ಬೆಂಗಳೂರಿನ ನೈಸ್‌ ರಸ್ತೆಯಲ್ಲಿ ಬೆಂಜ್‌ ಲಕ್ಸ್‌ ಡ್ರೈವ್‌ ಕರಾಮತ್ತು!

By Web Desk  |  First Published Oct 24, 2019, 2:56 PM IST

ಮರ್ಸಡೀಸ್ ಬೆಂಜ್ ಕಾರು ಓಡಿಸುವುದಲ್ಲಿ ಸಿಗೋ ಮಜಾ ಇನ್ಯಾವ ಕಾರಲ್ಲಿ ಸಿಗುತ್ತೆ ಹೇಳಿ? ದುಬಾರಿ ಹಾಗೂ ಐಷಾರಾಮಿ ಕಾರು ಸಾಮಾನ್ಯರಿಗೆ ಕೈಗೆಟುಕದ ವಸ್ತು. ಆದರೆ ಮರ್ಸಡೀಸ್ ಎಲ್ಲರಿಗೂ ಬೆಂಜ್ ಅನುಭವದ ಅವಕಾಶ ಮಾಡಿತ್ತು. ಬೆಂಗಳೂರಿನ ನೈಸ್ ರಸ್ತೆಯಲ್ಲಿ ಬೆಂಜ್ ಕಾರು ನಡೆಸಿದ ಕರಾಮತ್ತು ವಿವರ ಇಲ್ಲಿದೆ.


ಬೆಂಗಳೂರು(ಅ.24): ಕೆಲವೇ ಸೆಕೆಂಡುಗಳಲ್ಲಿ ಗಂಟೆಗೆ ನೂರು ಕಿಮೀ ವೇಗ ತಲುಪುವ ಕಾರುಗಳನ್ನು ಚಾಲನೆ ಮಾಡುವುದೇ ಒಂದು ಚೆಂದದ ಅನುಭವ. ಅದರಲ್ಲೂ ವೇಗವಾಗಿ ಜಿಗ್‌ಜಾಗ್‌ ಮಾದರಿಯಲ್ಲಿ ಓಡಿಸುವುದು, ನೂರು ಕಿಮೀ ವೇಗದಲ್ಲಿ ಹೋಗುವಾಗ ಗಕ್ಕನೆ ಬ್ರೇಕ್‌ ಹಾಕುವುದು, ಮತ್ತೆ ತಕ್ಷಣ ಕಾರು ಮುಂದೆ ಓಡಿಸುವುದು ಇವೆಲ್ಲಾ ಅನುಭವಗಳನ್ನು ವಿವರಿಸುವುದು ಕಷ್ಟ. ಕಾರು ಚಾಲನೆ ಮಾಡುವವರಿಗಷ್ಟೇ ಆ ಖುಷಿ. ಬೆಂಗಳೂರಿನ ಮಂದಿ ಈ ಖುಷಿಯನ್ನು ಅನುಭವಿಸಲೆಂದೇ ಐಷಾರಾಮಿ ಕಾರು ತಯಾರಿಕಾ ಕಂಪನಿ ಮರ್ಸಿಡಿಸ್‌ ಬೆಂಜ್‌ ಲಕ್ಸ್‌ ಡ್ರೈವ್‌ ಎಂಬ ಕಾರ್ಯಕ್ರಮ ಆಯೋಜಿಸಿತ್ತು.

ಇದನ್ನೂ ಓದಿ: ಮರ್ಸಿಡೀಸ್ ಬೆಂಝ್ GLE ಖರೀದಿಸಿದ ದ್ರಾವಿಡ್; ಇಲ್ಲಿದೆ ಈ ಕಾರಿನ ವಿಶೇಷತೆ!

Latest Videos

undefined

ಈ ಕಾರ್ಯಕ್ರಮದ ಉದ್ದೇಶ ಎರಡು.
1. ಮರ್ಸಿಡಿಸ್‌ ಬೆಂಜ್‌ನ ಎಸ್‌ಯುವಿ ಮತ್ತು ಸೆಡಾನ್‌ ಕಾರುಗಳ ಸಾಮರ್ಥ್ಯ ಹೇಗಿದೆ ಎನ್ನುವುದು ಪರೀಕ್ಷೆ ಮಾಡುವುದು.
2. ಮರ್ಸಿಡಿಸ್‌ ಬೆಂಜ್‌ ಕಾರುಗಳನ್ನು ತಿಳಿದುಕೊಳ್ಳುವ ನೆಪದಲ್ಲಿ ಸ್ವಲ್ಪ ಹೊತ್ತು ಖುಷಿಯಾಗಿ ಇರುವುದು.

