ಅಪಾಯಕಾರಿಯಾದ ಕಿರಿದಾದ ರಸ್ತೆಗಳಲ್ಲಿ ಜನರು ತಮ್ಮ ಕಾರುಗಳನ್ನು ಓಡಿಸಿ ಸಾಹಸ ಪ್ರದರ್ಶಿಸುವ ವೀಡಿಯೊಗಳನ್ನು ನೀವು ಈಗಾಗಲೇ ಇಂಟರ್‌ನೆಟ್‌ನಲ್ಲಿ ನೋಡಿರಬಹುದು. ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾದ ಅಂತಹದ್ದೇ ರಸ್ತೆ ಸಾಹಸದ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರು ಏನಾಗುವುದೋ ಎಂಬ ಆತಂಕದಿಂದ ಉಗುರು ಕಚ್ಚುವಂತೆ ಈ ವಿಡಿಯೋ ಮಾಡುತ್ತಿದೆ. ಕಿರಿದಾದ ರಸ್ತೆಯಲ್ಲಿ ಒಂದೆಡೆ ಬೆಟ್ಟ ಇದ್ದರೆ ಮತ್ತೊಂದೆಡೆ ಪ್ರಪಾತವಿದೆ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಸಾವಿನ ಮನೆ ಸೇರುವುದು ಗ್ಯಾರಂಟಿ ಎಂಬಂತಿರುವ ಕಡಿದಾದ ರಸ್ತೆಯಲ್ಲಿ ಚಾಲಕ ಧೈರ್ಯದಿಂದ ತನ್ನ ಕಾರನ್ನು ಯುಟರ್ನ್ ಮಾಡುತ್ತಾನೆ. ಈ ದೃಶ್ಯ ನೋಡುಗರಲ್ಲಿ ಭಯ ಹುಟ್ಟಿಸುವಂತಿದೆ.
ಈ ವೀಡಿಯೊವನ್ನು ಮೂಲತಃ ಚೀನಾದ ಸಾಮಾಜಿಕ ಮಾಧ್ಯಮವಾದ ( Chinese social media) ಡೌಯಿನ್‌ನಲ್ಲಿ (Douyin) ಪೋಸ್ಟ್ ಮಾಡಲಾಗಿತ್ತು.. ಇದನ್ನು ಪೋಸ್ಟ್ ಮಾಡಿದ ವ್ಯಕ್ತಿ ಇಂತಹದೇ ರೀತಿಯ ಅನೇಕ ವಿಡಿಯೋಗಳನ್ನು ತಮ್ಮ ಖಾತೆಯಲ್ಲಿ ಆಗಾಗ ಪೋಸ್ಟ್ ಮಾಡುತ್ತಿರುತ್ತಾರೆ. ಅದು ವಿಭಿನ್ನ ಸಂದರ್ಭಗಳಲ್ಲಿ ಕಾರುಗಳನ್ನು ಹೇಗೆ ಓಡಿಸುವುದು ಎಂಬುದರ ಕುರಿತು ಜನರಿಗೆ ಕಲಿಸುವ ಗುರಿಯನ್ನು ಹೊಂದಿದೆ.
ಆದಾಗ್ಯೂ, ಈ ವಿಡಿಯೋವನ್ನು ಸೂಪರ್‌ಕಾರ್ ಬ್ಲಾಂಡಿ ( Supercar Blondie)ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ ನಂತರ 7.1 ಮಿಲಿಯನ್ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಈ ಪೇಜ್‌ನ್ನು ಅಲೆಕ್ಸಾಂಡ್ರಾ ಮೇರಿ (Alexandra Mary) 'ಅಲೆಕ್ಸ್' ಹಿರ್ಚಿ ಎಂಬವರು ನಿರ್ವಹಿಸುತ್ತಾರೆ. ಅವರು ಯುನೈಟೆಡ್ ಅರಬ್ ಎಮಿರೇಟ್ಸ್‌ನ (United Arab Emirates) ದುಬೈ (Dubai) ಮೂಲದ ವ್ಲಾಗರ್ (vlogger) ಆಗಿದ್ದಾರೆ. ಅವರು ವಿಶ್ವದ ಕೂಲ್ ಎನಿಸುವ ಸುಂದರ ಕಾರುಗಳು, ತಂತ್ರಜ್ಞಾನ, ಐಷಾರಾಮಿ ಸವಲತ್ತು ಮತ್ತು ಗೇಮಿಂಗ್ ಕುರಿತು ಅವರ ವೀಡಿಯೊಗಳಿಗೆ ಹೆಸರುವಾಸಿಯಾಗಿದ್ದಾರೆ. ಚಾಲಕ ಕಿರಿದಾದ ರಸ್ತೆಯಲ್ಲಿ ಅಪಾಯಕಾರಿಯಾಗಿ ಕಾರನ್ನು ಯೂಟರ್ನ್ ಮಾಡುತ್ತಾನೆ. ಆದರೆ ಆತ ಇಲ್ಲಿ ಕಾರನ್ನು ಯೂಟರ್ನ್ ಮಾಡಿದ ಎಂಬುದನ್ನು ನನಗೆ ನಂಬಲಾಗುತ್ತಿಲ್ಲ ಎಂದು ವಿಡಿಯೋ ಪೋಸ್ಟ್ ಮಾಡಿ ಅವರು ಬರೆದಿದ್ದಾರೆ.
