ಅಮಿತಾಬ್ ಬಚ್ಚನ್ ಮನೆಗೆ ಹೊಸ ಅತಿಥಿ ಆಗಮನ; ಶುರುವಾಯ್ತು ಹೊಸ ಜೀವನ!

By Suvarna News  |  First Published Sep 3, 2020, 7:52 PM IST

ಕೊರೋನಾ ವೈರಸ್ ತಗುಲಿ ಚಿಕಿತ್ಸೆ ಪಡೆದ ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಗುಣಮುಖರಾಗಿ ಮತ್ತೆ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಇದರ ನಡುವೆ ಬಿಗ್ ಬಿ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. 


ಮುಂಬೈ(ಸೆ.03): ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಇದೀಗ ಕೆಬಿಸಿ ರಿಯಾಲಿಟಿ ಶೋ ಸೇರಿದಂತೆ ಹಲವು ಶೂಟಿಂಗ್ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೊರೋನಾ ವೈರಸ್ ಕಾರಣ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದಿದ್ದ ಬಿಗ್‌ಬಿ ಸಂಪೂರ್ಣ ಗುಣಮುಖರಾಗಿದ್ದಾರೆ. ಕೊರೋನಾದಿಂದ ಗುಣಮುಖರಾದ ಅಮಿತಾಬ್ ಹೊಸ ಜೀವನ ಆರಂಭಿಸಿದ್ದಾರೆ. ಶೂಟಿಂಗ್ ಕಾರ್ಯ ಆರಂಭಗೊಂಡಂತೆ ಅಮಿತಾಬ್ ಬಚ್ಚನ್ ಮನೆಗೆ ಹೊಸ ಅತಿಥಿಯನ್ನು ಬರ ಮಾಡಿಕೊಂಡಿದ್ದಾರೆ. ಬಚ್ಚನ್ ಮನೆಗೆ ಬಂದ ಹೊಸ ಅತಿಥಿ ಬಳಿ ಬಣ್ಣದ ಮರ್ಸಿಡೀಸ್  ಬೆಂಝ್ S ಕ್ಲಾಸ್ ಕಾರು.

ಸಂಪೂರ್ಣ ಚಾರ್ಜ್‌ಗೆ 700 ಕಿ.ಮೀ ಮೈಲೇಜ್; ಇದು ಮರ್ಸಡೀಸ್ ಬೆಂಜ್ ಎಲೆಕ್ಟ್ರಿಕ್ ಕಾರು!

Tap to resize

Latest Videos

undefined

ಅಮಿತಾಬ್ ಬಚ್ಚನ್ ಬುಕ್ ಮಾಡಿದ ಹೊಚ್ಚ ಹೊಸ ಮರ್ಸಿಡೀಸ್ ಬೆಂಝ್ S ಕ್ಲಾಸ್ 350d ಕಾರು ವಿತರಣೆಯಾಗಿದೆ. ಅಮಿತಾಬ್ ಖರೀದಿಸಿದ ನೂತನ ಕಾರಿನ ಬೆಲೆ 1.35 ಕೋಟಿ ರೂಪಾಯಿ(ಎಕ್ಸ್  ಶೋ ರೂಂ). ಈ ಮೂಲಕ ಬಚ್ಚನ್ ಕಾರು ಸಂಗ್ರಹಕ್ಕೆ ಮತ್ತೊಂದು ಐಷಾರಾಮಿ ಕಾರು ಸೇರ್ಪಡೆಯಾಗಿದೆ.

 

ಹೊಚ್ಚ ಹೊಸ ಮರ್ಸಿಡಿಸ್ ಬೆಂಜ್ GLE LWB ಹಾಗೂ GLS ಕಾರು ಬಿಡುಗಡೆ!

ಅಮಿತಾಬ್ ಬಚ್ಚನ್ ಬಳಿ ರೋಲ್ಸ್ ರಾಯ್ಸ್ ಫ್ಯಾಂಟಮ್, ಬೆಂಟ್ಲಿ ಕಾಂಟಿನೆಂಟಲ್ GT, ಮರ್ಸಿಡೀಸ್ ಬೆಂಝ್ SL500, ರೇಂಜ್ ರೋವರ್ ವೋಗ್ಯು, ಪೊರ್ಶೆ ಕಮ್ಯಾನ್ S, ಮಿನಿ ಕೂಪರ್ S ಹಾಗೂ ಟೊಯೋಟಾ ಲ್ಯಾಂಡ್ ಕ್ರೂಸರ್ ಐಷಾರಾಮಿ ಕಾರು ಹೊಂದಿದ್ದಾರೆ. ಇದೀಗ ಈ ಸಾಲಿಗೆ ಮರ್ಸಿಡೀಸ್ ಬೆಂಝ್ S ಕ್ಲಾಸ್ 350d ಕಾರು ಸೇರಿಕೊಂಡಿದೆ.

ಲಕ್ಸುರಿ ಸೆಡಾನ್ ಮಾರುಕಟ್ಟೆಯಲ್ಲಿ ಮರ್ಸಿಡೀಸ್ ಬೆಂಝ್ S ಕ್ಲಾಸ್ 350d ಗೋಲ್ಡ್ ಸ್ಟಾಂಡರ್ಡ್ ಕಾರಾಗಿದೆ. ಇದೀಗ ಮರ್ಸಿಡೀಸ್ ಬೆಂಝ್ ಹಲವು ಹೆಚ್ಚುವರಿ ಫೀಚರ್ಸ್ ಹಾಗೂ ಅಪ್‌ಗ್ರೇಡ್‌ನೊಂದಿಗೆ 2021ರ ಮರ್ಸಿಡೀಸ್ ಬೆಂಝ್ S ಕ್ಲಾಸ್ 350d ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಯೂಸರ್ ರೇಡಾರ್ ಸೆನ್ಸಾರ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ.

click me!