ಮರ್ಸಡೀಸ್ ಬೆಂಝ್ GLS SUV ಕಾರು ಖರೀದಿಸಿದ ಬಾಲಿವುಡ್ ನಟ!

By Web Desk  |  First Published Mar 15, 2019, 4:23 PM IST

ಬಾಲಿವುಡ್ ನಟ ನೂತನ ಮರ್ಸಡೀಸ್ ಬೆಂಝ್ GLS SUV ಕಾರು ಖರೀದಿಸಿದ್ದಾರೆ. ಐಷಾರಾಮಿ ಹಾಗೂ ಗರಿಷ್ಠ ಭದ್ರತೆಯ ಈ ಕಾರಿನ ವಿಶೇಷತೆ ಏನು? ಈ ಕಾರನ್ನು ಖರೀದಿಸಿ ನಟ ಯಾರು? ಇಲ್ಲಿದೆ ವಿವರ.
 


ಮುಂಬೈ(ಮಾ.15): ಬಾಲಿವುಡ್ ಸೆಲೆಬ್ರೆಟಿಗಳು, ಸ್ಯಾಂಡಲ್‌ವುಡ್ ನಟ-ನಟಿಯರು ಹೆಚ್ಚಾಗಿ ಮರ್ಸಡೀಸ್ ಬೆಂಝ್ ಕಾರಿನ ಮೊರೆ ಹೋಗುತ್ತಾರೆ. ಸುಖಕರ, ಆರಾಮದಾಯ ಹಾಗೂ ಗರಿಷ್ಠ ಭದ್ರತೆ ಹೊಂದಿರುವ ಮರ್ಸಡೀಸ್ ಬೆಂಜ್ ಕಾರು ರಾಜಕಾರಣಿಗಳಿಗೂ ಅಚ್ಚು ಮೆಚ್ಚು. ಇದೀಗ ಬಾಲಿವುಡ್ ನಟ ರನ್‌ದೀಪ್ ಹೂಡ ಮರ್ಸಡೀಸ್ ಬೆಂಝ್ GLS SUV ಕಾರು ಖರೀದಿಸಿದ್ದಾರೆ.

ಇದನ್ನೂ ಓದಿ: 2 ತಿಂಗಳಲ್ಲಿ 13 ಸಾವಿರ ಮಹೀಂದ್ರ XUV300 ಕಾರು ಬುಕ್- ಬ್ರಿಜಾಗೆ ಪೈಪೋಟಿ!

Tap to resize

Latest Videos

undefined

ಮರ್ಸಡೀಸ್ ಬೆಂಝ್ GLS SUV ಕಾರಿನ ಬೆಲೆ 85.57 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಕಾರಿನಲ್ಲಿ ಎರಡು ವೇರಿಯೆಂಟ್ ಲಭ್ಯವಿದೆ. ಮರ್ಸಡೀಸ್ ಬೆಂಝ್ GLS 350d ಹಾಗೂ ಮರ್ಸಡೀಸ್ ಬೆಂಝ್ GLS 400 ಕಾರು ಹೆಚ್ಚು ಜನಪ್ರಿಯವಾಗಿದೆ.

 

 

ಇದನ್ನೂ ಓದಿ:  ಪ್ರಚಾರದಲ್ಲಿ ರೋಡ್ ಶೋ, ಬೈಕ್ ರ‍್ಯಾಲಿ ನಿಷೇಧ- ಸುಪ್ರೀಂ ಕೋರ್ಟ್‌ಗೆ PIL ಸಲ್ಲಿಕೆ!
350d ಮರ್ಸಡೀಸ್ ಬೆಂಝ್ GLS ಕಾರು  3.0-ಲೀಟರ್ ಟರ್ಬೋಚಾರ್ಜರ್ V6 ಡೀಸೆಲ್ ಎಂಜಿನ್, 225 Bhp ಪವರ್ ಹಾಗೂ  620 Nm ಪೀಕ್ ಟಾರ್ಕ್ ಉತ್ಪಾದಿಸೋ ಸಾಮರ್ಥ್ಯ ಹೊಂದಿಗದೆ. ಇನ್ನು ಪೆಟ್ರೋಲ್ ಎಂಜಿನ್ ಕಾರು 3.0 ಲೀಟರ್ V6 ಪೆಟ್ರೋಲ್ ಎಂಜಿನ್, 329 Bhp ಪವರ್ ಹಾಗೂ 480 Nm ಪೀಕ್ ಟಾರ್ಕ್ 9 ಸ್ಪೀಡ್ ಆಟೋಮ್ಯಾಟಿಕ್ ಟ್ಸಾನ್ಸಮಿಶನ್ ಹೊಂದಿದೆ.
 

click me!