ಎಪಿ ಸಿಎಂ ಜಗನ್ ಕಾರು ನಿಲ್ಲಿಸಿ, ವಂಚನೆ ಪ್ರಕರಣ ದಾಖಲಿಸಿದ ಪೊಲೀಸ್!

Published : Oct 23, 2019, 01:28 PM ISTUpdated : Oct 23, 2019, 01:32 PM IST
ಎಪಿ ಸಿಎಂ ಜಗನ್ ಕಾರು ನಿಲ್ಲಿಸಿ, ವಂಚನೆ ಪ್ರಕರಣ ದಾಖಲಿಸಿದ ಪೊಲೀಸ್!

ಸಾರಾಂಶ

ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ನಂಬರ್ ಕಾರನ್ನು ತಡೆದ ಪೊಲೀಸರು, ನಿಯಮ ಉಲ್ಲಂಘನೆ, ವಂಚನೆ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿ, ದುಬಾರಿ ದಂಡ ಹಾಕಿದ್ದಾರೆ. 

ಹೈದರಾಬಾದ್(ಅ.23): ಟೋಲ್‌ ಫ್ರೀ, ಸಿಗ್ನಲ್ ಜಂಪ್ ಮಾಡಿದರೂ ದಂಡವಿಲ್ಲ, ಕಾರು ಚಲಿಸುತ್ತಿದ್ದರೆ ಪೊಲೀಸರು ಕೂಡ ಸಲ್ಯೂಟ್ ಹೊಡೆಯುತ್ತಿದ್ದರು. ಕಾರಣ ಈ ಕಾರಿನ ನಂಬರ್ ಪ್ಲೇಟ್ ಮೇಲೆ AP CM JAGAN ಎಂದು ನಮೂದಿಸಲಾಗಿದೆ. ಹೀಗಾಗಿ ಎಲ್ಲೇ ಹೋದರು ವಿವಿಐಪಿ ಟ್ರೀಟ್‌ಮೆಂಟ್. ಹಾಗಂತ ಈ ಕಾರು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗಮೋಹನ್ ರೆಡ್ಡಿಗೆ ಸೇರಿದ್ದಲ್ಲ. ಹೀಗೆ ಆರಾಮವಾಗಿ ತಿರುಗಾಡುತ್ತಿದ್ದ AP CM JAGAN ನಂಬರ್ ಪ್ಲೇಟ್ ಕಾರು ಕೊನೆಗೂ ಪೊಲೀಸರಿಗೆ ಅತಿಥಿಯಾಗಿದೆ. 

ಇದನ್ನೂ ಓದಿ: ಸಿಎಂ ಜಗನ್ ಮೋಹನ್ ರೆಡ್ಡಿಗೆ ಬುಲೆಟ್ ಪ್ರೂಫ್ ಕಾರು- ಬೆಲೆ ಎಷ್ಟು?

ಟೋಲ್ ಹಣ ಬಚಾವ್ ಮಾಡಲು, ಪೊಲೀಸರು ಹಿಡಿಯದಿರಲು ಹಲವರು ಪೊಲೀಸ್, MLA,ಜಡ್ಜ್, ಪ್ರೆಸ್ ಸ್ಟಿಕ್ಕರನ್ನು ತಮ್ಮ ವಾಹನದ ಮೇಲೆ ಹಾಕುತ್ತಾರೆ. ಈ ರೀತಿ ಸ್ಟಿಕ್ಕರ್ ಇದೀಗ ಸಾಮಾನ್ಯವಾದ ಕಾರಣ, ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಎಂ ಹರಿ ರಾಕೇಶ್ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮಕಾರಿಗೆ AP CM JAGAN ಎಂದು ನಂಬರ್ ಪ್ಲೇಟ್ ಮಾಡಿಸಿದ್ದಾರೆ. ಕಾರಿನ ಮುಂಭಾಗ  ಹಾಗೂ ಹಿಂಭಾಗದಲ್ಲಿ IND ನಂಬರ್ ಪ್ಲೇಟ್ ಮಾಡಿಸಿದ್ದಾರೆ.

ಇದನ್ನೂ ಓದಿ: ಸಿಎಂ ಜಗನ್ ಮೋಹನ್ ರೆಡ್ಡಿಗೆ ಸಪೋರ್ಟ್- ಬೆಂಬಲಿಗರ ಕಾರು ಸೀಝ್!

ಮೇಲ್ನೋಟಕ್ಕ ಇದು ಮುಖ್ಯಮಂತ್ರಿ ಜಗಮೋಹನ್ ರೆಡ್ಡಿಗೆ ಸೇರಿದ ಕಾರು ಅನ್ನೋ ರೀತಿಯಲ್ಲೇ ನಂಬರ್ ಪ್ಲೇಟ್ ಮಾಡಿಸಿದ್ದಾನೆ. ಈ ನಂಬರ್ ಪ್ಲೇಟ್‌ನಿಂದ ಹರಿ ರಾಕೇಶ್, ಟೋಲ್ ಕಟ್ಟದೇ ಸಂಚರಿಸುತ್ತಿದ್ದ. ಹಲವೆಡೆ ಪೊಲೀಸರು ಕೂಡ ಸಿಎಂಗೆ ಸೇರಿದ ಕಾರು ಎಂದು ಯಾವುದೇ ತಪಾಸಣೆ ಮಾಡದೇ ಕಳುಹಿಸಿದ್ದಾರೆ.

ಇದನ್ನೂ ಓದಿ: ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ..! ನಂಬರ್ ಪ್ಲೇಟ್ ಮೇಲೆ ಏನೂ ಬರೆಯಂಗಿಲ್ಲ!

ಹೈದರಾಬಾದ್‌ನಲ್ಲಿ ಪ್ರತಿ ನಿತ್ಯದ ಚೆಕಿಂಗ್ ಮಾಡುತ್ತಿದ್ದ ಟ್ರಾಫಿಕ್ ಪೊಲೀಸರಿಗೆ ಅಚ್ಚರಿ ಕಾದಿತ್ತು. AP CM JAGAN ನಂಬರ್ ಪ್ಲೇಟ್ ಕಾರೊಂದು  ಬರುತ್ತಿತ್ತು. ಹರಿ ರಾಕೇಶ್ ಎಂದಿನಂತೆ ಪೊಲೀಸರು ಇಲ್ಲೀವರೆಗೆ ತಡೆದಿಲ್ಲ. ಇವತ್ತು ಭಿನ್ನವಲ್ಲ ಎಂದುಕೊಂಡಿದ್ದ. ಆದರೆ ಪೊಲೀಸರು ಕಾರನ್ನು ನಿಲ್ಲಿಸಿ ತಪಾಸಣೆ ಮಾಡಿದ್ದಾರೆ. 

ಕಾರಿನ ಡಿಫಾಲ್ಟ್ ನಂಬರ್, ಟ್ರಾಫಿಕ್ ನಿಯಮ ಉಲ್ಲಂಘನೆ, ಮುಖ್ಯಮಂತ್ರಿ ಹೆಸರಲ್ಲಿ ವಂಚನೆ ಸೇರಿದಂತೆ ಹಲವು ಪ್ರಕರಣ ದಾಖಲಿಸಿದ್ದಾರೆ. ಕಾರನ್ನು ವಶಕ್ಕ ಪಡೆದು,ದುಬಾರಿ ದಂಡ ಕೂಡ ಹಾಕಿದ್ದಾರೆ. 
 

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