ಸೈಕಲ್ ಸ್ಟಂಟ್: ಹೆಲಿಕಾಪ್ಟರ್‌ನಿಂದ ಜಿಗಿದು ಸಾಹಸ-ವಿಡಿಯೋ ವೈರಲ್!

Published : Feb 03, 2019, 10:13 AM IST
ಸೈಕಲ್ ಸ್ಟಂಟ್: ಹೆಲಿಕಾಪ್ಟರ್‌ನಿಂದ ಜಿಗಿದು ಸಾಹಸ-ವಿಡಿಯೋ ವೈರಲ್!

ಸಾರಾಂಶ

ಸೈಕಲ್ ಸಾಹಸವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೆಲಿಕಾಪ್ಟರ್‌ನಿಂದ ಕಟ್ಟದ ಮೇಲಕ್ಕೆ ಜಿಗಿದು ಸಾಹಸ ಪ್ರದರ್ಶಿಸಿದ್ದಾರೆ. ಈ ಅಪಾಯಕಾರಿ ಸಾಹಸದ ವಿಡಿಯೋ ಇಲ್ಲಿದೆ.  

ದುಬೈ(ಫೆ.03): ಬೈಸಿಕಲ್‌ನಲ್ಲಿ ಸಾಹಸ ಮಾಡೋದು ಸುಲಭದ ಮಾತಲ್ಲ. ಬೆಟ್ಟ ಗುಡ್ಡಗಳ ಮೇಲಿನಿಂದ ಶರವೇಗದಲ್ಲಿ ಬೈಸಿಕಲ್ ಮೂಲಕ ಇಳಿದು ಸಾಹಸ ಪ್ರದರ್ಶಿಸಿದ್ದಾರೆ. ಇನ್ನು ಕಟ್ಟಗಳ ಮೇಲಿನಿಂದ, ಸೇತುವೆ ಅಂಚಿನಲ್ಲಿ ಬೈಸಿಕಲ್ ಓಡಿಸಿ ಸಾಹಸ ಮೆರೆದಿದ್ದಾರೆ. ಇದೀಗ ಸ್ಕಾಟ್‌ಲೆಂಡ್ ಸಾಹಸಿ ಹೆಲಿಕಾಪ್ಟರ್‌ನಿಂದ ಜಿಗಿದು ಬೈಸಿಕಲ್ ಸಾಹಸ ಮೆರೆದಿದ್ದಾರೆ.

ಇದನ್ನೂ ಓದಿ: ಪಲ್ಸರ್ 150 ಬೈಕ್ ಬುಕ್ ಮಾಡಿದ್ರೆ ರಣವೀರ್ ಸಿಂಗ್ ಭೇಟಿಯಾಗೋ ಅವಕಾಶ!

ಹೆಲಿಕಾಪ್ಟರ್ ಮೂಲಕ ದುಬೈನ ಖ್ಯಾತ ಗಗನ ಚುಂಬಿ ಕಟ್ಟಡ ಬುರ್ಜ್ ಅಲ್ ಅರಬ್ ಕಟ್ಟದ ಮೇಲೆ ಜಿಗಿದ ಕ್ರಿಸ್ ಕೈಲ್, ಯಶಸ್ವಿಯಾಗಿ ಸಾಹಸ ಪ್ರದರ್ಶಿಸಿದ್ದಾನೆ. ಬೈಸಿಕಲ್ ಮೂಲಕ ಜಿಗಿದ ಕ್ರಿಸ್, ಕಟ್ಟದ ಕಳೆಭಾಗಕ್ಕೆ ತಲುಪಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಅತೀ ಕಡಿಮೆ ಬೆಲೆಗೆ ನೂತನ ರೆನಾಲ್ಟ್ ಕ್ವಿಡ್ ABS ಕಾರು ಬಿಡುಗಡೆ!

26 ವರ್ಷದ ಕ್ರಿಸ್ ಸಾಹಸಕ್ಕೆ ಇದೀಗ ಎಲ್ಲಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇಷ್ಟೇ ಅಲ್ಲ ಬೈಸಿಕಲ್ ಪರಿಣತರು ಅಸಾಧ್ಯವಾಗಿರೋದನ್ನ ಕ್ರಿಸ್ ಸಾಧಿಸಿದ್ದಾರೆ ಎಂದಿದ್ದಾರೆ. ಇನ್ನು ಈ ಸಾಹಸಕ್ಕಾಗಿ ಕ್ರಿಸ್ ಹಲವು ದಿನಗಳಿಂದ ಅಭ್ಯಾಸ ಮಾಡಿದ್ದರು.

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