HDK ರೇಂಜ್ ರೋವರ್ ಬದಲು ಲೆಕ್ಸಸ್ ಕಾರು ಬಳಕೆ- ಇಲ್ಲಿದೆ 3 ಕೋಟಿ ಕಾರಿನ ವಿಶೇಷತೆ?

By Web Desk  |  First Published Apr 17, 2019, 8:08 PM IST

ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ನೆಚ್ಚಿನ ರೇಂಜ್ ರೋವರ್ ಕಾರಿನ ಬದಲು ದುಬಾರಿ ಹಾಗೂ ಐಷಾರಾಮಿ ಲೆಕ್ಸಸ್ ಕಾರು ಬಳಸುತ್ತಿದ್ದಾರೆ. ಈ ಕಾರಿನ ಬೆಲೆ ಎಷ್ಟು? ಈ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.


ಬೆಂಗಳೂರು(ಏ.17): ಸಿಎಂ ಕುಮಾರಸ್ವಾಮಿ ರಾಜಕೀಯ ಜೀವನದಲ್ಲಿ ಅದೃಷ್ಠ ಪ್ರಮುಖ ಪಾತ್ರ ನಿರ್ವಹಿಸಿದೆ.  ಹೀಗಾಗಿ ಅದೃಷ್ಠ ತಂದುಕೊಡುವು ಯಾವುದೇ ಸಂದರ್ಭ, ವಸ್ತು, ಏನೇ ಆದರೂ ಅದನ್ನು HDK ಬಿಟ್ಟುಕೊಡವುದಿಲ್ಲ. ಹೀಗೆ ಕುಮಾರಸ್ವಾಮಿಗೆ ಅದೃಷ್ಠ ತಂದುಕೊಟ್ಟದಲ್ಲಿ ರೇಂಜ್ ರೋವರ್ ಕಾರು ಇದೆ. ಮುಖ್ಯಮಂತ್ರಿಯಾದ ಬಳಿಕ ಸರ್ಕಾರಿ ಕಾರಿನ ಬದಲು ತಮ್ಮ ಖಾಸಗಿ ರೇಂಜ್ ರೋವರ್ ಕಾರನ್ನೇ ಬಳಸುತ್ತಿದ್ದಾರೆ. ಇದೀಗ ಈ ಅದೃಷ್ಠದ ಕಾರಿನ ಬದಲು ಐಷಾರಾಮಿ ಲೆಕ್ಸಸ್ ಕಾರು ಬಳಸುತ್ತಿದ್ದಾರೆ.

ಇದನ್ನೂ ಓದಿ: 100ಕ್ಕೂ ಹೆಚ್ಚು ಲಕ್ಸುರಿ ಕಾರಿನಲ್ಲಿ ಲೋಕಸಭಾ ಚುನಾವಣಾ ಪ್ರಚಾರ!

Latest Videos

undefined

ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ  ಬೆಂಗಳೂರು- ಮಂಡ್ಯ ಓಡಾಟ ಹೆಚ್ಚಾಗಿದೆ.  ಕುಮಾರಸ್ವಾಮಿ ತಮ್ಮ ಕಪ್ಪು ಬಣ್ಣದ ರೇಂಜ್ ರೋವರ್ ಕಾರಿನಲ್ಲೇ ಓಡಾಡುತ್ತಿದ್ದಾರೆ. ಆದರೆ ಕೆಲ ದಿನಗಳ ಹಿಂದೆ ರೇಂಜ್ ರೋವರ್ ಕಾರಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಹೀಗಾಗಿ ಕುಮಾರಸ್ವಾಮಿ ನೆಚ್ಚಿನ ರೇಂಜ್ ರೋವರ್ ಬದಲು ಇದೀಗ ಲೆಕ್ಸಸ್ ಕಾರು ಬಳಕೆ ಮಾಡುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯ ಬಿ.ಎಂ. ಪಾರೂಕ್‌ಗೇ ಸೇರಿದ ಈ ಲೆಕ್ಸಸ್ ಕಾರು ಇದೀಗ ಕುಮಾರಸ್ವಾಮಿ ಬಳಸುತ್ತಿದ್ದಾರೆ. 

ಇದನ್ನೂ ಓದಿ: ಪ್ರಧಾನಿ ಮೋದಿ ಬೆದರಿಕೆಯಿಂದ ಕಿಯಾ ಮೋಟಾರ್ಸ್ ಆಂಧ್ರಕ್ಕೆ- ಚಂದ್ರಬಾಬು ನಾಯ್ಡು!

ಕುಮಾರಸ್ವಾಮಿ ಬಳಸುತ್ತಿರುವ ಲೆಕ್ಸಸ್ LX ಕಾರಿನ ವಿಶೇಷತೆ: 
ಲೆಕ್ಸಸ್ LX ಡೀಸೆಲ್ ಕಾರಿನ ಬೆಲೆ 2.33 ಕೋಟಿ(ಎಕ್ಸ್ ಶೋ ರೂಂ). ಬೆಂಗಳೂರಿನಲ್ಲಿ ಈ ಕಾರಿನ ಆನ್‌ರೋಡ್ ಬೆಲೆ 2.89 ಕೋಟಿ ರೂಪಾಯಿ. 8 ಸಿಲಿಂಡರ್, 4 ವೇಲ್ವ್,  5663 cc ಎಂಜಿನ್ ಹೊಂದಿರುವ ಈ ಲೆಕ್ಸಸ್ LX ಕಾರು, 362 bhp ಪವರ್ (@5600 rpm)ಹಾಗೂ 650 Nm (@ 3200 rpm) ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಆಟೋಮ್ಯಾಟಿಕ್ ಟ್ರಾನ್ಸಿಮಿಶನ್ ಹೊಂದಿದೆ.

ಇದನ್ನೂ ಓದಿ: ಖರೀದಿಸಿದ 2 ನಿಮಿಷದಲ್ಲಿ ಕಾಪೌಂಡ್‌ಗೆ ಡಿಕ್ಕಿ- 2.2 ಕೋಟಿ ಲ್ಯಾಂಬೋರ್ಗಿನಿ ಪುಡಿ ಪುಡಿ!

ಲೆಕ್ಸಸ್ LX ಕಾರು ಗರಿಷ್ಠ ಸುರಕ್ಷತೆ ನೀಡಲಿದೆ. 10 ಏರ್‌ಬ್ಯಾಗ್ಸ್, ABS (ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್), EBD(ಎಲೆಕ್ಟ್ರಾನಿಕ್ ಬ್ರೇಕ್‌ ಫೋರ್ಸ್ ಡಿಸ್ಟ್ರಿಬ್ಯೂಶನ್), ಬ್ರೇಕ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೊಗ್ರಾಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ಸೆಂಟ್ರಲ್ ಲಾಕಿಂಗ್, ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್, ಫ್ರಂಟ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸಾರ್, 360 ಡಿಗ್ರಿ ಪಾರ್ಕಿಂಗ್ ಅಸಿಸ್ಟ್ ಕ್ಯಾಮರ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ.

click me!