24*7 ರೋಡ್ ಸೈಡ್ ಅಸಿಸ್ಟೆನ್ಸ್ ಸಪೋರ್ಟ್, ನಾಲ್ಕು ಲಕ್ಷ ಕಿಲೋ ಮೀಟರ್‌ಗೆ ಅಥವಾ ನಾಲ್ಕು ವರ್ಷಕ್ಕೆ ವಾರೆಂಟಿ ಇತ್ಯಾದಿ ಫೀಚರ್‌ಗಳೊಂದಿಗೆ ಅಶೋಕ ಲೇಲ್ಯಾಂಡ್ ಎರಡು ಹೊಸ ಟ್ರಕ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳ ಹೆಸರು ಅಶೋಕ್ ಲೇಲ್ಯಾಂಡ್ ಬಾಸ್ ಎಲ್‌ಇ ಹಾಗೂ ಬಾಸ್ ಎಲ್‌ಎಕ್ಸ್. ಈ ಟ್ರಕ್‌ಗಳು 11.1 ಟನ್‌ನಿಂದ 14.05 ಟನ್ ತೂಕದ ಸರಕು ಸಾಗಣೆ ಮಾಡಬಲ್ಲವು. ಒಳಗೆ 14 ಅಡಿ ಅಗಲ, 24 ಅಡಿ ಉದ್ದದ ಸ್ಥಳಾವಕಾಶವಿದೆ.
ಬಡಾ ದೋಸ್ತ್ ಲೈಟ್ ಕಮರ್ಷಿಯಲ್ ವಾಹನ ಬಿಡುಗಡೆ ಮಾಡಿದ ಅಶೋಕ್ ಲೈಲ್ಯಾಂಡ್
ಕೊರೋನಾ ವೈರಸ್ ಕಾರಣ ದೇಶದ ಆಟೋಮೊಬೈಲ್ ಇಂಡಸ್ಟ್ರಿ ಹಿನ್ನಡೆ ಅನುಭವಿಸಿತ್ತು. ಆದರೆ ಇದೀಗ ಚೇತರಿಸಿಕೊಳ್ಳುತ್ತಿದೆ. ಅಶೋಕ್ ಲೇಲ್ಯಾಂಡ್ ಕೂಡ ಚೇತರಿಕೆ ಕಂಡಿದ್ದು, ನಿಧಾನವಾಗಿ ಹೊಸ ಹೊಸ ವಾಹನ ಬಿಡುಗಡೆ ಮಾಡುತ್ತಿದೆ.
ಇದರ ಫಲವಾಗಿ ಇದೀಗ ಅಶೋಖ್ ಲೇಲ್ಯಾಂಡ್ ಬಾಸ್ LE ಹಾಗೂ LX ಟ್ರಕ್ ಬಿಡುಗಡೆ ಮಾಡಿದೆ. ಇದರ ಬೆಲೆ 18 ಲಕ್ಷ ರೂಪಾಯಿ(ಎಕ್ಸ್ ಶೋರೂಂ) ನಿಂದ ಆರಂಭಗೊಳ್ಳುತ್ತಿದೆ. ಈ ಹೊಸ ಟ್ರಕ್‌ಗಳು ಒಟ್ಟು ಮಾಲೀಕತ್ವದ ವೆಚ್ಚ (ಟಿಸಿಒ) ವಿಚಾರದಲ್ಲಿ ಹೊಸ ಮಾನದಂಡ ಸೃಷ್ಟಿಸಿವೆ. ಅತ್ಯುತ್ತಮ ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚವನ್ನು ಈ ಖಾತರಿ ಪಡಿಸುತ್ತದೆ.
ಎಕ್ಸ್ ಶೋ ರೂಂ ಬೆಲೆ: 18 ಲಕ್ಷ ರು. ನಿಂದ ಆರಂಭ