ಬಜಾಜ್ ಎಲೆಕ್ಟ್ರಿಕ್ ಆಟೋ ಬಿಡುಗಡೆಯಾಗುತ್ತಿದೆ. ಪೆಟ್ರೋಲ್, ಡೀಸೆಲ್ ಖರ್ಚಿಲ್ಲ, ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು ದಿನವೀಡಿ ಉಪಯೋಗಿಸಬಹುದು. ಆಟೋರಿಕ್ಷಾ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಲು ಬಜಾಜ್ ರಸ್ತೆಗಳಿಯುತ್ತಿದೆ. ಇಲ್ಲಿದೆ ನೂತನ ಆಟೋರಿಕ್ಷಾ ವಿವರ.
ಬೆಂಗಳೂರು(ಏ.01): ಕಳೆದ ವರ್ಷ MOVE ಸಮ್ಮಿಟ್‌ನಲ್ಲಿ ಅನಾವರಣ ಮಾಡಲಾದ ಬಜಾಜ್ ಎಲೆಕ್ಟ್ರಿಕ್ ಆಟೋರಿಕ್ಷಾ ಬಿಡುಗಡೆಗೆ ಸಿದ್ಧವಾಗಿದೆ. ಬಜಾಜ್ ಪುಣೆ ಘಟಕದಲ್ಲಿ ಉತ್ಪಾದನೆಯಾಗಿರುವ ನೂತನ ಎಲೆಕ್ಟ್ರಿಕ್ ಆಟೋ ರಿಕ್ಷಾ ಇದೀಗ ಬೆಂಗಳೂರಿನಲ್ಲಿ ರೋಡ್ ಟೆಸ್ಟ್ ನಡೆಸುತ್ತಿದೆ. ಬಹುತೇಕ ರೋಡ್ ಟೆಸ್ಟ್ ಯಶಸ್ವಿಯಾಗಿ ಪೂರೈಸಿರುವ ಬಜಾಜ್ ಎಲೆಕ್ಟ್ರಿಕ್ ಆಟೋ ಈ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಬಜಾಜ್, ಮಹೀಂದ್ರಗೆ ಪೈಪೋಟಿ - ಬರುತ್ತಿದೆ ಪಿಯಾಗ್ಯೊ ಎಲೆಕ್ಟ್ರಿಕ್ ಆಟೋ ರಿಕ್ಷಾ!
ನೂತನ ಎಲೆಕ್ಟ್ರಿಕ್ ಆಟೋರಿಕ್ಷಾ ಒಂದು ಬಾರಿ ಚಾರ್ಜ್ ಮಾಡಿದರೆ 120 ಕಿ.ಮೀ ಪ್ರಯಾಣ ಮಾಡಲಿದೆ. ಗರಿಷ್ಠ ವೇಗ 45KMPH. ನಾಲ್ಕು ಸೀಟಿನ( ಡ್ರೈವರ್ ಹಾಗೂ 3 ಪ್ರಯಾಣಿಕರು) ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ ಈ ರಿಕ್ಷಾ 400 kg ತೂಕವಿದೆ. 48 ವೋಲ್ಟ್ ಲೀಥಿಯಂ ಬ್ಯಾಟರಿ ಹೊಂದಿರುವು ಈ ರಿಕ್ಷಾ ಸಂಪೂರ್ಣ ಚಾರ್ಜ್ ಆಗಲು 6 ಗಂಟೆ ತೆಗೆದುಕೊಳ್ಳುತ್ತೆ. ಇದರಲ್ಲಿ ಕ್ವಿಕ್ ಚಾರ್ಜ್ ಕೂಡ ಲಭ್ಯವಿದೆ.
ಇದನ್ನೂ ಓದಿ: ಮಕ್ಕಳಿಗಾಗಿ ಪುಟ್ಟ ಆಟೋ ರಿಕ್ಷಾ ನಿರ್ಮಿಸಿದ ತಂದೆ!
ನೂತನ ಬಜಾಜ್ ಎಲೆಕ್ಟ್ರಿಕ್ ಆಟೋ ರಿಕ್ಷಾ, ಮಹೀಂದ್ರ ಎಲೆಕ್ಟ್ರಿಕ್ ಆಟೋರಿಕ್ಷಾಗೆ ತೀವ್ರ ಪೈಪೋಟಿ ನೀಡಲಿದೆ. ಈಗಾಗಲೇ FAME 2 ಯೋಜನೆಯಡಿ ಕೇಂದ್ರ ಸರ್ಕಾರ, ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಸಬ್ಸಡಿ ನೀಡಲು ಮುಂದಾಗಿದೆ. ಸದ್ಯ ಬಜಾಜ್ ಎಲೆಕ್ಟ್ರಿಕ್ ಆಟೋರಿಕ್ಷಾದ ಬೆಲೆ ಬಹಿರಂಗವಾಗಿಲ್ಲ.