ಭಾರತದಲ್ಲಿ ಮಿಂಚಿ ಮರೆಯಾಗಿದ್ದ ಜಾವಾ ಮೋಟರ್ ಬೈಕ್ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಅದ್ಧೂರಿಯಾಗಿ ಬಿಡುಗಡೆಗೊಂಡಿರುವ ಜಾವಾ ಬೈಕ್ ಬುಕಿಂಗ್ ಆರಂಭಗೊಂಡಿದೆ.
ಮುಂಬೈ(ನ.20): ಮಹೀಂದ್ರ ಹಾಗೂ ಕ್ಲಾಸಿಕ್ ಲೆಜೆಂಡ್ ಸಹಯೋಗದೊಂದಿಗೆ ಈಗಾಗಲೇ ಜಾವಾ ಮೋಟರ್ ಬೈಕ್ ಭಾರತದಲ್ಲಿ ಬಿಡುಗಡೆಯಾಗಿದೆ. ಮೂರು ವೇರಿಯೆಂಟ್‌ಗಳಲ್ಲಿ ಜಾವಾ ಬೈಕ್ ಬಿಡುಗಡೆಯಾಗಿದೆ. ಈ ಮೂಲಕ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿ ಪೈಪೋಟಿ ನೀಡಲು ಸಜ್ಜಾಗಿದೆ.
undefined
ಜಾವಾ ಬೈಕ್ ಖರೀದಿಸ ಬಯಸುವವರು ಬುಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಆನ್‌ಲೈನ್ ಮೂಲಕ ಬುಕ್ ಮಾಡಿಕೊಳ್ಳುವವರು 5,000 ರೂಪಾಯಿ ನೀಡಿ ಜಾವಾ ಬೈಕ್ ಬುಕ್ ಮಾಡಿಕೊಳ್ಳಬಹುದು. ಇದು ಬುಕಿಂಗ್ ದೃಢೀಕರಣಕ್ಕಾಗಿ ಮಾತ್ರ. ಹೀಗಾಗಿ ಈ ಮೊತ್ತವನ್ನ ಮರಳಿಸಲಾಗುವುದು ಎಂದು ಮಹೀಂದ್ರ ಹೇಳಿದೆ.
ಬೈಕ್ ಬುಕ್ ಮಾಡಿದವರಿಗೆ 2019ರ ಜನವರಿಯಲ್ಲಿ ಕೈಸೇರಲಿದೆ. ಭಾರತದಲ್ಲಿ 105 ಔಟ್‌ಲೆಟ್‌ಗಳಲ್ಲಿ ಜಾವಾ ಬೈಕ್ ಗ್ರಾಹಕರಿಗೆ ಸಿಗಲಿದೆ. ಜಾವಾ 42, ಜಾವಾ 300 ಹಾಗೂ ಜಾವಾ ಪರೇಕಾ ಮೂರು ವೇರಿಯೆಂಟ್‌ಗಳಲ್ಲಿ ಬೈಕ್ ಬಿಡುಗಡೆಯಾಗಿದೆ.
ಜಾವಾ 42 ಬೈಕ್ ಬೆಲೆ 1.55 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ), ಜಾವಾ 300 ಬೈಕ್ ಬೆಲೆ 1.64 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ), ಜಾವಾ ಪೆರಾಕ್(ಕಸ್ಟಮೈಸಡ್ ಬಾಬರ್) ಬೈಕ್ ಬೆಲೆ 1.89 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ).