ಭಾರತದಲ್ಲಿ ವ್ಯಾಪಾರ, ಚೀನಾದಲ್ಲಿ ಉದ್ಯೋಗ ಸೃಷ್ಟಿ? ಎಲಾನ್‌ ಮಸ್ಕ್‌ ಟೆಸ್ಲಾಗೆ ಕೇಂದ್ರ ಸರ್ಕಾರ ಟಾಂಗ್!

By Suvarna News  |  First Published Feb 9, 2022, 12:30 PM IST

ಸರ್ಕಾರದ ನೀತಿಯ ಪ್ರಕಾರ ಕಂಪನಿಯು ಇನ್ನೂ ಯೋಜನೆಗಳಿಗೆ ಅರ್ಜಿ ಸಲ್ಲಿಸಿಲ್ಲ ಎಂದು ಕ್ರಿಶನ್ ಪಾಲ್ ಗುರ್ಜರ್ ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ತಿಳಿಸಿದರು.


ನವದೆಹಲಿ (ಫೆ. 09): ಎಲೆಕ್ಟ್ರಿಕ್‌ ಕಾರುಗಳನ್ನು (Electric Vehicles) ಭಾರತಕ್ಕೆ ಆಮದು ಮಾಡಿಕೊಳ್ಳಲು ತೆರಿಗೆ ವಿನಾಯಿತಿ ಕೋರಿದ್ದ ಜಗತ್ತಿನ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ (Elon Musk) ಒಡೆತನದ ಟೆಸ್ಲಾ ಮಾಡಿದ್ದ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. ಈ ಬೆನ್ನಲ್ಲೇ ಅಮೆರಿಕ ಮೂಲದ ಎಲೆಕ್ಟ್ರಿಕ್ ವಾಹನಗಳ ಕಂಪನಿ ಟೆಸ್ಲಾ ಭಾರತದಲ್ಲಿ ಉತ್ಪಾದನಾ ಚಟುವಟಿಕೆಗಳಲ್ಲಿ ಭಾಗವಹಿಸದ ಹೊರತು ಯಾವುದೇ ಸಡಿಲಿಕೆಯನ್ನು ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕೇಂದ್ರ ಸಚಿವ ಕ್ರಿಶನ್ ಪಾಲ್ ಗುರ್ಜರ್, "ಮಾರುಕಟ್ಟೆ ಭಾರತ ಆದರೆ ಚೀನಾದಲ್ಲಿ ಉದ್ಯೋಗಗಳು" ಎಂಬ ಪರಿಸ್ಥಿತಿ ಇರಬಾರದು ಎಂದು ಮಂಗಳವಾರ ಹೇಳಿದ್ದಾರೆ.  

ಸರ್ಕಾರದ ನೀತಿಯ ಪ್ರಕಾರ ಕಂಪನಿಯು ಇನ್ನೂ ಯೋಜನೆಗಳಿಗೆ ಅರ್ಜಿ ಸಲ್ಲಿಸಿಲ್ಲ ಎಂದು ಭಾರೀ ಕೈಗಾರಿಕೆಗಳ ರಾಜ್ಯ ಸಚಿವರು ಲೋಕಸಭೆಗೆ ಪ್ರಶ್ನೋತ್ತರ ಅವಧಿಯಲ್ಲಿ ತಿಳಿಸಿದ್ದಾರೆ. ಕಳೆದ ವರ್ಷ, ಎಲೋನ್ ಮಸ್ಕ್ ನೇತೃತ್ವದ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ (ಇವಿ) ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಲು ಕೇಳಕೊಂಡಿತ್ತು ಆದರೆ ಯಾವುದೇ ತೆರಿಗೆ ರಿಯಾಯಿತಿಗಳನ್ನು ಪರಿಗಣಿಸುವ ಮೊದಲು ದೇಶದಲ್ಲಿ ತನ್ನ ಐಕಾನಿಕ್ ಇವಿಗಳ ಉತ್ಪಾದನೆಯನ್ನು ಪ್ರಾರಂಭಿಸಲು ಭಾರೀ ಕೈಗಾರಿಕೆಗಳ ಸಚಿವಾಲಯವು ಸಂಸ್ಥೆಯನ್ನು ಕೇಳಿದೆ.

Tap to resize

Latest Videos

undefined

ಇದನ್ನೂ ಓದಿ: Tesla in India: ಎಲೆಕ್ಟ್ರಿಕ್‌ ಕಾರಿಗೆ ತೆರಿಗೆ ವಿನಾಯ್ತಿ ಕೋರಿದ್ದ ಎಲಾನ್‌ ಮಸ್ಕ್ ಮನವಿ ತಿರಸ್ಕೃತ!

ಸರ್ಕಾರವು ಆಟೋಮೊಬೈಲ್ ಮತ್ತು ಆಟೋ ಘಟಕಗಳಿಗೆ ಮತ್ತು ಅಡ್ವಾನ್ಸ್ಡ್ ಕೆಮಿಸ್ಟ್ರಿ ಸೆಲ್ (ACC) ಬ್ಯಾಟರಿಯನ್ನು ತಯಾರಿಸಲು ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ಸ್ ಹೊಂದಿದೆ ಎಂದು ಗುರ್ಜರ್ ಹೇಳಿದರು. ಎರಡೂ ಯೋಜನೆಗಳು ದೇಶೀಯ ಮತ್ತು ವಿದೇಶಿ ಘಟಕಗಳಿಗೆ ಮುಕ್ತವಾಗಿವೆ.

ಮೋದಿ ಸರ್ಕಾರದಲ್ಲಿ ಸಾಧ್ಯವಿಲ್ಲ: ಟೆಸ್ಲಾ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, "ಕಂಪನಿಯು ಚೀನಾದಿಂದ ಕಾರ್ಮಿಕರನ್ನು ಬಯಸುತ್ತದೆ ಮತ್ತು ಭಾರತದ ಮಾರುಕಟ್ಟೆ ಸ್ಥಾಪಿಸಲು ಯತ್ನಿಸುತ್ತಿದೆ. ಇದು ಮೋದಿ ಸರ್ಕಾರದಲ್ಲಿ ಸಾಧ್ಯವಿಲ್ಲ ... ನಮ್ಮ ಸರ್ಕಾರದ ನೀತಿಯೆಂದರೆ ಭಾರತದ ಮಾರುಕಟ್ಟೆಯನ್ನು ಬಳಸಬೇಕಾದರೆ ಭಾರತೀಯರಿಗೆ. ಉದ್ಯೋಗಾವಕಾಶಗಳು ನೀಡಬೇಕಾಗುತ್ತದೆ" ಎಂದು ಹೇಳಿದ್ದಾರೆ.

ಟೆಸ್ಲಾವನ್ನು ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲು ಸರ್ಕಾರ ಆಹ್ವಾನಿಸುತ್ತದೆಯೇ ಮತ್ತು ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೃಹತ್ ಉತ್ಪಾದನೆಯನ್ನು ಉತ್ತೇಜಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ಕಾಂಗ್ರೆಸ್ ಸದಸ್ಯ ಕೆ ಸುರೇಶ್ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. "ಭಾರತದ ಹಣವನ್ನು ಚೀನಾಕ್ಕೆ ಹೋಗಲು ಅವರು ಬಯಸುತ್ತಾರೆಯೇ ಎಂದು ಸದಸ್ಯರನ್ನು ಕೇಳಲು ಬಯಸುತ್ತೇನೆ? ಆ ಕಂಪನಿಯು ನಮ್ಮ ನೀತಿಯಂತೆ ಅರ್ಜಿ ಸಲ್ಲಿಸಿಲ್ಲ. ಆದರೆ ಭಾರತದ ಬಾಗಿಲು ತೆರೆದಿದೆ, ಅವರು ನೀತಿಯ ಪ್ರಕಾರ ಅರ್ಜಿ ಸಲ್ಲಿಸಬಹುದು, ಕಂಪನಿಯನ್ನು ಸ್ಥಾಪಿಸಬಹುದು, ನಮ್ಮ ಜನರಿಗೆ ಉದ್ಯೋಗ ನೀಡಿ, ಸರ್ಕಾರದ ಆದಾಯವನ್ನು ಹೆಚ್ಚಿಸಿ, ”ಎಂದು ಸಚಿವರು ಹೇಳಿದರು.

ಇದನ್ನೂ ಓದಿ: Tesla in India ಕರ್ನಾಟಕದಲ್ಲಿ ಘಟಕ ಆರಂಭಿಸಲು ಮಸ್ಕ್‌ಗೆ ಅಹ್ವಾನ, ರಾಜ್ಯದ ಮನವಿಗೆ ಇತರ 5 ರಾಜ್ಯದಲ್ಲಿ ಸಂಚಲನ!