GoPro ಕ್ಯಾಮರಾ ಕದ್ದು ಮೇಲೆ ಹಾರಿದ ಹಕ್ಕಿ... ವಿಹಂಗಮ ದೃಶ್ಯ ಸೆರೆ
ವಿಡಿಯೋದಲ್ಲಿ ಚಾಲಕನ್ನು ಸ್ಟೇರಿಂಗ್ ಚಕ್ರದೊಂದಿಗೆ ವೇಗವರ್ಧಕವನ್ನು ತುಂಬಾ ಚಾಣಾಕ್ಷತನದಿಂದ ನಿಭಾಯಿಸುತ್ತಾನೆ. , ಕ್ಲಚ್ ಮತ್ತು ಬ್ರೇಕ್‌ಗಳನ್ನು ಚೆನ್ನಾಗಿ ನಿಯಂತ್ರಿಸುತ್ತಾನೆ. ನಂತರ ಅವನು ಮೊದಲು ಕಾರನ್ನು ಕೆಲವು ಇಂಚುಗಳಷ್ಟು ಹಿಂದಕ್ಕೆ ತೆಗೆದುಕೊಂಡು ನಂತರ ಅದನ್ನು ಮುಂದಕ್ಕೆ ತೆಗೆದುಕೊಂಡು ಅದನ್ನು ಮತ್ತೆ ಮುಂದಕ್ಕೆ ತಿರುಗಿಸುತ್ತಾನೆ ಮತ್ತು ತಕ್ಷಣವೇ ಕಾರು ಪೂರ್ಣ ತಿರುವು ತೆಗೆದುಕೊಂಡು ಯು-ಟರ್ನ್ ತೆಗೆದುಕೊಳ್ಳುತ್ತದೆ.
ವೀಡಿಯೋ ಎಲ್ಲಿಯದ್ದೋ ಗೊತ್ತಿಲ್ಲ, ಸಾವಿಗೂ ಅಂಜದೇ ಹೇಗೆ ಯೂ ಟರ್ನ್ ತಗೊಂಡ ಚಾಲಕ
ಅತ್ಯಂತ ಕಿರಿದಾದ ಲೇನ್‌ನಲ್ಲಿ ಕಾರು ಭಯಾನಕ ಯು-ಟರ್ನ್ ಮಾಡುವುದನ್ನು ವಿಡಿಯೋ ತೋರಿಸುತ್ತಿದ್ದು, ಒಂದು ಹಂತದಲ್ಲಿ, ಕಾರಿನ ಒಂದು ಚಕ್ರವು ರಸ್ತೆಯ ಹೊರಗೆ ತೂಗಾಡುತ್ತಿರುತ್ತದೆ. ಆದಾಗ್ಯೂ, ಅಂತಿಮವಾಗಿ, ಕಾರನ್ನು ಚಾಲನೆ ಮಾಡುವ ವ್ಯಕ್ತಿ ಸಂಪೂರ್ಣವಾಗಿ ವಾಹನವನ್ನು ಯೂಟರ್ನ್ ಮಾಡುತ್ತಾನೆ. ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದು, ಸಾವಿರಾರು ಜನ ಕಾಮೆಂಟ್ ಮಾಡಿದ್ದಾರೆ. ಚಾಲಕನ ಸಾಹಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.