ಇದನ್ನೂ ಓದಿ: ಬೆಂಟ್ಲಿ ಬೆಂಟೆಯಾಗ to ಬೆಂಝ್: ದುಬೈ ಪೊಲೀಸರ ದುಬಾರಿ 'ಕಾರು'ಬಾರು!

ಈ ಕಾರಣಕ್ಕೆ ಬೆಂಜ್‌ ಕಂಪನಿ ಬೆಂಗಳೂರಿನ ನೈಸ್‌ ರಸ್ತೆಯಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಇಲ್ಲಿ ಕಾರು ಓಡಿಸುವವರಿಗೂ ಪಕ್ಕದಲ್ಲಿ ಕೂತು ಕಾರು ಹೇಗೆ ಓಡುತ್ತದೆ ಎಂದು ನೋಡುವವರಿಗೂ ಅವಕಾಶ ಇತ್ತು. ಕಡೆಗೆ ಇಷ್ಟವಾದವರು ಕಾರು ಕೊಳ್ಳುತ್ತಾರೆ. ಬರೀ ನೋಡುವವರು ನೋಡುಗರಾಗಿ ಉಳಿಯುತ್ತಾರೆ. ಆದರೆ ಬೆಂಜ್‌ ಅಲ್ಲಿಗೆ ಬಂದವರಿಗೆ ಒಂದು ವಿಶಿಷ್ಟವಾತಾವರಣ ಸೃಷ್ಟಿಮಾಡಿತ್ತು. ಒಂದೆಡೆ ಪ್ರಸಿದ್ಧ ಶೆಫ್‌ ಸಾರಾ ಟಾಡ್‌ ಅಡುಗೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಇನ್ನೊಂದೆಡೆ ಮ್ಯೂಸಿಕ್‌ ಕಾರ್ಯಕ್ರಮ ನಡೆಯುತ್ತಿತ್ತು. ಮತ್ತೊಂದೆಡೆ ಬೆಂಜ್‌ ಕಾರುಗಳ ಟೆಸ್ಟ್‌ ಡ್ರೈವ್‌ ನಡೆಯುತ್ತಿತ್ತು.

ಬೆಂಜ್‌ನ ಸಿಎಲ್‌ಎ, ಜಿಎಲ್‌ಎ, ಜಿಎಲ್‌ಸಿ, ಜಿಎಲ್‌ಇ, ಜಿಎಲ್‌ಎಸ್‌, ಸಿ-ಕ್ಲಾಸ್‌, ಇ-ಕ್ಲಾಸ್‌ ಸರಣಿಯ ಕಾರುಗಳು ಅಲ್ಲಿದ್ದುವು. ಬಹಳಷ್ಟುಮಂದಿ ಬಂದಿದ್ದರಿಂದ ಸಾಲುಗಟ್ಟಿನಿಂತು ಡ್ರೈವ್‌ ಮಾಡುವ ಅವಕಾಶ ಗಿಟ್ಟಿಸಿಕೊಳ್ಳಬೇಕಾಗಿತ್ತು. ಕಾಯುವ ತಾಳ್ಮೆ ಇದ್ದರೆ ಡ್ರೈವಿಂಗು. ಇಲ್ಲದೇ ಇದ್ದರೆ ನೋಡಿದ್ದಷ್ಟೇ ಭಾಗ್ಯ.

ಈ ಸಂದರ್ಭದಲ್ಲಿ ಬೆಂಜ್‌ ಸಿಇಓ ಮಾರ್ಟಿನ್‌ ಶ್ವೆಂಕ್‌, ‘ಮರ್ಸಿಡಿಸ್‌ ಬೆಂಜ್‌ಗೆ ಬೆಂಗಳೂರಿನಲ್ಲಿ ಬಹಳ ಒಳ್ಳೆಯ ಮಾರುಕಟ್ಟೆ’ ಇದೆ ಎಂದು ಹೊಗಳಿದರು. ಅಲ್ಲಿಗೆ ಬಂದಿದ್ದ ಜನ ಅಹುದಹುದು ಎಂದರು. 

click me!