ತೆರಿಗೆ ವಿನಾಯಿತಿ ಕೋರಿದ್ದ ಮನವಿ ತಿರಸ್ಕಾರ:  ಕಳೆದ ತಿಂಗಳು, ಟೆಸ್ಲಾ ಸಂಸ್ಥಾಪಕ ಮತ್ತು ಸಿಇಒ ಎಲೋನ್ ಮಸ್ಕ್ ಅವರು ಭಾರತದಲ್ಲಿ ತನ್ನ ಉತ್ಪನ್ನಗಳನ್ನು ಪ್ರಾರಂಭಿಸಲು ಕಂಪನಿಯು ಸರ್ಕಾರದೊಂದಿಗೆ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ ಎಂದು ಹೇಳಿದರು. ಈ ಬೆನ್ನಲ್ಲೇ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ತಮ್ಮ ರಾಜ್ಯದಲ್ಲಿ ಟೆಸ್ಲಾ ಘಟಕ ಸ್ಥಾಪಿಸುವಂತೆ ಆಹ್ವಾನ ನೀಡಿದ್ದವು. 

ಎಲೆಕ್ಟ್ರಿಕ್‌ ಕಾರುಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲು ತೆರಿಗೆ ವಿನಾಯಿತಿ ಕೋರಿದ್ದ  ಎಲಾನ್‌ ಮಸ್ಕ್‌ ಒಡೆತನದ ಟೆಸ್ಲಾ ಮಾಡಿದ್ದ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. ಕೇಂದ್ರ ‘ಮೋದಿ ಸರ್ಕಾರ ಟೆಸ್ಲಾಗೆ ಸ್ಥಳೀಯವಾಗಿ ಉತ್ಪಾದನೆ ಆರಂಭಿಸಲು ಉತ್ತೇಜಿಸಿದೆ. ಆದರೆ ಮಸ್ಕ್‌ ಮಾತ್ರ ಆಮದು ಮಾಡಿಕೊಂಡ ಎಲೆಕ್ಟ್ರಾನಿಕ್‌ ವಾಹನಗಳ ಮೇಲೆ ಶೇ.100ರಷ್ಟುಇರುವ ತೆರಿಗೆಯನ್ನು ಕಡಿಮೆ ಮಾಡಬೇಕು ಎಂದು ಬಯಸಿದ್ದಾರೆ. ಈ ಮೂಲಕ ಬೇರೆಡೆ ತಯಾರಾದ ವಾಹನವನ್ನು ದೇಶದಲ್ಲಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದಾರೆ. ಆದರೆ ಇದಕ್ಕೆ ಸರ್ಕಾರ ಒಪ್ಪಿಲ್ಲ’ ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್‌ ಮಂಡಳಿಯ ಅಧ್ಯಕ್ಷ ವಿವೇಕ್‌ ಜೋಹ್ರಿ ಹೇಳಿದ್ದರು. 

ಎಲೆಕ್ಟ್ರೀಕ್‌ ವಾಹನಗ ಪ್ರಚಾರಕ್ಕಾಗಿ ಹಲವು ಯೋಜನೆಗಳಿವೆ ಮತ್ತು ಇವುಗಳು ಪ್ರಯೋಜನಗಳೆಂದರೆ ಸುಧಾರಿತ ತಂತ್ರಜ್ಞಾನವು ಭಾರತಕ್ಕೆ ಬರಲಿದೆ ಮತ್ತು ಬಿಡಿ ಭಾಗಗಳನ್ನು ಸಹ ಇಲ್ಲಿ ತಯಾರಿಸಲಾಗುವುದು. ಈ ಮೂಲಕ ಜನರಿಗೆ ಉದ್ಯೋಗ ಸಿಗಲಿದೆ ಮತ್ತು ಗ್ರಾಹಕರಿಗೆ ಅಗ್ಗದ ವಾಹನಗಳು ಸಿಗಲಿವೆ ಎಂದು ಸಚಿವರು ಹೇಳಿದರು. ಸರ್ಕಾರ ಏನು ಮಾಡಬೇಕೋ ಅದನ್ನು ಮಾಡಿದೆ ಮತ್ತು ಈಗ ಕೈಗಾರಿಕೆಗಳು ಮುಂದೆ ಬರಲು ಸಯ ಬಂದಿದೆ ಎಂದು ಸಚಿವರು ಹೇಳಿದ್ದಾರೆ.

click me!