ಬೈಕ್ ರೇಸ್ ಆರಂಭಕ್ಕೂ ಮುನ್ನ ಬೆಂಕಿ- 18 ಬೈಕ್ ಭಸ್ಮ!

By Web DeskFirst Published Mar 15, 2019, 3:51 PM IST
Highlights

ಬೈಕ್ ರೇಸ್‌ಗಾಗಿ ಸಂಪೂರ್ಣ ತಯಾರಿ ನಡೆಸಲಾಗಿತ್ತು. 18 ಬೈಕ್‌ಗಳು ಟ್ರ್ಯಾಕ್‌ನಲ್ಲಿದ್ದವು. ರೇಸ್ ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿತ್ತು. ಆದರೆ ದಿಢೀರ್ ಹೊತ್ತಿಕೊಂಡ ಬೆಂಕಿ, ಟೂರ್ನಿಯನ್ನೇ ರದ್ದು ಮಾಡಿದೆ. 

ಸ್ಪೇನ್(ಮಾ.15): ಮೋಟೋ ಇ-ಎಲೆಕ್ಟ್ರಿಕ್ ಮೋಟರ್‌ಸೈಕಲ್ ಚಾಂಪಿಯನ್‌ಶಿಪ್‌ನಲ್ಲಿ ಬೆಂಕಿ ಅವಘಡ ಕಾಣಿಸಿಕೊಂಡ ರೇಸ್‌ನ ಎಲ್ಲಾ 18 ಬೈಕ್‌ಗಳು ಸುಟ್ಟು ಕರಕಲಾಗಿದೆ. 3 ದಿನ ಪ್ರಿ ಟೆಸ್ಟ್‌ಗಾಗಿ ಎಲೆಕ್ಟ್ರಿಕ್ ರೇಸ್‌ಬೈಕ್‌ಗಳನ್ನ ಟ್ರ್ಯಾಕ್‌ನಲ್ಲಿ ನಿಲ್ಲಿಸಲಾಗಿತ್ತು. ಆದರೆ ಬೆಂಕಿ ಅವಘಡಕ್ಕೆ ಎಲ್ಲಾ ಬೈಕ್‍‌ಗಳು ಭಸ್ಮವಾಗಿದೆ.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್‌ಗೆ ಪೈಪೋಟಿ -ಬರುತ್ತಿದೆ ಬಜಾಜ್ KTM ಬೈಕ್!

ಈ ಘಟನೆ ನಡೆದಿರೋದು ಸ್ಪೇನ್‌ನ ಜೆರೆಝ್‌ನಲ್ಲಿ. ಮೋಟೋ ಇ-ಎಲೆಕ್ಟ್ರಿಕ್ ಮೋಟರ್‌ಸೈಕಲ್ ಚಾಂಪಿಯನ್‌ಶಿಪ್‌ಗಾಗಿ ವಿಶೇಷ ಎಲೆಕ್ಟ್ರಿಕ್ ಬೈಕ್ ಟೆಸ್ಟಿಂಗ್ ನಡೆಸಲು ಎಲ್ಲಾ ತಯಾರಿ ಮಾಡಿಕೊಂಡಿತ್ತು. ಆದರೆ ದಿಢೀರ್ ಬೆಂಕಿ ಹೊತ್ತಿಕೊಂಡ ಪರಿಣಾಮ, ಎಲ್ಲಾ ಬೈಕ್ ಸುಟ್ಟುಹೋಗಿವೆ. ಅದೃಷ್ಠವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ನೀಡಿ ಹಾರ್ಲೆ ಡೇವಿಡ್ಸನ್ ಖರೀದಿಸಿ - ಭರ್ಜರಿ ಎಕ್ಸ್‌ಚೇಂಜ್ ಆಫರ್!​​​​​​​

ಬೆಂಕಿ ಅವಘಡದಿಂದ ಮೋಟೋ ಇ-ಎಲೆಕ್ಟ್ರಿಕ್ ಮೋಟರ್‌ಸೈಕಲ್ ಚಾಂಪಿಯನ್‌ಶಿಪ್‌ ಮುಂದೂಡಲಾಗಿದೆ. ಇಷ್ಟೇ ಅಲ್ಲ, ತನಿಖೆಗೆ ಆದೇಶಿಸಿದೆ. ಆದರೆ ಚಾಂಪಿಯನ್‌ಶಿಪ್ ಆಯೋಜನೆಯಾಗದೇ ಕೋಟಿ ಕೋಟಿ ನಷ್ಟ ಸಂಭವಿಸಿದೆ. ಶೀಘ್ರದಲ್ಲೇ ರೇಸ್ ದಿನಾಂಕ ಘೋಷಿಸಿವುದಾಗಿ ಮೋಟೋ ಆಯೋಜಕರು ಸ್ಪಷ್ಟಪಡಿಸಿದ್ದಾರೆ.

click me!