ರೋಲ್ಸ್ ರಾಯ್ಸ್ ನಿರ್ಮಿಸಿದ ಅತೀ ವೇಗದ ಎಲೆಕ್ಟ್ರಿಕ್ ವಿಮಾನ ಪರೀಕ್ಷೆ ಯಶಸ್ವಿ!

By Suvarna NewsFirst Published Oct 3, 2020, 8:02 PM IST
Highlights

ಐಷಾರಾಮಿ ಹಾಗೂ ದುಬಾರಿ ಕಾರುಗಳಲ್ಲಿ ರೋಲ್ಸ್ ರಾಯ್ಸ್‌ಗೆ ಅಗ್ರಸ್ಥಾನ. ಲಕ್ಸುರಿ ಕಾರ್ ಮೇಕರ್ ಇದೀಗ ವಿಮಾನ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ. ರೋಲ್ಸ್ ರಾಯ್ಸ್ ಇದೀಗ ವಿಶ್ವದ ಅತೀ ವೇಗದ ಎಲೆಕ್ಟ್ರಿಕ್ ವಿಮಾನ ನಿರ್ಮಿಸಿ, ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ.

ಲಂಡನ್(ಅ.03):  ಶ್ರೀಮಂತರ ಕಾರು ಎಂದೇ ಗುರುತಿಸಿಕೊಂಡಿರುವ ರೋಲ್ಸ್ ರಾಯ್ಸ್ ಇದೀಗ ಮತ್ತೊಂದು ಹೆಜ್ಜೆ ಇಟ್ಟಿದೆ. ಐಷಾರಾಮಿ ಕಾರಿನ ಮೂಲಕ ವಿಶ್ವದ ಅತ್ಯಂತ ವಿಶ್ವಾರ್ಹ ಬ್ರ್ಯಾಂಡ್ ಆಗಿರುವ ರೋಲ್ಸ್ ರಾಯ್ಸ್ ವಿಮಾನ ನಿರ್ಮಾಣದಲ್ಲಿ ಸೈ ಎನಿಸಿಕೊಂಡಿದೆ. ಇಷ್ಟೇ ಅಲ್ಲ ರೋಲ್ಸ್ ರಾಯ್ಸ್ ನಿರ್ಮಾಣಮಾಡಿರುವುದು ಎಲೆಕ್ಟ್ರಿಕ್ ವಿಮಾನ. 

ಮೊದಲ ರೋಲ್ಸ್ ರಾಯ್ಸ್ ಎಲೆಕ್ಟ್ರಿಕ್ ಕಾರು ಅನಾವರಣ; ಕೇವಲ 30 ಕಾರು ಮಾತ್ರ ಲಭ್ಯ!.

ರೋಲ್ಸ್ ರಾಯ್ಸ್ ನಿರ್ಮಿಸಿರುವ ನೂತನ ಎಲೆಕ್ಟ್ರಿಕ್ ವಿಮಾನದ ಟೆಸ್ಟ್ ಕೂಡ ಯಶಸ್ವಿಯಾಗಿದೆ. ಇದು ವಿಶ್ವದ ಅತ್ಯಂತ ವೇಗದ ವಿಮಾನ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಐಯನ್ ಬರ್ಡ್ ಅನ್ನೋ ಹೆಸರಿನ ನೂತನ ವಿಮಾನ 500 ಹಾರ್ಸ್‌ಪವರ್ ಹೊಂದಿದೆ. ಈ ವಿಮಾನಕ್ಕೆ ನೀಡಿರುವ ಬ್ಯಾಟರಿ ಪವರ್‌ನಲ್ಲಿ 250 ಮನೆ ಬೆಳಗಲಿದೆ. 

 

Our ambition to set the fastest all-electric plane world record draws closer as we successfully complete ground-testing on all technology in our Spirit of Innovation aircraft. First flight coming later this year. https://t.co/HmXScOV8dl pic.twitter.com/bJB1HC6syN

— Rolls-Royce (@RollsRoyce)

ಬ್ಯಾಟರಿ, ಪವರ್ ಸೇರಿದಂತೆ ಎಲ್ಲಾ ವಿಚಾರದಲ್ಲಿ ರೋಲ್ಸ್ ರಾಯ್ಸ್ ಹೆಚ್ಚು ಮುತುವರ್ಜಿವಹಿಸಿದೆ. ಯಶಸ್ವಿಯಾಗಿ ಹಾರಾಟ ಮಾಡಿರುವ ಬ್ಯಾಟರಿ ಚಾಲಿತ ರೋಲ್ಸ್ ರಾಯ್ಸ್ ವಿಮಾನ, ಹೊಸ ಜಗತ್ತನ್ನೇ ತೆರೆದಿದೆ. ಇಷ್ಟು ದಿನ ಎಲೆಕ್ಟ್ರಿಕ್ ಕಾರು, ದ್ವಿಚಕ್ರ ವಾಹನ, ಟ್ರಕ್ ಆವಿಷ್ಕಾರಗಳು ನಡೆದಿದೆ. ಆದರೆ ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್ ವಿಮಾನ ಕೂಡ ನಿರ್ಮಾಣವಾಗಿದೆ.

 

We’re leading a challenge to build the world's fastest all-electric aircraft. We're developing our zero-emission 'Spirit of Innovation' aircraft that will aim for the record books with a target speed of 300+ MPH. Find out more here: https://t.co/rHfLFh7mqT pic.twitter.com/vy3XzER9vB

— Rolls-Royce (@RollsRoyce)

ಅಂತಿಮ ಹಂತದ ಪರೀಕ್ಷೆ ಬಳಿಕ ರೋಲ್ಸ್ ರಾಯ್ಸ್ ನೂತನ ಎಲೆಕ್ಟ್ರಿಕ್ ವಿಮಾನ ಐಯನ್ ಬರ್ಡ್ ಕುರಿತು ಅಧೀಕೃತ ಮಾಹಿತಿ ಹಂಚಿಕೊಳ್ಳಲಿದೆ.

click me!