ಬ್ರಿಟೀಷ್ ಕಂಪನಿ ಎಂಜಿ ಮೋಟಾರ್ಸ್ ಇದೀಗ ಭಾರತದಲ್ಲಿ ಎಲೆಕ್ಟ್ರಿಕ್ SUV ಕಾರು ಬಿಡುಗಡೆ ಮಾಡಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 428 ಕಿ.ಮೀ ಪ್ರಯಾಣಿಸಬಲ್ಲ ಈ ಕಾರು ಕೇವಲ 30 ನಿಮಿಷದಲ್ಲಿ ಶೇಕಡಾ 80 ರಷ್ಟು ಬ್ಯಾಟರಿ ಚಾರ್ಜ್ ಆಗಲಿದೆ. ಈ ಕಾರಿನ ಬೆಲೆ, ಇದರ ವಿಶೇಷತೆ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ನವದೆಹಲಿ(ನ.20): ಬ್ರಿಟೀಷ್ ಮೂಲದ ಎಂಜಿ ಮೋಟಾರ್ಸ್ ಇದೀಗ ಭಾರತಕ್ಕೆ ಕಾಲಿಡುತ್ತಿದೆ. ಎಲೆಕ್ಟ್ರಿಕ್ SUV ಕಾರು ಬಿಡುಗಡೆ ಮುಂದಾಗಿರುವ ಎಂಜಿ ಸಂಸ್ಥೆ, ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಸೇರಿದಂತೆ ಇತರ ಎಲೆಕ್ಟ್ರಿಕ್ ಕಾರಿಗೆ ಪೈಪೋಟಿ ನೀಡಲಿದೆ.
undefined
ಎಂಜಿ eZs ಮಾಡೆಲ್ SUV ಕಾರು ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 428 ಕಿ.ಮೀ ಪ್ರಯಾಣಿಸಲಿದೆ. ಇನ್ನು 30 ನಿಮಿಷದಲ್ಲಿ ಶೇಕಡಾ 80 ರಷ್ಟು ಬ್ಯಾಟರಿ ಚಾರ್ಜ್ ಆಗಲಿದೆ. 110 kW ಮೋಟರ್ ಹೊಂದಿರು ಈ SUV ಕಾರು 150ps ಪವರ್ ಹಾಗೂ 350Nm ಟಾರ್ಕ್ ಉತ್ಪಾದಿಸಲಿದೆ.
ಕಾರಿನ ಬಿಡಿಭಾಗಗಳನ್ನ ಭಾರತದಲ್ಲೇ ಜೋಡಿಸಲಾಗುತ್ತೆ. ಇನ್ನು ಕಾರಿನ ಬಲಿಷ್ಠ ಬ್ಯಾಟರಿ ಚೀನಾದಿಂದ ಆಮದಾಗಲಿದೆ ಎಂದು ಎಂಜಿ ಮೋಟಾರ್ಸ್ ಹೇಳಿದೆ. 2019ರಲ್ಲಿ ಎಂಜಿ ಮೋಟಾರ್ಸ್ ಬೌಜನ್ 350 ಕಾರು ಬಿಡುಗಡೆ ಮಾಡಲಿದೆ. ಇದಾದ ಬಳಿಕ 2020ರಲ್ಲಿ ಎಂಜಿ eZs ಮಾಡೆಲ್ SUV ಎಲೆಕ್ಟ್ರಿಕ್ ಬಿಡುಗಡೆಯಾಗಲಿದೆ. ಇದರ ಬೆಲೆ 20 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.