ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ತಮಿಳುನಾಡು ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ. ಇನ್ನು ನಿಯಮ ಉಲ್ಲಂಘಿಸಿ ರಸ್ತೆಗಳಿದ ವಾಹನಗಳನ್ನು ಪೊಲೀಸರು ಸೀಝ್ ಮಾಡಿದ್ದಾರೆ. ಒಂದೇ ದಿನ ದಾಖಲೆ ಪ್ರಮಾಣದ ವಾಹನ ಸೀಝ್ ಆಗಿದೆ.
ಚೆನ್ನೈ(ಜೂ.26): ಕೊರೋನಾ ವೈರಸ್ ದೇಶವನ್ನೇ ಅಲ್ಲೋಲ ಕಲ್ಲೋಲ ಮಾಡಿದೆ ಒಂದು ಬಾರಿ ಹೇರಿದ ಲಾಕ್‌ಡೌನ್‌ನಿಂದ ಜನ ಇನ್ನೂ ಸುಧಾರಿಸಿಕೊಂಡಿಲ್ಲ. ಆದರೆ ತಮಿಳುನಾಡಿನಲ್ಲಿ ಪರಿಸ್ಥಿತಿ ಕೈಮೀರುತ್ತಿರುವ ಕಾರಣ ಮತ್ತೆ ಸಂಪೂರ್ಣ ರಾಜ್ಯ ಲಾಕ್‌ಡೌನ್ ಮಾಡಲಾಗಿದೆ. ವಾಹನ ರಸ್ತೆಗಿಳಿಯಲು ಪಾಸ್ ಪಡೆದುಕೊಳ್ಳಬೇಕಾಗಿದೆ. ಆದರೆ ಹಲವರು ಪಾಸ್ ಇಲ್ಲದೆ, ಲಾಕ್‌ಡೌನ್ ಇದ್ದರೂ ನಿಯಮ ಸಡಿಲಿಕೆ ಎಂದು ಓಡಾಟ ಆರಂಭಿಸಿದ್ದಾರೆ. ಹೀಗೆ ರಸ್ತೆಗಿಳಿದ ವಾಹನಗಳನ್ನು ಪೊಲೀಸರು ಸೀಝ್ ಮಾಡಿದ್ದಾರೆ.
ತೆಪ್ಪಗಿರುವುದು ಬಿಟ್ಟು ಲಾಕ್‌ಡೌನ್ ವೇಳೆ ಓವರ್ ಸ್ವೀಡ್; 4.5 ಲಕ್ಷ ವಾಹನ ಮೇಲೆ ಫೈನ್!...
ಜೂನ್ 22ರ ಬೆಳಗ್ಗೆ 6 ಗಂಟೆಯಿಂದ ಜೂನ್ 23ರ ಬೆಳಗ್ಗೆ 6 ಗಂಟೆ ವರೆಗಿನ 24 ಗಂಟೆ ಅವಧಿಯಲ್ಲಿ ಬರೋಬ್ಬರಿ 7,413 ವಾಹನಗಳನ್ನು ಚೆನ್ನೈ ಪೊಲೀಸರು ಸೀಝ್ ಮಾಡಿದ್ದಾರೆ. ಚೆನ್ನೈ ಸಿಟಿ ಪೊಲೀಸರು ಹಲವು ಚೆಕ್ ಪಾಯಿಂಟ್‌ಗಳನ್ನು ನಿರ್ಮಿಸಿ ತಪಾಸಣೆ ಮಾಡುತ್ತಿದ್ದಾರೆ. ಕೊರೋನಾ ವೈರಸ್ ಮೀತಿ ಮೀರುತ್ತಿರು ಕಾರಣ ಸರ್ಕಾರ ಕಟ್ಟು ನಿಟ್ಟಿನ ಸೂಚನೆ ನೀಡಿದೆ.
ಆ್ಯಂಬುಲೆನ್ಸ್ ತುರ್ತು ಸೇವೆಗೆ 17 ವರ್ಷದ ಅಪ್ರಾಪ್ತನಿಂದ ಅಡ್ಡಿ; ದುಬಾರಿ ದಂಡ ಜೊತೆ ಜೈಲು ಶಿಕ್ಷೆ!...
ಚೆನ್ನೈ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಜೂನ್ 15ರಂದೇ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿತ್ತು. 144 ಸೆಕ್ಷನ್ ಕೂಡ ಜಾರಿ ಮಾಡಲಾಗಿದೆ. 12 ದಿನದ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ 2 ಕಿ.ಮೀ ಹೆಚ್ಚು ದೂರ ಪ್ರಯಾಣಿಸುವಂತಿಲ್ಲ ಎಂದಿದೆ.
ತಮಿಳುನಾಡಿನಲ್ಲಿ ಕೊರೋನಾ ವೈರಸ್ ಲಕ್ಷದತ್ತ ದಾಟುತ್ತಿದೆ. ಇದೀಗ 64,000 ಪ್ರಕರಣಗಳು ತಮಿಳುನಾಡಿನಲ್ಲಿ ಪತ್ತೆಯಾಗಿದೆ. ಚೆನ್ನೈ ನಗರದಲ್ಲೇ 18,889 ಪ್ರಕರಣಗಳು ದಾಖಲಾಗಿದೆ. ಇನ್ನು ಪ್ರತಿ ದಿನ 1,000 ಕೊರೋನಾ ವೈರಸ್ ಹೊಸ ಪ್ರಕರಣಗಳು ಸೇರಿಕೊಳ್ಳುತ್ತಿದೆ.