ಬುಲೆಟ್ ಪ್ರೂಫ್,ಬಾಂಬ್ ಪ್ರೊಟೆಕ್ಷನ್ - ರೇಂಜ್ ರೋವರ್ ಕಾರು ಬಿಡುಗಡೆಗೆ ರೆಡಿ!

By Web Desk  |  First Published Mar 4, 2019, 4:26 PM IST

ರೇಂಜ್ ರೋವರ್ ಕಾರು ನೂತನ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಬುಲೆಟ್ ಪ್ರೂಫ್, ಬಾಂಬ್ ಬ್ಲಾಸ್ಟ್‌ಗಳನ್ನ ತಡೆಬಲ್ಲ ಸಾಮರ್ಥ್ಯ ಹೊಂದಿರುವ ನೂತನ ಕಾರಿನ ಬೆಲೆ ಹಾಗು ವಿಶೇಷತೆ ಇಲ್ಲಿದೆ.
 


ಲಂಡನ್(ಮಾ.04): ಟಾಟಾ ಒಡೆತನದ ಲ್ಯಾಂಡ್ ರೋವರ್ ರೇಂಜ್ ರೋವರ್ ಕಾರು ಕಂಪನಿ ಇದೀಗ ಅತ್ಯಂತ ಸುರಕ್ಷತೆಯ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಬುಲೆಟ್ ಪ್ರೂಫ್ ಹಾಗೂ ಬಾಂಬ್ ಬ್ಲಾಸ್ಟ್ ಪ್ರೊಟೆಕ್ಷನ್ ನೀಡುವ ರೇಂಜ್ ರೋವರ್ ಕಾರನ್ನ ಫರ್ನ್‌ಬರ್ಗ್ ಅಂತಾರಾಷ್ಟ್ರೀಯ ಮೋಟಾರ್ ಶೋನಲ್ಲಿ ಪ್ರದರ್ಶನಕ್ಕಿಡಲಾಗಿದೆ.

ಇದನ್ನೂ ಓದಿ: ಅಮಿತಾಬ್ ಬಚ್ಚನ್ ರೋಲ್ಸ್ ರಾಯ್ಸ್ ಮಾರಾಟ- ಬೆಂಗಳೂರಿಗೆ ಬಂತು ದುಬಾರಿ ಕಾರು!

Tap to resize

Latest Videos

ತುರ್ತು ಸಂದರ್ಭದಲ್ಲಿ ಕಾರಿನಿಂದ ಹೊರಬಲು ತುರ್ತು ನಿರ್ಗಮನ ಕೂಡ ಲಭ್ಯವಿದೆ. ತುರ್ತು ಅವಶ್ಯತೆ ಬಿದ್ದಾಗ ಕಾರಿನ ಸೈರನ್ ಬಡಿದುಕೊಳ್ಳುತ್ತೆ. ಕಾರಿನ ಗಾಜು ಅಥವಾ ಯಾವುದೇ ಭಾಗಕ್ಕೆ ಬುಲೆಟ್ ತಾಗಿದರೆ ಒಳಗಿದ್ದವರಿಗೆ ಯಾವುದೇ ಸಮಸ್ಯೆ ಇಲ್ಲ. ಇನ್ನು ಸಣ್ಣ ಬಾಂಬ್ ಬ್ಲಾಸ್ಟ್‌ ತಡೆಯವು ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ: ಮಹಿಳೆಯ ಟೆಸ್ಟ್ ಡ್ರೈವ್‌ಗೆ ಶೋ ರೂಂ, ಐ20 ಕಾರು ಪುಡಿ ಪುಡಿ!

ಗರಿಷ್ಠ ಸುರಕ್ಷತೆಯ ರೇಂಜ್ ರೋವರ್ ಕಾರು 5.0 ಲೀಟರ್ ಸೂಪರ್‌ ಚಾರ್ಜಡ್ V8 ಪೆಟ್ರೋಲ್ ಎಂಜಿನ್ ಹೊಂದಿದೆ. ಕಾರಿನ ಗರಿಷ್ಠ ವೇಗ 193KMPH. ಈ ಕಾರಿನ ಬೆಲೆ 10 ಕೋಟಿ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ.
 

click me!