ಬಜಾಜ್ ಚೇತಕ್ ಸ್ಕೂಟರ್‌ಗೆ ಟ್ರಕ್ ಟಯರ್ - ಇದು ವಿಚಿತ್ರ ಸ್ಕೂಟರ್!

By Web Desk  |  First Published Mar 16, 2019, 4:26 PM IST

ಬಜಾಜ್ ಚೇತಕ್ ಸ್ಕೂಟರ್‌ನ್ನು ವಿಚಿತ್ರ ರೀತಿಯಲ್ಲಿ ಮಾಡಿಫಿಕೇಶನ್ ಮಾಡಿಸಿ ಭಾರಿ ಸುದ್ದಿಯಾಗಿದೆ. ಟ್ರಕ್ ಚಕ್ರಗಳನ್ನು ಅಳವಡಿಸಿ ಹೊಸ ರೀತಿ ಮಾಡಿಫಿಕೇಶನ್ ಮಾಡಲಾಗಿದೆ. ಇಲ್ಲಿದೆ ವಿಶಿಷ್ಠ ಮಾಡಿಫಿಕೇಶನ್ ಮಾಹಿತಿ.


ಪಂಜಾಬ್(ಮಾ.16): ವಾಹನಗಳನ್ನ ಖರೀದಿಸಿ ಮಾಡಿಫೈ ಮಾಡುವವರ ಸಂಖ್ಯೆ ಕಡಿಮೆಯೇನಿಲ್ಲ. ವಾಹನ ಹೆಚ್ಚು ಲುಕ್ ಹಾಗೂ ಸ್ಟೈಲೀಶ್ ಆಗಿ ಕಾಣಲು ಹೀಗೆ ಮಾಡಿಫಿಕೇಶನ್ ಮಾಡಿಸಿಕೊಳ್ಳುತ್ತಾರೆ. ಕೆಲವರು ವಿಚಿತ್ರವಾಗಿ ಮಾಡಿಫೈ ಮಾಡಿ ಸುದ್ದಿಯಾಗುತ್ತಾರೆ. ಇದೀಗ ಪಂಜಾಬ್‌ನಲ್ಲಿ ಬಜಾಜ್ ಚೇತಕ್ ಸ್ಕೂಟರ್‌ನ್ನು ಮಾಡಿಫಿಕೇಶನ್ ಮಾಡಿಸಿರುವುದು ಭಾರಿ ಸುದ್ದಿಯಾಗಿದೆ.

ಇದನ್ನೂ ಓದಿ: ಹೊಸ ಅವತಾರದಲ್ಲಿ ಹೊಂಡಾ CB ಯುನಿಕಾರ್ನ್ ಬೈಕ್ ಬಿಡುಗಡೆ!

Tap to resize

Latest Videos

undefined

ಬಜಾಜ್ ಚೇತಕ್ ಸ್ಕೂಟರ್ ರಸ್ತೆಯಲ್ಲಿ ಕಾಣಸಿಗುವುದು ಕಡಿಮೆ. ಹಳೇ ಸ್ಕೂಟರ್ ಮುಂದಿನ ಚಕ್ರ ತೆಗೆದು ಟ್ರಕ್ ಟೈಯರ್ ಅಳವಡಿಸಲಾಗಿದೆ. ಮುಂಭಾಗದಲ್ಲಿ 2 ಚಕ್ರ ಅಳವಡಿಸಿ ವಿಚಿತ್ರ ರೀತಿಯಲ್ಲಿ ಮಾಡಿಫೈ ಮಾಡಲಾಗಿದೆ.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್‌ಗೆ ಪೈಪೋಟಿ -ಬರುತ್ತಿದೆ ಬಜಾಜ್ KTM ಬೈಕ್!

ಈ ವಿಚಿತ್ರ ಸ್ಕೂಟರ್ ಇದೀಗ ಪಂಜಾಬ್‌ನಲ್ಲಿ ಎಲ್ಲರ ಕೇಂದ್ರ ಬಿಂದುವಾಗಿದೆ. ಆದರೆ ವಾಹನಗಳನ್ನ ಮಾಡಿಫೈ ಮಾಡಿಸುವುದು ನಿಯಮ ಬಾಹಿರವಾಗಿದೆ. ಈ ಕುರಿತು ಈಗಾಗಲೆ ಸ್ಪಷ್ಟ ಸೂಚನೆ ನೀಡಲಾಗಿದೆ. ಇಷ್ಟಾದರೂ ವಾಹನಗಳ ಮಾಡಿಫಿಕೇಶನ್ ಕಡಿಮೆಯಾಗಿಲ್ಲ.

click me!