ಹೊಸ ಅತಾರದಲ್ಲಿ ಬಜಾಜ್ ಪಲ್ಸರ್ ಕ್ಲಾಸಿಕ್ ಬಿಡುಗಡೆ!

Published : Nov 20, 2018, 05:18 PM ISTUpdated : Nov 20, 2018, 05:22 PM IST
ಹೊಸ ಅತಾರದಲ್ಲಿ ಬಜಾಜ್ ಪಲ್ಸರ್ ಕ್ಲಾಸಿಕ್ ಬಿಡುಗಡೆ!

ಸಾರಾಂಶ

ಬಜಾಜಾ ಆಟೋ ಕಂಪೆನಿ ಭಾರತದಲ್ಲಿ ಪಲ್ಸರ್ 150 ಕ್ಲಾಸಿಕ್ ಬೈಕ್ ಬಿಡುಗಡೆ ಮಾಡಿದೆ. ಕೆಲ ಬದಲಾವಣೆ, ಹಲವು ಫೀಚರ್ಸ್‌ನೊಂದಿಗೆ ಪಲ್ಸರ್ ಸ್ಪೆಷಲ್ 150 ಬಿಡುಗಡೆಯಾಗಿದೆ. ಇದರ ವಿಶೇಷತೆ, ಬೆಲೆ ಕುರಿತು ವಿವರ ಇಲ್ಲಿದೆ ,  

ಮುಂಬೈ(ನ.03): ಬಜಾಜ್ ಆಟೋ ಕಂಪೆನಿಯ ಪ್ರಸಿದ್ಧ ಪಲ್ಸರ್ ಬೈಕ್ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಹಲವು ವಿಶೇಷತೆಗಳೊಂದಿಗೆ ಪಲ್ಸರ್ 150 ಕ್ಲಾಸಿಕ್  ಬೈಕ್ ಬಿಡುಗಡೆಯಾಗಿದೆ. ನೂತನ ಪಲ್ಸರ್ ಬೈಕ್‌ನಲ್ಲಿ ವಿನ್ಯಾಸ ಹಾಗೂ ಕೆಲ ಬದಲಾವಣೆ ಮಾಡಲಾಗಿದೆ.

ಪೆಟ್ರೋಲ್ ಟ್ಯಾಂಕ್ ಮೇಲಿನ ಪಲ್ಸಾರ್ ಲೋಗೋ, ವೀಲ್ಹ್ ರಿಮ್ಸ್, ಸೆಂಟ್ರಲ್ ಪ್ಯಾನಲ್ ಹಾಗೂ 150 ಡೆಕಾಲ್ ಕೆಂಪು ಬಣ್ಣದಿಂದ ಕೂಡಿದೆ. ಹೊಸ ಬಣ್ಣದಿಂದ ಪಲ್ಸರ್ ಲುಕ್ ಬದಲಾಗಿದೆ. ಇದನ್ನ ಹೊರತು ಪಡಿಸಿದರೆ ಹೆಚ್ಚಿನ ಬದಲಾವಣೆಗಳಿಲ್ಲ.

ಎಂಜಿನ್‌ ಹಾಗೂ ಮೆಕಾನಿಕ್ ವಿಭಾಗದಲ್ಲಿ ಯಾವುದೇ ಬದಲಾವಣೆಗಳಿಲ್ಲ. 149 ಸಿಸಿ, ಸಿಂಗಲ್ ಸಿಲಿಂಡರ್, 14 ಬಿಹೆಚ್‌ಪಿ, 8000 ಆರ್‌ಪಿಎಂ, 13.4nm ಟಾರ್ಕ್ ಉತ್ಪಾದಿಸಲಿದೆ. 5 ಸ್ಪೀಡ್ ಗೇರ್ ಬಾಕ್ಸ್, ಫ್ರಂಟ್ ಹಾಗೂ ರೇರ್ ಡಿಸ್ಕ್ ಬ್ರೇಕ್ ಕೂಡ ಹೊಂದಿದೆ. ನೂತನ ಪಲ್ಸರ್ ಕ್ಲಾಸಿಕ್ ಬೆಲೆ 64,998 ರೂಪಾಯಿ(ಎಕ್ಸ ಶೋ ರೂಂ).

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