ಕಿಟ್ ಅಳವಡಿಸಿ ನಿಮ್ಮ ಕಾರನ್ನ ಎಲೆಕ್ಟ್ರಿಕ್ ಕಾರಾಗಿ ಪರಿವರ್ತಿಸಿ!

By Web Desk  |  First Published Nov 11, 2018, 4:02 PM IST

ಎಲೆಕ್ಟ್ರಿಕ್ ಕಾರು ದುಬಾರಿ. ಹೀಗಾಗಿ ಜನಸಾಮಾನ್ಯರಿಗೆ ಎಲೆಕ್ಟ್ರಿಕ್ ಕಾರು ಖರೀದಿ ಪ್ರಯಾಸವೇ ಸರಿ. ಇದೀಗ ನಿಮ್ಮ ಪೆಟ್ರೋಲ್-ಡೀಸೆಲ್ ಕಾರನ್ನ ಎಲೆಕ್ಟ್ರಿಕ್ ಕಾರಾಗಿ ಪರಿವರ್ತಿಸಬಲ್ಲ ಕಿಟ್ ಲಭ್ಯವಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.


ಹೈದರಾಬಾದ್(ನ.11): ಹೆಚ್ಚುತ್ತಿರುವ ಮಾಲಿನ್ಯ, ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಎಲೆಕ್ಟ್ರಿಕ್ ವಾಹನ. ಇದೀಗ ಸರ್ಕಾರ ಕೂಡ ಎಲೆಕ್ಟ್ರಿಕ್ ವಾಹನಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಆದರೆ ಈ ಎಲೆಕ್ಟ್ರಿಕ್ ವಾಹನಗಳು ದುಬಾರಿ. ಹೀಗಾಗಿ ಜನಸಾಮಾನ್ಯರ ಕೈಗೆಟಕುತ್ತಿಲ್ಲ. ಇದೀಗ ಹೈದರಾಬಾದ್‌ ಸಾರ್ಟ್ ಪ್ ಕಂಪೆನಿ ಹೊಸ ನಿಮ್ಮ ಪೆಟ್ರೋಲ್ ಡೀಸೆಲ್ ಕಾರನ್ನ ಎಲೆಕ್ಟ್ರಿಕ್ ಕಾರಾಗಿ ಪರಿವರ್ತಿಸಬಲ್ಲ ಕಿಟ್ ತಯಾರಿಸಿದೆ.

ಹೈದರಾಬಾದ್ ಮೂಲದ ಸ್ಟಾರ್ಟ್ ಅಪ್ ಕಂಪೆನಿ ಇ ಟ್ರಿಯೋ ನಿರ್ಮಿಸಿರುವ ಎಲೆಕ್ಟ್ರಿಕ್ ಕಿಟ್ ಮಾರುತಿ ಅಲ್ಟೋ ಹಾಗೂ ವ್ಯಾಗನ್ಆರ್ ಕಾರುಗಳಿಗೆ ಮಾತ್ರ ಅಳವಡಿಸಲು ಸಾಧ್ಯ. ಈ ಎರಡು ಕಾರುಗಳ ಎಂಜಿನ್‌ಗೆ ಅಳವಡಿಸಿ ಬಲ್ಲ ಎಲೆಕ್ಟ್ರಿಕ್ ಕಿಟ್ ತಯಾರಿಸಲಾಗಿದೆ. ಸುಲಭವಾಗಿ ಈ ಕಿಟ್ ಅಳವಡಿಸಿ ನಿಮ್ಮ ಅಲ್ಟೋ ಹಾಗೂ ವ್ಯಾಗನ್ಆರ್ ಕಾರುನ್ನ ಎಲೆಕ್ಟ್ರಿಕ್ ಕಾರಾಗಿ ಪರಿವರ್ತಿಸಬಹುದಾಗಿದೆ.

Latest Videos

ಈ ಕಿಟ್‌ ಕೂಡ ದುಬಾರಿಯಲ್ಲ. ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿ.ಮೀ ಪ್ರಯಾಣ ಮಾಡಬುಹುದು. ಮುಂದಿನ ದಿನಗಳಲ್ಲಿ ಒಂದು ಬಾರಿ ಚಾರ್ಜ್‌ಗೆ 250 ಕಿ.ಮೀ ಪ್ರಯಾಣ ಮಾಡಬುಹುದಾದ ಕಿಟ್ ನಿರ್ಮಿಸುವ ಗುರಿಯನ್ನ ಇ ಟ್ರಿಯೋ ಕಂಪೆನಿ ಹೊಂದಿದೆ. ಇಷ್ಟೇ ಅಲ್ಲ ಇತರ ಕಾರುಗಳನ್ನೂ ಎಲೆಕ್ಟ್ರಿಕ್ ಕಾರಾಗಿ ಪರಿವರ್ತಿಸ ಬಲ್ಲ ಕಿಟ್ ನಿರ್ಮಿಸುವ ಗುರಿ ಹೊಂದಿದೆ.

click me!