ಮಾರಾಟವಾಗದೇ ಉಳಿದುಕೊಂಡಿದೆ 125 ಕೋಟಿ ರೂ ಮೌಲ್ಯದ BS4 ಮಾರುತಿ ಸುಜುಕಿ ಕಾರು!

By Suvarna News  |  First Published May 19, 2020, 9:17 PM IST

ಕೊರೋನಾ ವೈರಸ್ ಹೊಡೆತದಿಂದ ಆಟೋಮೊಬೈಲ್ ಕಂಪನಿಗಳ ಪ್ಲಾನ್ ಎಲ್ಲಾ ಉಲ್ಟಾ ಆಗಿದೆ. ಇಷ್ಟೇ ಅಲ್ಲ ಇದರೊಂದಿಗೆ ಸುಪ್ರೀಂ ಕೋರ್ಟ್ ಆದೇಶ ಕೂಡ ಆಟೋಮೊಬೈಲ್ ಕಂಪನಿಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದರಿಂದ 125 ಕೋಟಿ ರೂಪಾಯಿ ಮೌಲ್ಯದ ಕಾರುಗಳು ಮಾರಾಟವಾಗದೇ ಉಳಿದಿದೆ. 


ನವದೆಹಲಿ(ಮೇ.19):  ಏಪ್ರಿಲ್ 1, 2020ರಿಂದ ಭಾರತದಲ್ಲಿ BS6 ಎಮಿಶನ್ ಎಂಜಿನ್ ನಿಯಮ ಜಾರಿಯಾಗಿದೆ. BS4 ಎಂಜಿನ್ ಕಾರುಗಳು ಮಾರಾಟ ಮಾರ್ಚ್ 31 ಅಂತಿಮ ಗಡುವು ನೀಡಲಾಗಿತ್ತು. ಆದರೆ ಮಾರ್ಚ್ ತಿಂಗಳಲ್ಲಿ ಕೊರೋನಾ ವಕ್ಕರಿಸಿತ್ತು. ಮಾರ್ಚ್ 25 ರಿಂದ ಲಾಕ್‌ಡೌನ್ ಹೇರಲಾಯಿತು. ಹೀಗಾಗಿ ಮಾರುತಿ ಸುಜುಕಿ ಬರೋಬ್ಬರಿ 125 ಕೋಟಿ ರೂಪಾಯಿ ಮೌಲ್ಯದ BS4 ಕಾರುಗಳು ಮಾರಾಟವಾಗದೇ ಉಳಿದುಕೊಂಡಿದೆ. 

ಶೀಘ್ರದಲ್ಲೇ ಜಾರಿಯಾಗಲಿದೆ ಸ್ಕ್ರಾಪ್ ನಿಯಮ; ಹಳೇ ವಾಹನಗಳು ಗುಜುರಿಗೆ ಹಾಕಬೇಕು ಕಡ್ಡಾಯ!.

Tap to resize

Latest Videos

undefined

ಆಟೋಮೊಬೈಲ್ ಕಂಪನಿಗಳು ಕೊರೋನಾ ವೈರಸ್ ಕಾರಣ  BS4 ಕಾರುಗಳನ್ನು ಮಾರಾಟ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಅವದಿ ವಿಸ್ತರಿಸಲು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು. ಇತ್ತ ಎರಡನೇ ಲಾಕ್‌ಡೌನ್ ಬಳಿಕ 10 ದಿನ ವಿಸ್ತರಿಸಲು ಸುಪ್ರೀಂ ಸಮ್ಮತಿಸಿತ್ತು. ಆದರೆ ಲಾಕ್‌ಡೌನ್ ಮತ್ತೆ ವಿಸ್ತರಣೆಯಾಗಿದೆ. ಇದೀಗ ಹೊಸ ಆದೇಶಕ್ಕೆ ಆಟೋಮೊಬೈಲ್ ಕಂಪನಿಗಳು ಕಾಯುತ್ತಿದೆ. 

ಲಾಕ್‌ಡೌನ್ ವೇಳೆ ದಾಖಲೆ ಬರೆದ ನೂತನ ಮಾರುತಿ ಬ್ರೆಜಾ ಪೆಟ್ರೋಲ್ ಕಾರು!.

ಮಾರುತಿ ಸುಜುಕಿ ಎಷ್ಟು BS4 ಕಾರುಗಳು ಮಾರಾಟವಾಗದೇ ಉಳಿದಿದೆ ಅನ್ನೋ ಮಾಹಿತಿ ನೀಡಿಲ್ಲ. ಆದರೆ 125 ಕೋಟಿ ಮೌಲ್ಯದ ಕಾರುಗಳು ಬಾಕಿ ಉಳಿದಿಕೊಂಡಿದೆ ಅನ್ನೋ ಮಾಹಿತಿ ಬಹಿರಂಗ ಪಡಿಸಿದೆ. ಎಪ್ರಿಲ್ 2019ರಿಂದ ಇಲ್ಲೀವರೆಗೆ ಮಾರುತಿ ಸುಜುಕಿ 8 ಲಕ್ಷ BS6 ಕಾರುಗಳನ್ನು ಮಾರಾಟ ಮಾಡಿದೆ. ಇದೀಗ ಮಾರುತಿ ಸುಜುಕಿ ಮಾತ್ರವಲ್ಲ, ಇತರ ಎಲ್ಲಾ ಕಂಪನಿಗಳು ಕೂಡ BS4 ಕಾರುಗಳ ಕುರಿತು ತಲೆಕೆಡಿಸಿಕೊಂಡಿದೆ.
 

click me!