ಅಂಬಾನಿ ಬಾಡಿಗಾರ್ಡ್ಸ್ ಬಳಸೋ ಕಾರು ಯಾವುದು?

Published : Nov 04, 2018, 05:52 PM IST
ಅಂಬಾನಿ ಬಾಡಿಗಾರ್ಡ್ಸ್ ಬಳಸೋ ಕಾರು ಯಾವುದು?

ಸಾರಾಂಶ

ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ದುಬಾರಿ ಕಾರು ಬಳಸೋದು ಅಚ್ಚರಿಯೇನಲ್ಲ. ಆದರೆ ಅಂಬಾನಿಗೆ Z+ ಭದ್ರತೆ ನೀಡೋ ಪೊಲೀಸರು ಬಳಸೋ ಕಾರು ಕೂಡ ಅತ್ಯಂತ ದುಬಾರಿ ಕಾರು. ಹಾಗಾದರೆ ಅಂಬಾನಿ ಬಾಡಿಗಾರ್ಡ್ಸ್ ಬಳಿ ಇರೋ ಕಾರು ಯಾವುದು? ಇಲ್ಲಿದೆ.  

ಮುಂಬೈ(ನ.04): ಉದ್ಯಮಿ ಮುಕೇಶ್ ಅಂಬಾನಿ ಭಾರತದ ಮಾತ್ರವಲ್ಲ, ವಿಶ್ವದ ಶ್ರೀಮಂತ ಉದ್ಯಮಿ. ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿಗೆ ಅಗ್ರಸ್ಥಾನವಿದೆ. ನಿಮಿಷಕ್ಕೆ ಕೋಟಿ ಕೋಟಿ ಆದಾಯಗಳಿಸೋ ಮುಕೇಶ್ ಅಂಬಾನಿ ಹಾಗೂ ಕುಟುಂಬಕ್ಕೆ Z+ ಭದ್ರತೆ ನೀಡಲಾಗಿದೆ.

ಅಂಬಾನಿ ರಸ್ತೆ ಮೂಲಕ ಎಲ್ಲೇ ಪ್ರಯಾಣ ಮಾಡುವಾಗ ಈ ಬಾಡಿಗಾರ್ಡ್ ಅಂಬಾನಿಯ ಕಾರಿನ ಸುತ್ತ ಸುತ್ತುವರೆದಿರುತ್ತಾರೆ. ವಿಶೇಷ ಅಂದರೆ ಅಂಬಾನಿ ಬಾಡಿಗಾರ್ಡ್ಸ್ ಬಳಸೋ ಕಾರು BMW X5.ಇದು ದುಬಾರಿ SUV ಕಾರು.

ಮುಕೇಶ್ ಅಂಬಾನಿ ಗರಿಷ್ಠ ಸುರಕ್ಷತೆಯ ಮರ್ಸಡೀಸ್ ಬೆಂಜ್ ಎಸ್ ಕ್ಲಾಸ್ ಹಾಗೂ BMW 7 ಸೀರಿಸ್ ಕಾರು ಬಳಸುತ್ತಾರೆ. ಜೊತೆಗೆ  Z+ ಭದ್ರತೆ ಕೂಡ ಇದೆ. ಅಂಬಾನಿಗೆ Z+ ಭದದ್ರತೆ ನೀಡೋ ಪೊಲೀಸರು ಇದೇ BMW X5 ಕಾರಿನಲ್ಲಿ ಎಸ್ಕಾರ್ಟ್ ಮಾಡುತ್ತಾರೆ.

ಈ BMW X5 ಕಾರನ್ನ ಅಂಬಾನಿ ಖರೀದಿಸಿ ತಮಗೆ ಭದ್ರತೆ ನೀಡೋ ಪೊಲೀಸರಿಗೆ ನೀಡಿದ್ದಾರೆ. ಈ ಕಾರಿನ ಬೆಲೆ 70 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 3.0 ಲೀಟರ್ ಇನ್‌ಲೈನ್ 6 ಸಿಲಿಂಡರ್ ಎಂಜಿನ್ ಹೊಂದಿದೆ. 258 bhp ಪವರ್ ಹಾಗೂ 560nm ಟಾರ್ಕ್ ಉತ್ಪಾದಿಸುತ್ತೆ. ಈ ಶಕ್ತಿಶಾಲಿ ಕಾರು ಅಂಬಾನಿಗೆ ಎಸ್ಕಾರ್ಟ್ ಮಾಡುತ್ತೆ.

PREV
click me!

Recommended Stories

ಮಾರುತಿ ಬಲೆನೋಗಿಂತ ಭಾರಿ ಭಿನ್ನ, ಟೋಯೋಟಾ ಗ್ಲಾಂಜಾ ಫೇಸ್‌ಲಿಫ್ಟ್ ಕಾರಿನಲ್ಲಿದೆ ಹಲವು ಅಚ್ಚರಿ
2026 TVS Radeon ಹೊಸ ಬೈಕ್ ಲಾಂಚ್, ಬೆಲೆ 67000! ಬಜೆಟ್ ಸ್ನೇಹಿ ಮೂಲಕ ಕಂಪನಿ ಭರ್ಜರಿ ಪ್ಲಾನ್