ಬಜಾಜ್-ಮಹೀಂದ್ರಾಗೆ ಪೈಪೋಟಿ- ಶೀಘ್ರದಲ್ಲೇ ಬರಲಿದೆ ಕೆಟೋ ಆಟೋ ರಿಕ್ಷಾ!

By Web DeskFirst Published Dec 22, 2018, 7:43 PM IST
Highlights

ಭಾರತದಲ್ಲಿ ಆಟೋ ರಿಕ್ಷಾ ಕ್ಷೇತ್ರ ಹೆಚ್ಚಿನ ಪೈಪೋಟಿ ಇಲ್ಲದೆ ಮುಂದುವರಿಯುತ್ತಿದೆ. ಇದೀಗ ಇದಕ್ಕಕೆ ಪೈಪೋಟಿ ಹೆಚ್ಚಾಗುತ್ತಿದೆ. ಬಜಾಜ್ ಹಾಗೂ ಮಹೀಂದ್ರಗೆ ಸೆಡ್ಡು ಹೊಡೆಯಲು ಕೆಟೋ ಆಟೋ ರಿಕ್ಷಾ ಭಾರತದಲ್ಲಿ ಬಿಡುಗಡೆಯಾಗಲಿದೆ.

ನವದೆಹಲಿ(ಡಿ.22): ಆಟೋ ರಿಕ್ಷಾ ಕ್ಷೇತ್ರದಲ್ಲಿ ಬಜಾಜ್ ಅಗ್ರಗಣ್ಯ. ಇದಕ್ಕೆ ಪೈಪೋಟಿ ನೀಡುಲ ಮಹೀಂದ್ರ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಶೀಘ್ರದಲ್ಲೇ ಮಹೀಂದ್ರ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆಯಾಗಲಿದೆ. ಇದರ ಬೆನ್ನಲ್ಲೇ ಮಹೀಂದ್ರ ಹಾಗೂ ಬಜಾಜ್ ಪೈಪೋಟಿ ನೀಡಲು ಇದೀಗ ಕೆಟೋ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆಗೆ ಮುಂದಾಗಿದೆ.

ಇದನ್ನೂ ಓದಿ: ಮಹೀಂದ್ರ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ-ಪೈಪೋಟಿ ಶುರು!

ಭಾರತ ETO ಮೋಟಾರ್ಸ್, ಹಾಗೂ ಹಾಂಕ್ ಕಾಂಗ್ ಮೂಲದ ಕ್ಯೊಟೋ ಗ್ರೀನ್ ಟೆಕ್ನಾಲಜಿ ಜಂಟಿಯಾಗಿ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಡಲು ಮುಂದಾಗಿದೆ. ಇದಕ್ಕಾಗಿ ಮೊದಲ ಹಂತದಲ್ಲಿ ಬರೋಬ್ಬರಿ 70 ಕೋಟಿ ರೂಪಾಯಿ ಬಂಡವಾಳ ಹೂಡಿ ಮಾಡಿದೆ. ಒಟ್ಟು 3 ವೇರಿಯೆಂಟ್‌ಗಳಲ್ಲಿ ಆಟೋ ರಿಕ್ಷಾ ಬಿಡುಗಡೆಯಾಗಲಿದೆ.

ಇದನ್ನೂ ಓದಿ:2019 ರಿಂದ ಆಟೋ ರಿಕ್ಷಾಗೆ ಹೊಸ ನೀತಿ- ಸಂಕಷ್ಟದಲ್ಲಿ ಮಾಲೀಕರು!

ಕ್ಯೊಟೋ 3, ಕ್ಯೊಟೋ 5 ಹಾಗೂ ಕ್ಯೊಟೊ ಕಾರ್ಗೋ ಎಂಬ ಮೂರು ವೇರಿಯೆಂಟ್‌ಗಳಲ್ಲಿ ರಿಕ್ಷಾ ಬಿಡುಗಡೆಯಾಗಲಿದೆ. ಕ್ಯೊಟೋ 3, ಕ್ಯೊಟೋ 5 ಮೂರು ಸೀಟರ್ ಆಟೋ ರಿಕ್ಷಾವಾಗಿದ್ದು, ಕ್ಯೊಟೊ ಕಾರ್ಗೋ 5 ಸೀಟಿನ ವಾಹನವಾಗಿದೆ. ಈ ಆಟೋ ರಿಕ್ಷಾದಲ್ಲಿ ಪ್ರಯಾಣಿಕ ಸುರಕ್ಷತೆಗೂ ಅದ್ಯತೆ ನೀಡಿದೆ. ಪ್ರಯಾಣಿಕರಿಗೂ ಸೀಟ್ ಬೆಲ್ಟ್ ಕಲ್ಪಿಸಲಾಗಿದೆ. 2019ರಲ್ಲಿ ನೂತನ ಕೆಟೋ ಆಟೋ ಭಾರತದ ರಸ್ತೆಗೆ ಇಳಿಯಲಿದೆ. ಆದರೆ ಇದರ ಬೆಲೆ, ಚಾರ್ಜ್ ಹಾಗೂ ಮೈಲೇಜ್ ಕುರಿತು ಮಾಹಿತಿಯನ್ನ ಕಂಪೆನಿ ಬಹಿರಂಗ ಪಡಿಸಿಲ್ಲ.

ಇದನ್ನೂ ಓದಿ:ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ದಿ ಗ್ರೇಟ್ ಖಲಿ ಜಾಲಿ ರೈಡ್!

click me!