ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್; ಇಲ್ಲಿದೆ ಬೆಲೆ, ವಿಶೇಷತೆ!

By Suvarna News  |  First Published Jan 13, 2020, 5:43 PM IST

ಬಜಾಜ್ ಆಟೋಮೊಬೈಲ್ ಕಂಪನಿ ಮತ್ತೆ ಸ್ಕೂಟರ್ ಕ್ಷೇತ್ರಕ್ಕೆ ಕಾಲಿಟ್ಟಿದೆ.  ಇದೀಗ ನೂತನ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಜ್ಜಾಗಿದೆ. ಈ ಸ್ಕೂಟರ್ ವಿಶೇಷತೆ, ಬೆಲೆ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ. 
 


ಮುಂಬೈ(ಜ.13): ಬಜಾಜ್ ತನ್ನ ಸ್ಕೂಟರ್ ಗತವೈಭವ ಮರುಕಳಿಸುವ ವಿಶ್ವಾಸದಲ್ಲಿದೆ. 80ರ ದಶಕದಲ್ಲಿ ಭಾರತದಲ್ಲೇ ಸದ್ದು ಮಾಡಿದ ಹಮಾರಾ ಬಜಾಜ್ ಬಳಿಕ ಸ್ಥಗಿತಗೊಂಡಿತು. ಬಜಾಜ್ ಬೈಕ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಿತು. ಇದೀಗ ಬಜಾಜ್ ಮತ್ತೆ ಹೊಸ ಅವತಾರದಲ್ಲಿ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಜ.14ರಂದು ಮಾರುಕಟ್ಟೆ ಪ್ರವೇಶಿಸುತ್ತಿದೆ.

ಇದನ್ನೂ ಓದಿ: ರೆಯೊ ಎಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ; ಬುಕಿಂಗ್ ಬೆಲೆ 1999 ರೂ!.

Tap to resize

Latest Videos

undefined

2018ರ ಅಕ್ಟೋಬರ್‌ನಲ್ಲಿ ಅನಾವರಣಗೊಂಡ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಇದೀಗ ರಸ್ತೆಗಿಳಿಯಲು ಸಜ್ಜಾಗಿದೆ. ಮೊದಲ ಹಂತದಲ್ಲಿ ಬಜಾಜ್ ಪುಣೆಯಲ್ಲಿ ಮಾರಾಟ ಆರಂಭಿಸಲಿದೆ.  ಬಳಿಕ ಬೆಂಗಳೂರಿಗೆ ಆಗಮಿಸಲಿದೆ. ರೆಟ್ರೋ ಶೈಲಿಯಿಂದ ಹೆಚ್ಚು ಆಕರ್ಷಕವಾಗಿರುವ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್, ಭಾರತದ ಎಲೆಕ್ಟ್ರಿಕ್ ಸ್ಕೂಟರ್ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಲಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ.

ಇದನ್ನೂ ಓದಿ: ಸೀಟ್ ಕಾರು ಕಂಪನಿಯಿಂದ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್!

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1.10 ಲಕ್ಷ ರೂಪಾಯಿಂ0 1.20 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. ಎದರ್ 450, ಒಕಿನಾವ ಪ್ರೈಸ್ ಸೇರಿದಂತೆ ಭಾರತದಲ್ಲಿ ಲಭ್ಯವಿರುವ ಹಲವು ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬಜಾಜ್ ಚೇತಕ್ ಪೈಪೋಟಿ ನೀಡಲಿದೆ.

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ 4 kW ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. ಇಕೋ ಹಾಗೂ ಸ್ಪೊರ್ಟ್ ರೈಡಿಂಗ್ ಮೂಡ್ ಆಯ್ಕೆಗಳಿವೆ. ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ ಇಕೋ ಮೂಡ್‌ನಲ್ಲಿ 95 ಕಿ.ಮೀ, ಸ್ಪೊರ್ಟ್ ಮೂಡ್‌ನಲ್ಲಿ 85 ಕಿ.ಮೀ ಪ್ರಯಾಣದ ರೇಂಜ್ ನೀಡಲಿದೆ.

click me!