ್ಧತೆಯನ್ನು ಮುಂದುವರಿಸಿರುವ  ಡಾಟ್ಸನ್ ಇಂಡಿಯಾ,  ಹೊಸ ಡಾಟ್ಸನ್ GO ಹಾಗೂ GO + ವಾಹನಗಳಲ್ಲಿ ಪ್ರಪ್ರಥಮ ಸುರಕ್ಷಾ ವಿಧಾನವಾದ,  ವೆಹಿಕಲ್ ಡೈನಮಿಕ್ ಕಂಟ್ರೋಲ್ (VDC) ತಂತ್ರಜ್ಞಾನವನ್ನು ಘೋಷಿಸಿದೆ.

ಇದನ್ನೂ ಓದಿ: ಬಾಲಿವುಡ್ ಸ್ಟೈಲ್‌ನಲ್ಲಿ ಕಾರು ಡ್ರೈವಿಂಗ್- ವಿದ್ಯಾರ್ಥಿ ಅರೆಸ್ಟ್!

ಡೈನಮಿಕ್ ಕಂಟ್ರೋಲ್ ತಂತ್ರಜ್ಞಾನ ಮೂಲಕ ವಾಹನದ ಸುರಕ್ಷತೆ ಹೆಚ್ಚಳ
ವಿಡಿಸಿ ವ್ಯವಸ್ಥೆ ಚಕ್ರಗಳ ವೇಗ, ಸ್ಟೀರಿಂಗ್ ನ ಸ್ಥಿತಿ, ಎಲೆಕ್ಟ್ರಾನಿಕ್ ಸ್ಥಿರತೆ ನಿಯಂತ್ರಕದ ಅಳವಡಿಕೆಯಿಂದ ಆನ್ ಬೋರ್ಡ್ ಸೆನ್ಸಾರ್ ಗಳು ಆಕ್ಸಲರೇಟರ್ ಅನ್ನು ನಿಯಂತ್ರಿಸುತ್ತವೆ. ಕಾರಿನ ಸ್ಟೀರಿಂಗ್ ನ ವೇಗವಾಗಿ ಇಲ್ಲವೇ ನಿಧಾನಗತಿಯ ಬಳಕೆಗೆ ಸ್ಪಂದಿಸಿ, ಈ ವ್ಯವಸ್ಥೆ ಸುರಕ್ಷಿತ ಚಾಲನಾ ಅನುಭವ,  ಅತ್ಯುನ್ನತ ಚಾಲನಾ ಸಾಮರ್ಥ್ಯ ಹಾಗೂ ಶಕ್ತಿಯ ಹೆಚ್ಚಳವನ್ನು ನೀಡುತ್ತದೆ, ಹೊಸ ಡಾಟ್ಸನ್ ಜಿಒ ಹಾಗೂ ಜಿಒ+ ಉತ್ಪನ್ನಗಳು ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್ ), ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ), ಬ್ರೇಕ್  ಅಸಿಸ್ಟ್ (ಬಿಎ) ಹಾಗೂ ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಮ್ (ಟಿಸಿಎಸ್ ) ನೊಂದಿಗೆ ಆಗಮಿಸುತ್ತದೆ.

ಇದನ್ನೂ ಓದಿ: ಫೋರ್ಡ್ ಇಕೋಸ್ಪೋರ್ಟ್ ಥಂಡರ್ ಎಡಿಶನ್ ಕಾರು ಬಿಡುಗಡೆ!

ಪಯಣವನ್ನು ಇನ್ನಷ್ಟು ಆನಂದದಾಯಕವಾಗಿಸುವ ಉದ್ದೇಶದಿಂದ ಹೊಸ ಡಾಟ್ಸನ್ ಎಲ್ಲಾ ಜಿಒ ಹಾಗೂ ಜಿಒ+ ವಾಹನಗಳಲ್ಲಿ ಹೊಸ ಮ್ಯೂಸಿಕ್ ಸಿಸ್ಟಮ್, ಏಳು ಇಂಚಿನ ಪರದೆ, ಆ್ಯಪಲ್ ಕಾರ್ ಪ್ಲೇ ಹಾಗೂ ಆ್ಯಂಡಾಯ್ಡ್ ಆಟೋ ಮೂಲಕ ಸ್ಮಾರ್ಟ್ ಫೋನ್ ಸಂಪರ್ಕ, ಧ್ವನಿ ಗುರುತಿಸುವ ವ್ಯವಸ್ಥೆ ಹಾಗೂ ಕಾರಿನ ಗುಣಮಟ್ಟದ ಮ್ಯೂಸಿಕ್ ಸಿಸ್ಟಮ್ ಗಳನ್ನು ಅಳವಡಿಸಲಾಗಿದೆ. ಹೊಸ ಡಟ್ಸನ್ ಜಿ ಒ ಹಾಗೂ ಜಿಒ+ ಭಾರತದಾದ್ಯಂತ  ಎಲ್ಲಾ ನಿಸಾನ್ ಹಾಗೂ ಡಟ್ಸನ್ ಮಳಿಗೆಗಳು ಹಾಗೂ ಡೀಲರ್ ಗಳ ಬಳಿ ಲಭ್ಯವಿರಲಿವೆ.

ಹೊಸ ಡಾಟ್ಸನ್ ಜಿಒ ಹೊಸ ‘ಹೊಳೆಯುವ ನೀಲಿ’ ಬಣ್ಣದಲ್ಲಿ ಕೂಡ ಲಭ್ಯವಿದೆ. ನಿಸಾನ್  ಇಂಡಿಯಾದ ಮಾರಾಟ ಮತ್ತು ವಾಣಿಜ್ಯ ವಿಭಾಗದ ನಿರ್ದೇಶಕ ಹರ್ದೀಪ್ ಸಿಂಗ್ ಬ್ರಾರ್,  “ಡಾಟ್ಸನ್ ಸಂಸ್ಥೆ ಹೊಸ ಹಾಗೂ ವಿನೂತನ ಯೋಜನೆಗಳ ಮೂಲಕ ಗ್ರಾಹಕರ ಅನುಭವವನ್ನು ಹೆಚ್ಚಿಸಲು ಬದ್ಧವಾಗಿದೆ. ತಾವು ಸುರಕ್ಷತೆ, ತಂತ್ರಜ್ಞಾನ, ವಿನ್ಯಾಸ ಹಾಗೂ ಅನುಕೂಲಕರವಾದ ಸುಧಾರಿತ ಚಾಲನಾ ವ್ಯವಸ್ಥೆಯತ್ತ ಕೇಂದ್ರೀಕರಿಸಿದ್ದು, ಹೊಸ ಡಾಟ್ಸನ್ ಜಿಒ ಹಾಗೂ ಜಿಒ + ವಿಡಿಸಿ ತಂತ್ರಜ್ಞಾನವನ್ನು ಒಳಗೊಂಡಿರುವುದರಿಂದ ಡಾಟ್ಸನ್ ಮಾಲೀಕರಿಗೆ ಆತ್ಮವಿಶ್ವಾಸದ ಚಾಲನೆಗೆ ಅನುವು ಮಾಡಿಕೊಡುತ್ತದೆ” ಎಂದರು.
 

click me!