ಎಲೆಕ್ಟ್ರಿಕ್ ಕಾರು ಖರೀದಿಸುವವರಿಗೆ ಸರ್ಕಾರದಿಂದ 1.5 ಲಕ್ಷ ರೂ ಪ್ರೋತ್ಸಾಹ ಧನ!

By Suvarna NewsFirst Published Aug 7, 2020, 8:04 PM IST
Highlights

ಮಾಲಿನ್ಯ ನಿಯಂತ್ರಣ ಹಾಗೂ ಇಂಧನ ಆಮದು ಕಡಿಮೆ ಮಾಡುವ ಹಾಗೂ ಭವಿಷ್ಯ ವಾಹನ ಎಂದೇ ಗುರುತಿಸಿಕೊಂಡಿರುವ ಎಲೆಕ್ಟ್ರಿಕ್ ವಾಹನ ಖರೀದಿ ಉತ್ತೇಜಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಇದೀಗ ದೆಹಲಿ ಸರ್ಕಾರ ಹೊಸ ಎಲೆಕ್ಟ್ರಿಕ್ ವಾಹನ ನೀತಿಯನ್ನು ಜಾರಿ ಮಾಡಿದೆ.

ದೆಹಲಿ(ಆ.07): ಅರವಿಂದ್ ಕೇಂಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಎಲೆಕ್ಟ್ರಿಕ್ ವಾಹನ ಖರೀದಿ ಉತ್ತೇಜಿಸಲು ಹೊಸ ನೀತಿ ಜಾರಿಗೆ ತಂದಿದೆ. ಈ ಮೂಲಕ ದೆಹಲಿಯಲ್ಲಿ ಮಿತಿ ಮೀರಿದ ವಾಯು ಮಾಲಿನ್ಯ ತಗ್ಗಿಸಲು ಕೇಜ್ರಿ ಸರ್ಕಾರ ಪ್ಲಾನ್ ಮಾಡಿದೆ. ನೂತನ ನೀತಿ ಪ್ರಕಾರ ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿ ಸುಲಭವಾಗಿದೆ. ಸರ್ಕಾರದಿಂದ ಪ್ರೋತ್ಸಾಹ ಧನ, ರಿಯಾಯಿತಿ ಹಾಗೂ ರಿಜಿಸ್ಟ್ರೇಶನ್ ಮೊತ್ತ ಮನ್ನಾ ಸೇರಿದಂತೆ ಮಹತ್ತರ ನೀತಿ ಜಾರಿಗೆ ತಂದಿದೆ.

ಹೊಸ ಕೊಡುಗೆ ಘೋಷಣೆ; ವಾಹನ ಖರೀದಿಸದೆ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಚಾಲನೆ ಆನಂದಿಸಿ!

ದೆಹಲಿಯಲ್ಲಿ ಜಾರಿಗೆ ತಂದಿರುವ ನೂತನ ಎಲೆಕ್ಟ್ರಿಕ್ ವಾಹನ ನೀತಿ 3 ವರ್ಷಗಳ ಕಾಲ ಜಾರಿಯಲ್ಲಿರಲಿದೆ. ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ಸಬ್ಸಿಡಿ ಸಿಗಲಿದೆ. ಆಯಾ ವಾಗನ ಆಧರಿಸಿ ಸಬ್ಸಿಡಿ ಸಿಗಲಿದೆ. ಇನ್ನು ಗರಿಷ್ಠ 1.5 ಲಕ್ಷ ರೂಪಾಯಿ ವರೆಗೆ ರಿಯಾಯಿತಿ ಸಿಗಲಿದೆ. ಇಷ್ಟೇ ಅಲ್ಲ ದ್ವಿಚಕ್ರ, ಕಾರು, ಹಾಗೂ ಇ ರಿಕ್ಷಾ ವಾಹನ ರಿಜಿಸ್ಟ್ರೇಶನ್ ಸಂಪೂರ್ಣ ಉಚಿತವಾಗಲಿದೆ.

470 ಕಿ.ಮೀ ಮೈಲೇಜ್, 15 ನಿಮಿಷದಲ್ಲಿ ಚಾರ್ಜಿಂಗ್, ಬರುತ್ತಿದೆ Evoke 6061 ಎಲೆಕ್ಟ್ರಿಕ್ ಬೈಕ್!

ಇದರೊಂದಿಗೆ ಕಮರ್ಷಿಯಲ್ ಎಲೆಕ್ಟ್ರಿಕ್ ವಾಹನಕ್ಕೂ ಆಫರ್ ನೀಡಲಾಗಿದೆ. ಈಗಾಗಲೇ ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಶನ್ ಅಳವಡಿಸಲಾಗುತ್ತಿದೆ. ನಗರದಲ್ಲಿ ಹೆಚ್ಚುವರಿ ವಾಹನ ಚಾರ್ಜಿಂಗ್ ಸ್ಟೇಶನ್ ಅಳವಡಿಸಲು ಸರ್ಕಾರ ನಿರ್ಧರಿಸಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಎಲೆಕ್ಟ್ರಿಕ್ ವಾಹನ ಖರೀದಿಗೆ ಉತ್ತೇಜಿಸಿ ದೆಹಲಿಯಲ್ಲಿನ ಮಾಲಿನ್ಯ ನಿಯಂತ್ರಣಕ್ಕೆ ಈ ನೀತಿ ಜಾರಿಗೆ ತರಲಾಗಿದೆ. 3 ವರ್ಷದ ಬಳಿಕ ಈ ನೀತಿಯನ್ನು ಪರಾಪರ್ಶಿಸಿ ಬದಲಾವಣೆ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ.

click me!