ಕಾರಿಗೆ 4.9 ಲಕ್ಷ ರೂಪಾಯಿ ದಂಡ- ತಲೆ ತಿರುಗಿ ಬಿದ್ದ ಮಾಲೀಕ!

By Web Desk  |  First Published Apr 2, 2019, 4:35 PM IST

ಅತಿ ವೇಗ, ಮಾಡಿಫಿಕೇಶನ್ ಹಾಗೂ ಅತೀ ವೇಗಕಾರಣದಿಂದ ಕಾರಿಗೆ ದಂಡ ವಿಧಿಸಲಾಗಿದೆ. ದಂಡದ ಮೊತ್ತ ಬರೋಬ್ಬರಿ 4.9 ಲಕ್ಷ ರೂಪಾಯಿ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.


ಕೇರಳ(ಏ.02): ಬೇರೆ ರಾಜ್ಯದ ರಿಜಿಸ್ಟ್ರೇಶನ್ ನಂಬರ್, ಕಾರು ಮಾಡಿಫಿಕೇಶನ್ ಮಾಡೋ ಮೂಲಕ ನಿಯಮ ಉಲ್ಲಂಘನೆ, ಅತೀ ವೇಗ ಚಲಾವಣೆಗೆ ಬರೋಬ್ಬರಿ 4.9 ಲಕ್ಷ ರೂಪಾಯಿ ದಂಡ ವಿಧಿಸಿದ ಘಟನೆ ನಡೆದಿದೆ. ಪೊಲೀಸರ ದಂಡ ನೋಡಿದ  ಮಾಲೀಕ ತಲೆ ತಿರುಗಿ ಬಿದ್ದಿದ್ದಾನೆ. ಅಷ್ಟಕ್ಕೂ ಈ ಘಟನೆ ನಡೆದಿರುವುದು ಕೇರಳದಲ್ಲಿ.

ಇದನ್ನೂ ಓದಿ: ರಾಂಗ್ ಸೈಡ್ ಪಾರ್ಕ್- ಸ್ಕೂಟರ್ ಪುಡಿ ಮಾಡಿದ ಪೊಲೀಸ್!

Tap to resize

Latest Videos

undefined

ಟ್ರಾಫಿಕ್ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಮಿನಿ ಕೂಪರ್ ಕಾರೊಂದು ಅತೀ ವೇಗವಾಗಿ ಚಲಿಸುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಮಿನಿ ಕೂಪರ್ ಚಾಲಕನಿ ಚೇಸ್ ಮಾಡಿ ನಿಲ್ಲಿಸಲು ಸೂಚಿಸಿದ್ದಾರೆ. ಈ ವೇಳೆ ಕಾರು ಮಾಡಿಫಿಕೇಶನ್ ಮಾಡಿಸಿರುವುದು ಬೆಳಕಿಗೆ ಬಂದಿದೆ. ಕಾರಿನ ಏಕ್ಸಾಸ್ಟ್(ಸೈಲೆನ್ಸರ್) ಬದಲಾಯಿಸಿ ಸ್ಪೋರ್ಟ್ಸ್ ಕಾರಿನ ಶಬ್ದ ಬರುವಂತೆ ಮಾಡಿದ್ದಾರೆ.  ವಾಹನದ ಮಾಡಿಫಿಕೇಶನ್ ನಿಯಮಬಾಹಿರ.

ಇದನ್ನೂ ಓದಿ: ಪ್ರಧಾನಿ ಮೋದಿ ಬೆದರಿಕೆಯಿಂದ ಕಿಯಾ ಮೋಟಾರ್ಸ್ ಆಂಧ್ರಕ್ಕೆ- ಚಂದ್ರಬಾಬು ನಾಯ್ಡು!

ಅತೀ ವೇಗ ಹಾಗೂ ಮಾಡಿಫಿಕೇಶನ್‌ ಮಾಡಿಸಿದ ಕಾರಣಕ್ಕೆ ದಂಡ ವಿಧಿಸಲಾಗಿದೆ. ಇನ್ನು ಕಾರಿನ ರಿಜಿಸ್ಟ್ರೇಶನ್ ಜಾರ್ಖಂಡ್ ರಾಜ್ಯದ್ದಾಗಿದೆ. ಬರೋಬ್ಬರಿ 4.9 ಲಕ್ಷ ರೂಪಾಯಿ ದಂಡ ಹಾಕಿದ್ದಾರೆ. ದಂಡ ನೋಡಿದ ಕಾರು ಮಾಲೀಕನಿಗೆ ದಿಕ್ಕೇ ತೋಚದಾಗಿದೆ. ದಂಡದ ಹಣದಲ್ಲಿ ಸಣ್ಣ ಕಾರು ಖರೀದಿಸಬಹುದು. ಈ  ಐಷಾರಾಮಿ ಮಿನಿ ಕೂಪರ್ ಬೆಲೆ 30 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. 
 

click me!