ಭಾರತದಲ್ಲಿ ಅನಾವರಣಗೊಂಡಿತು ಚೀನಾ ಕಾರು, ಶುರುವಾಯ್ತು ದರ್ಬಾರು!

By Suvarna News  |  First Published Feb 9, 2020, 6:15 PM IST

ಎಲೆಕ್ಟ್ರಾನಿ ವಸ್ತುಗಳ ಮೂಲಕ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟ ಚೀನಾ ಇದೀಗ ಸಂಪೂರ್ಣ ಭಾರತವನ್ನು ಆವರಿಸಿಕೊಂಡಿದೆ.ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆ ಸಂಪೂರ್ಣ ಚೀನಾ ಕೈಯಲ್ಲಿದೆ. ಇದೀಗ ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳಲು ರೆಡಿಯಾಗಿದೆ. ಚೀನಾದ ಎಂಜಿ ಮೋಟಾರ್ಸ್ ಬೆನ್ನಲ್ಲೇ ಇದೀಗ ಗ್ರೇಟ್ ವಾಲ್ ಮೋಟಾರ್ಸ್ ಭಾರತಕ್ಕೆ ಕಾಲಿಟ್ಟಿದೆ.


ಗ್ರೇಟರ್ ನೋಯ್ಡಾ(ಫೆ.09): ಚೀನಾ ಮಾಲೀಕತ್ವ ಬ್ರಿಟೀಷ್ ಕಾರು ಎಂಜಿ ಹೆಕ್ಟರ್ ಭಾರತದಲ್ಲಿ ಯಶಸ್ಸು ಸಾಧಿಸಿದೆ. ಇದೀಗ ಸಂಪೂರ್ಣ ಚೀನಾ ನಿರ್ಮಿತ, ಚೀನಾ ಮಾಲೀಕತ್ವದ ಗ್ರೇಟ್ ವಾಲ್ ಮೋಟಾರ್ಸ್ ಭಾರತಕ್ಕೆ ಕಾಲಿಟ್ಟಿದೆ. ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ ಆಟೋ ಎಕ್ಸ್ಪೋ 2020ರಲ್ಲಿ ಗ್ರೇಟ್ ವಾಲ್ ಮೋಟಾರ್ಸ್ ಹವಲ್ ಬ್ರ್ಯಾಂಡ್ SUV ಕಾರು ಅನಾವರಣ ಮಾಡಿದೆ. 

Tap to resize

Latest Videos

undefined

ಇದನ್ನೂ ಓದಿ: ಇಲ್ಲಾ,ಇಲ್ಲಾ, ಇಲ್ಲಾ...ನಾವ್ ಆಂಧ್ರ ಬಿಟ್ಟು ಹೋಗಲ್ಲ; ಕಿಯಾ ಸ್ಪಷ್ಟನೆ!

ಹವಲ್ H ಎಲೆಕ್ಟ್ರಿಕ್ ಕಾರನ್ನು ಗ್ರೇಟ್ ವಾಲ್ ಮೋಟಾರ್ಸ್ ಅನಾವರಣ ಮಾಡಿದೆ. ಹ್ಯುಂಡೈ ಕೋನಾ, ಎಂಜಿ ZS, ಮಹೀಂದ್ರ KUV100 ಹಾಗೂ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರುವ ಹವಲ್ ಕಾರು ಭಾರತದಲ್ಲಿ ಹೊಸ ಇನಿಂಗ್ಸ್ ಆರಂಭಿಸುವ ವಿಶ್ವಾಸದಲ್ಲಿದೆ. ಹವಲ್ ಬ್ರ್ಯಾಂಡ್ ಅಡಿಯಲ್ಲಿ ಶೀಘ್ರದಲ್ಲೇ SUV ಕಾರುಗಳನ್ನು ಬಿಡುಗಡೆ ಮಾಡಲು ಚೀನಾದ ಗ್ರೇಟ್ ವಾಲ್ ಮುಂದಾಗಿದೆ.

ಇದನ್ನೂ ಓದಿ: ಮಾರುತಿ ಸ್ವಿಫ್ಟ್ ಹೈಬ್ರಿಡ್ ಕಾರು ಅನಾವರಣ; 32 ಕಿ.ಮೀ ಮೈಲೇಜ್ ದಾಖಲೆ!...

ಅನಾವರಣ ಮಾಡಿರುವ ಎಲೆಕ್ಟ್ರಿಕ್ ಕಾರಿಗೂ ಮೊದಲು ಪೆಟ್ರೋಲ್ ಹಾಗೂ ಡೀಸೆಲ್ ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ. ಶೀಘ್ರದಲ್ಲೇ ಹವಲ್ ಕಾರುಗಳು ಭಾರತದಲ್ಲಿ ರಸ್ತೆಯಲ್ಲಿ ಓಡಾಟ ಆರಂಭಿಸಲಿದೆ. ಹವಲ್ ಬ್ರ್ಯಾಂಡ್ SUV ಕಾರುಗಳಾಗಿರುವ ಕಾರಣ ಭಾರತದ ಟಾಟಾ ಮೋಟಾರ್ಸ್ ಹಾಗೂ ಮಹೀಂದ್ರ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿದೆ.

click me!