ಡ್ರೈವಿಂಗ್ ವೇಳೆ ಮೊಬೈಲ್ ಬಳಸುವವರಿಗೆ ವಿಶೇಷ ಪ್ರಕಟಣೆ!

By Web Desk  |  First Published Feb 22, 2019, 8:40 PM IST

ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡುವವರಿಗೆ ಕೇಂದ್ರ ರಸ್ತೆ ಸಾರಿಗೆ ಇಲಾಖೆ ವಿಶೇಷ ಪ್ರಕಟಣೆ ಹೊರಡಿಸಲಾಗಿದೆ.  ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ಮಾಡುವವರು ಈ ಪ್ರಕಟಣೆ ಕುರಿತು ಚಿತ್ತ ಹರಿಸಲೇಬೇಕು. ಇಲ್ಲಿದೆ ಆ ವಿಶೇಷ ಪ್ರಕಟಣೆ.
 


ನವದೆಹಲಿ(ಫೆ.22): ಬೈಕ್, ಸ್ಕೂಟರ್, ಕಾರು ಸೇರಿದಂತೆ ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡುವುದನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಚಾಲಕರು, ರೈಡರ್‌ಗಳಿಗೆ ಜಾಗೃತಿ ಮೂಡಿಸಲು ಪ್ರತಿ ದಿನ ವಿಶೇಷ ಪ್ರಯತ್ನಗಳನ್ನ ಮಾಡುತ್ತಿದ್ದಾರೆ. ಇದೀಗ ಚಾಲನೆ ವೇಲೆ ಮೊಬೈಲ್ ಬಳಸುವವರಿಗೆ ಕೇಂದ್ರ ರಸ್ತೆ ಸಾರಿಗೆ ಇಲಾಖೆ ವಿಶೇಷ ಪ್ರಕಟಣೆ ಹೊರಡಿಸಿದೆ.

 ಇದನ್ನೂ ಓದಿ: ರೆಡ್ ಸಿಗ್ನಲ್ ದಾಟಿದರೆ ಏನಾಗುತ್ತೆ? - ರಸ್ತೆ ಸಾರಿಗೆ ಇಲಾಖೆ ಹೇಳಿದ ಸತ್ಯ!

Latest Videos

undefined

ಕೇಂದ್ರ ರಸ್ತೆ ಸಾರಿಗೆ ಇಲಾಖೆ ಅಂಕಿ ಅಂಶವೊಂದನ್ನ ಬಿಡುಗಡೆ ಮಾಡಿದೆ. ಕಳೆದೊಂದು ವರ್ಷದಲ್ಲಿ  ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡಿ ರಸ್ತೆ ಅಪಘಾತದ ಮೂಲಕ ಸಾವನ್ನಪ್ಪಿದವರ ಸಂಖ್ಯೆ 8526. ಹೀಗಾಗಿ ವಾಹನ ಚಾಲನೆ ವೇಳೆ ಮೊಬೈಲ್ ಬಳಕೆಯಿಂದ ಅಪಾಯ ತಪ್ಪಿದ್ದಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಇಲಾಖೆ ಅಂಕಿ ಅಂಶದ ಮೂಲಕ ಹೇಳಿದೆ.

 

Never use mobile phones while driving! pic.twitter.com/zksgZYG9nY

— MORTHINDIA (@MORTHIndia)

 

 ಇದನ್ನೂ ಓದಿ: ಮನೆ ಮುಂದೆ ಕಾರು ನಿಲ್ಲಿಸಿದರೂ ನೀಡಬೇಕು ಪಾರ್ಕಿಂಗ್ ಚಾರ್ಚ್!

ರಸ್ತೆ ನಿಯಮ ಪಾಲನೆಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ. ಸಣ್ಣ ತಪ್ಪಿಗೂ ಭಾರಿ ದಂಡ ವಿಧಿಸುವ ಸಾಧ್ಯತೆ ಇದೆ. ಇಷ್ಟೇ ಅಲ್ಲ ಜಾಗೃತಿ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲು ಯೋಜನೆ ರೂಪಿಸಿದೆ. ಈ ಮೂಲಕ ಭಾರತದಲ್ಲಿ ರಸ್ತೆ ಅಪಘಾತಗಳಿಗೆ ಮುಕ್ತಿ ನೀಡಲು ಮುಂದಾಗಿದೆ.

click me!