LED ಹೆಡ್‌ಲ್ಯಾಂಪ್ಸ್, ಸೂಪರ್‌ಮೋಟೋ ಮೋಡ್: BS6 KTM 250 ಡ್ಯೂಕ್ ಲಾಂಚ್ !

By Suvarna News  |  First Published Aug 8, 2020, 12:14 PM IST

ಆಕರ್ಷಕ DRLನೊಂದಿಗೆ ಸ್ಪ್ಲಿಟ್ LED ಹೆಡ್‍ಲ್ಯಾಂಪ್, ಆಪ್ಟಿ, ಮಂ ಯೂಸರ್ ವ್ಯಾಲ್ಯೂನೊಂದಿಗೆ ಗರಿಷ್ಠ ಮಟ್ಟದ ರೈಡಿಂಗ್ ಎಕ್ಸಿಲರೇಶನ್, ಶಕ್ತಿಶಾಲಿ ಮತ್ತು ಸುಧಾರಿತ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆ ಒಳಗೊಂಡಿರುವ ನೂತನ KTM 250 ಡ್ಯೂಕ್ ಬೈಕ್ ಬಿಡುಗಡೆಗೊಂಡಿದೆ. ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.


ಬೆಂಗಳೂರು(ಆ.6): ಭಾರತದ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಪ್ರೀಮಿಯಂ ಮೋಟರ್ ಸೈಕಲ್ ಬ್ರ್ಯಾಂಡ್ ಆಗಿರುವ KTM ತನ್ನ KTM 250 ಡ್ಯೂಕ್ ಬೈಕನ್ನು ಮೇಲ್ದರ್ಜೆಗೇರಿಸಿದೆ. ಬಿಡುಗಡೆಯಾದ ದಿನದಿಂದ ಅತ್ಯಂತ ಜನಪ್ರಿಯ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯ ಮೋಟರ್‌ಸೈಕಲ್ ಅನ್ನೋ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. DRL ನೊಂದಿಗೆ ಸಂಪೂರ್ಣವಾದ LED ಹೆಡ್‍ಲ್ಯಾಂಪ್ ಘಟಕ, ಸೂಪರ್‍ಮೋಟೋ  ಮೋಡ್‍ನೊಂದಿಗೆ ಡ್ಯುಯೆಲ್ ಚಾನೆಲ್ ABS, ಡಾರ್ಕ್ ಗ್ಯಾಲ್ವಾನೋ , ಸಿಲ್ವರ್ ಮೆಟಾಲಿಕ್ ಹಾಗೂ ಒನ್ ಟಚ್ ಸ್ಟಾರ್ಟ್ ಫಂಕ್ಷನ್‍ನೊಂದಿಗೆ ಆಕರ್ಷಕವಾದ ಸ್ಟೈಲ್‍ನೊಂದಿಗೆ ಮೇಲ್ದರ್ಜೆಗೇರಿದೆ.

Latest Videos

undefined

ಅಮೆರಿಕದಲ್ಲಿ ಬಿಡುಗಡೆಯಾಗುತ್ತಿದೆ ಮೇಡ್ ಇನ್ ಇಂಡಿಯಾ KTM ಡ್ಯೂಕ್ 200!

ಈ ಕ್ವಾರ್ಟರ್ ಲೀಟರ್ KTM 250 ಡ್ಯೂಕ್ ಆಪ್ಟಿಮಂ ಯೂಸರ್ ವ್ಯಾಲ್ಯೂನೊಂದಿಗೆ ಗರಿಷ್ಠ ಮಟ್ಟದ ರೈಡಿಂಗ್ ಎಕ್ಸಿಲರೇಶನ್ ಅನ್ನು ಒಳಗೊಂಡಿದೆ. ಹಗುರವಾದ, ಶಕ್ತಿಶಾಲಿ ಮತ್ತು ಸುಧಾರಿತ ತಂತ್ರಜ್ಞಾನದೊಂದಿಗೆ ಮೇಲ್ದರ್ಜೆಗೇರಿರುವ ಈ ಮೋಟಾರ್ ಸೈಕಲ್, ಬೆಳಗಿನಿಂದ ಸಂಜೆವರೆಗೆ ದಣಿವರಿಯದ ಥ್ರಿಲ್ಲಿಂಗ್ ರೈಡಿಂಗ್ ಅನುಭವವನ್ನು ನೀಡುವ ಭರವಸೆಯ ಬೈಕ್ ಆಗಿದೆ. ಓಪನ್ ಕಾಟ್ರಿಡ್ಜ್ ಅಪ್‍ಸೈಟ್-ಡೌನ್ ಡಬ್ಲ್ಯೂಪಿ ಫೋಕ್ರ್ಸ್, ಸ್ಲಿಪರ್ ಕ್ಲಚ್, ಪ್ರೀಲೋಡ್ ಅಡ್ಜಸ್ಟೇಬಲ್ ಮೋನೋ ಶಾಕ್ಸ್‍ನಂತಹ ಭಾಗಗಳು ಬೈಕ್ ಅನ್ನು ಅತ್ಯಾಕರ್ಷಕಗೊಳಿಸಿವೆ. ಇದರಲ್ಲಿ 30PS ಪವರ್ ಮತ್ತು 24 NM ಟಾರ್ಕ್ ಇದೆ.

