ಹಾರ್ನ್ ಮಾಡದೆ 42 ಸಾವಿರ ಕಿಮೀ ಕ್ರಮಿಸಿದ ಬೆಂಗಳೂರು ಯುವಕ!

By Web DeskFirst Published Jun 11, 2019, 9:41 PM IST
Highlights

ಈ ದೇಶದಲ್ಲಿ ವಾಹನ ಸರಾಗವಾಗಿ ಓಡಿಸುವುದು ಒಂದು ದೊಡ್ಡ ಸಾಹಸವೇ ಸರಿ.. ನಿಮ್ಮೆಲ್ಲರ ಅನುಭವಕ್ಕೂ ಹಲವಾರು ಸಂದರ್ಭದಲ್ಲಿ ಇದು ಬಂದೇ ಇರುತ್ತದೆ. ಅದರಲ್ಲಿಯೂ ಮಹಾನಗರಗಳಲ್ಲಿ ಹಾರ್ನ್ ಇಲ್ಲದೆ ವಾಹನ ಚಲಾಯಿಸುವುದು! ಆದರೆ ಇಲ್ಲೊಬ್ಬ ಯುವಕ ಅದೆಲ್ಲವನ್ನು ಮೀರಿ ನಿಂತಿದ್ದಾನೆ.

ಬೆಂಗಳೂರು[ಜೂ. 11] ‘ನೋ ಹಾರ್ನ್’ ಅಭಿಯಾನದ ರೋಲ್ ಮಾಡೆಲ್ ಆಗಿ ನಮ್ಮ ಮುಂದೆ ಇರುವವರು ಭಾರತಿ ಅಥಿನಾರಾಯಣನ್. ಬೆಂಗಳೂರು ನಿವಾಸಿ ನಾರಾಯಣನ್ 2016 ರಿಂದ ನೋ ಹಾರ್ನ್ ಅಭಿಯಾನ ಅನುಸರಿಸಿಕೊಂಡು ಬಂದಿದ್ದಾರೆ.

ಮೂರು ವರ್ಷದ ಅವಧಿಯಲ್ಲಿ ಬರೋಬ್ಬರಿ 42 ಸಾವಿರ ಕಿಲೋ ಮೀಟರ್ ರಸ್ತೆಯನ್ನು ಹಾರ್ನ್ ಮಾಡದೆ ಕ್ರಮಿಸಿದ್ದಾರೆ. ಬೈಕ್ ಇರಲಿ, ಕಾರ್ ಇರಲಿ ಇವರು ಹಾರ್ನ್ ಮಾಡುವುದನ್ನು ಬೇಕಂತಲೆ ಮರೆತಿದ್ದಾರೆ. 

ಆಕ್ಸಿಜನ್ ಸಿಲಿಂಡರ್ ನೊಂದಿಗೆ IAS ಬರೆದವಳಿಗೊಂದು ಸಲಾಂ

ಹಾರ್ನ್ ಮಾಡಿ ಶಬ್ದ ಮಾಲಿನ್ಯ ಮಾಡಬೇಡಿ ಎಂದು ಜಾಗೃತಿ ಮೂಡಿಸುವ ಕೆಲಸ ಮಾಡಿಕೊಂಡು ಬಂದಿರುವ ನಾರಾಯಣನ್ ಕರ್ನಾಟಕ ಮಾತ್ರವಲ್ಲದೆ ಕೇರಳ ಮತ್ತು ತಮಿಳುನಾಡನ್ನು ಸುತ್ತಿದ್ದು ಅಲ್ಲಿಯೂ ಶಬ್ದ ಮಾಲಿನ್ಯಕ್ಕೆ ಬ್ರೇಕ್ ಹಾಕಿಕೊಂಡೆ ಸಾಗಿದ್ದಾರೆ. ವಾಹನ ಚಲಾಯಿಸುವ ನಾವೆಲ್ಲರೂ ನೋ ಹಾರ್ನ್ ಕ್ಯಾಂಪೆನ್ ಕಟ್ಟುನಿಟ್ಟಾಗಿ ಮಾಡಲು ಸಾಧ್ಯವಿಲ್ಲದಿದ್ದರೂ ಅಗತ್ಯ ಇರುವೆಡೆ ಮಾತ್ರ ಶಬ್ದ ಮಾಡೋಣ!

ಇಂಗ್ಲಿಷ್ ನಲ್ಲಿ ಓದಿ, ವಿಡಿಯೋ ನೋಡಿ

click me!