KTM 390 ಬೈಕ್ ಖರೀದಿ ಸುಲಭ, ಭರ್ಜರಿ ಆಫರ್ ಘೋಷಣೆ!

ಈ ಸೂಪರ್‌ಮೋಟೋ ಮೋಡ್‍ನ ಬೈಕ್ KTM 250 ಡ್ಯೂಕ್‍ನಲ್ಲಿನ ಆಕರ್ಷಕ DRLನೊಂದಿಗೆ ಸ್ಪ್ಲಿಟ್ LED ಹೆಡ್‍ಲ್ಯಾಂಪ್ ಅನ್ನು ಒಳಗೊಂಡಿರುವುದು ಈ ಬೈಕ್ ವಿನ್ಯಾಸದಲ್ಲಿ ಬಹುದೊಡ್ಡ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಈ ಮೂಲಕ ಇದು ದೊಡ್ಡಣ್ಣನಂತೆ ಕಾಣುತ್ತದೆ. ಕೆಟಿಎಂ 1290 ಸೂಪರ್ ಡ್ಯೂಕ್ ಆರ್ ಅಲ್ಟ್ರಾಮೀನ್, ಆಗಿದ್ದು, ಮಂದ ಅಥವಾ ಕತ್ತಲಿನ ಪರಿಸ್ಥಿತಿಯಲ್ಲಿಯೂ ಅತ್ಯದ್ಭುತವಾದ ಗೋಚರತೆಯನ್ನು ನೀಡುತ್ತದೆ.

ಈ KTM 250 ಡ್ಯೂಕ್ ಎರಡು ಆಕರ್ಷಕ ಬಣ್ಣಗಳಾದ ಡಾರ್ಕ್ ಗ್ಯಾಲ್ವಾನೋ ಮತ್ತು ಸಿಲ್ವರ್ ಮೆಟಾಲಿಕ್‍ನಲ್ಲಿ  ಲಭ್ಯವಿದೆ, ಇದರ ಬೆಲೆ 2,09,280 ರೂಪಾಯಿಗಳಾಗಿದೆ (ಎಕ್ಸ್-ಶೋರೂಂ, ದೆಹಲಿ).

ಪ್ರೀಮಿಯಂ ಸ್ಪೋರ್ಟ್ ಮೋಟರ್‍ಸೈಕಲ್ ವಿಭಾಗದಲ್ಲಿ ಉತ್ಸಾಹ ಹೊಂದಿರುವವರಿಗೆ ಈ ಆಕರ್ಷಕವಾದ ಕ್ವಾರ್ಟರ್ ಲೀಟರ್ ಮೋಟರ್‍ಸೈಕಲ್ ಲಭ್ಯವಿದೆ. ಕೆಟಿಎಂನ ಸರಿಸಾಟಿ ಇಲ್ಲದ ಪರಂಪರೆಯಿಂದ ಉತ್ತೇಜಿತವಾಗಿ ವಿನ್ಯಾಸಗೊಳಿಸಿರುವ ಬೈಕ್ ಇದಾಗಿದೆ. ಹೈಟೆಕ್ ರೇಸ್ ರೆಡಿ ಇಂಜಿನ್ ಮತ್ತು ಬಿಡಿಭಾಗಗಳು ಇದರಲ್ಲಿವೆ. ಕ್ವಾರ್ಟರ್ ಲೀಟರ್ ಕೆಟಿಎಂ ಬೈಕ್ ಆಗಿರುವ ಇದು ಅತ್ಯುತ್ತಮವಾದ ಬೈಕಿಂಗ್ ಕಾರ್ಯದಕ್ಷತೆಯನ್ನು ನೀಡಲಿದೆ ಎಂದು  ಬಜಾಜ್ ಆಟೋ ಲಿಮಿಟೆಡ್‍ನ ಅಧ್ಯಕ್ಷ (ಪ್ರೋಬೈಕಿಂಗ್) ಸುಮೀತ್ ನಾರಂಗ್ ಹೇಳಿದರು.

click me!